ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ನಾಡ ಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ -ಜಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ ಎನ್ ಜಗದೀಶ್ 

ಬೆಂಗಳೂರು: ಪೀಣ್ಯ ದಾಸರಹಳ್ಳಿ ಕೆರೆಗಳನ್ನು ಕಟ್ಟಿಸಿ ಬಾವಿಗಳನ್ನು ತೆಗೆಸಿ, ದೇವಸ್ಥಾನ ಗಳನ್ನು ನಿರ್ಮಿಸಿ ಜನರ ಬದುಕಿಗಾಗಿ ವ್ಯಾಪಾರ ವಹಿವಾಟಿನ ಪೇಟೆಗಳ ಸ್ಥಾಪಿಸುವ  ಮೂಲಕ  ಬೆಂಗಳೂರು ಕಟ್ಟಿದ ನಾಡ ಪ್ರಭು ಕೆಂಪೇಗೌಡರು ಎಂದು ಘಂಟಾಘೋಷವಾಗಿ ಹೇಳುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ ಎನ್ ಜಗದೀಶ್ ಹೇಳಿದರು.
ಬೆಂಗಳೂರು ನಗರ ಗವೀಪುರದಲ್ಲಿ ನಾಡ ಪ್ರಭು ಕೆಂಪೇಗೌಡರ  514 ನೇ ಜನ್ಮದಿನವನ್ನು ಕೆಂಪೇಗೌಡ ನಗರದಲ್ಲಿ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಬಿ ಎನ್ ಜಗದೀಶ್ ಮಾತಾಡಿದರು.
(ಗವೀಪುರದಲ್ಲಿ)ಜಯ ಕರ್ನಾಟಕ ಸಂಘಟನೆಯ  ಬೆಂಗಳೂರು ಜಿಲ್ಲಾ ಅಧ್ಯಕ್ಷ ಯೋಗಾನಂದ್ ಮತ್ತು  ಪದಾದಿಕಾರಿಗಳು ಸರ್ವ ಸದಸ್ಯರ ವತಿಯಿಂದ ಆಚರಣೆ ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಪಿ ಸಿ ಮೋಹನ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಸೇರಿದಂತೆ ಸಾರ್ವಜನಿಕ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News