ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"ಕಾಂಗ್ರೆಸ್ ಅಭ್ಯರ್ಥಿ ಜಿ. ಧನಂಜಯ್ ಅವರಿಂದ ರೋಡ್ ಶೋ"
ಬೆಂಗಳೂರು : ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಮುಖ್ಯ ರಸ್ತೆ ಮಾರ್ಗವಾಗಿ ಡೈಲಿ ಸರ್ಕಲ್ ಪೀಣ್ಯ 2ನೇ ಹಂತ ಅಂದರಹಳ್ಳಿ ಮುಖ್ಯ ರಸ್ತೆ ಮಾರುತಿ ನಗರ, ಫ್ರೆಂಡ್ಸ್ ಕಾಲೊನಿ, ಮಸೀದಿ ರಸ್ತೆ, ಶಿವಾನಂದ ನಗರ, ಹೆಗ್ಗನಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ಎಲ್ಲಾ ಬಡಾವಣೆಗಳಲ್ಲಿ ತೆರೆದ ವಾಹನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಧನಂಜಯ, ಹಿರಿಯ ನಾಯಕ ಕೆ ಸಿ ಅಶೋಕ್, ಹೆಗ್ಗನಹಳ್ಳಿ ವಾರ್ಡಿನ ಕಾಂಗ್ರೆಸ್ ಪ್ರಭಾವಿ ಯುವ ಮುಖಂಡ ಲಕ್ಷ್ಮೀಸಾಗರ್, ಎನ್.ರಮೇಶ್ ಗೌಡ, ಅಲ್ಪಸಂಖ್ಯಾತರ ಮುಖಂಡ ಇಂರಾನ್, ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ರೋಡ್ ಶೋ ದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಧನಂಜಯ್ ಮಾತನಾಡಿ ಬಿಜೆಪಿ ಸರ್ಕಾರಗಳು ಭ್ರಷ್ಟಾಚಾರ ಮುಳುಗಿ ಹೋಗಿವೆ ಬಡವರ ಕೂಲಿ ಕಾರ್ಮಿಕರ ದಿನ ದಲಿತರ ಪರವಾಗಿ ಬಿಜೆಪಿ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲದ ಮತದಾರರಿಗೆ ಒಳ್ಳೆಯ ಅವಕಾಶ ಬಂದಿದೆ ಬಿಜೆಪಿ ಸರ್ಕಾರ ಕಿತ್ತು ಹಾಕ ಬೇಕಾದರೆ ನಿಮ್ಮೆಲ್ಲರ ಕೈಯಲ್ಲಿದೆ ಕೈ ಮತ ಹಾಕಿ ನನ್ನನ್ನು ಶಾಸಕನಾಗಿ ಮಾಡಿರಿ ಎಂದು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಹೆಗ್ಗನಹಳ್ಳಿ ವಾರ್ಡಿನ ಕಾಂಗ್ರೆಸ್ ಯುವ ಮುಖಂಡ ಲಕ್ಷ್ಮೀಸಾಗರ್ ಮಾತನಾಡಿ ನಮ್ಮ ಕ್ಷೇತ್ರಕ್ಕೆ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರ 2023ರ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಧನಂಜಯ್ ಅವರು ವಿದ್ಯಾವಂತರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಚುನಾವಣೆ ಕೇವಲ 6ದಿನಗಳ ಮಾತ್ರ ಇದೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತ ರು ಎಲ್ಲರೂ ಮನೆ ಮನೆಗೆ ಭೇಟಿ ನೀಡಿ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಪೆಟ್ರೋಲ್ ಡೀಸೆಲ್,ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಹೀಗೆ ಅನೇಕ ಜನ ಪರ ಕೆಲಸ ಮಾಡಿದ ಕಾಂಗ್ರೆಸ್ ಸರ್ಕಾರದ ಬಗ್ಗೆ ಮತಬಾಂದವರಿಗೆ ಮನಮುಟ್ಟುವಂತೆ ತಿಳಿಸಬೇಕು ಎಂದು ಲಕ್ಷ್ಮೀಸಾಗರ್ ರೋಡ್ ಶೋ ದಲ್ಲಿ ಸಾರ್ವಜನಿಕರಿಗೆ ಮನವರಿಕೆ ಮಾಡಿ ಕೊಟ್ಟು ಮಾತಾಡಿದರು.