ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು ಪೀಣ್ಯ ದಾಸರಹಳ್ಳಿ: ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಅಭಿಮಾನ ಕ್ಕೆ ಚಿರಋಣಿ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಮುನಿರಾಜು ಹೇಳಿದರು.
ರಾಜಗೋಪಾಲ್ ನಗರ ವಾರ್ಡಿನ ಐ.ಪಿ.ನಗರದ ಜಿ.ಟಿ.ರೆಸಿಡೆನ್ಸಿ ಬಡಾವಣೆಯ ನಿವಾಸಿಗಳ ವತಿಯಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಕ್ಷೇತ್ರದಲ್ಲಿ ಐದು ವರ್ಷಗಳಿಂದ ಅಭಿವೃದ್ಧಿ ಕುಂಠಿತ ಎಂದು ಕ್ಷೇತ್ರದ ಜನತೆ ಆಗಾಗ ಹೇಳುತ್ತಾ ಇದ್ದರು ಅದರಿಂದ ನನ್ನನ್ನು ಗೆಲ್ಲಿಸಲಿಕ್ಕೆ ತಾವುಗಳು ಶ್ರಮ ವಹಿಸಿ ನನಗೆ ಶಾಸಕನಾಗಿ ಆಯ್ಕೆಮಾಡಿದ್ದಿರಿ ನಿಮ್ಮ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದೇನೆ ಎಂದು ಅಭಿನಂದನಾ ಸ್ವೀಕರಿಸಿ ಶಾಸಕ ಎಸ್ ಮುನಿರಾಜು ಮಾತನಾಡಿ ಜಿ.ಟಿ.ರೆಸಿಡೆನ್ಸಿ ಬಡಾವಣೆಯ ಎಲ್ಲಾ ನಿವಾಸಿಗಳಿಗೆ ಶಾಸಕ ಎಸ್ ಮುನಿರಾಜು ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಬ ಹೆಚ್.ಎನ್.ಗಂಗಾಧರ್, ಬಿಜೆಪಿ ಮುಖಂಡ ರಾದ ದಿನೇಶ್,ವಿಜಯ ಕುಮಾರ್, ಗೋಪಾಲ್, ವೆಂಕಟೇಶ್, ಭಾರತ್ ಜಿ.ಟಿ.ರೆಸಿಡೆನ್ಸಿ ನಿವಾಸಿಗಳು ಐ ಪಿ ನಗರದ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.