ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಬಾಗಲಗುಂಟೆ ವಾರ್ಡ್ ಜೆ.ಡಿ.ಎಸ್ ಕಾರ್ಯಕರ್ತರ ಸಭೆ.""
ಪೀಣ್ಯ ದಾಸನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಆರ್ ಮಂಜುನಾಥ್ ರವರ ಕಚೇರಿಯಲ್ಲಿ ಕರೆಯಲಾಗಿದ್ದ ಬಾಗಲಗುಂಟೆ ವಾರ್ಡ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನ ಉದ್ದೇಶಿಸಿ ಮಾತನಾಡಿದ , ಕಾರ್ಯಕರ್ತರು ಎಂದಿಗೂ ಎದೆಗುಂದುವ ಅಗತ್ಯವಿಲ್ಲ, ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಕಷ್ಟ ಸುಖಗಳಲ್ಲಿ ಎಂದಿನಂತೆ ತೊಡಗಿಕೊಳ್ಳುತ್ತೇನೆ. ಸರ್ಕಾರದ ಯೋಜನೆಗಳು ನಿಮಗೂ ತಲುಪುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಮುಂಬರುವ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಹಿರಿಯ ಮುಖಂಡರಾದ ಅಂದಾನಪ್ಪ, ಕ್ಷೇತ್ರದ ಅಧ್ಯಕ್ಷರಾದ ಮುನಿಸ್ವಾಮಣ್ಣ, ಪ್ರಧಾನ ಕಾರ್ಯದರ್ಶಿಯಾದ ಬಿ ಏನ್ ಜಗದೀಶ್, ವಾರ್ಡ್ ಅಧ್ಯಕ್ಷರಾದ ಹನುಮಂತರಾಜು, ಜೆಡಿಎಸ್ ಹಿರಿಯ ಮುಖಂಡರಾದ ವೇಣುಗೋಪಾಲಣ್ಣ, ನಾಗರಾಜಣ್ಣ, ಗೋವಿಂದಪ್ಪ, ಮಹಿಳಾಧ್ಯಕ್ಷರಾದ ಲಲಿತಮ್ಮ, ಛಾಯಾ, ವಾರ್ಡ್ ನ ಎಲ್ಲಾ ಹಿರಿಯ ಮುಖಂಡರು ಮುಂಚೂಣಿ ನಾಯಕರು ಕಾರ್ಯಕರ್ತರು ಹಾಜರಿದ್ದರು.