ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

*ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಬೆಂಬಲಿಸಿ ಯುವಕರುಗಳಿಂದ ದ್ವಿಚಕ್ರ ವಾಹನಗಳಲ್ಲಿ ಜಾಥಾ* 

ಬೆಂಗಳೂರು :  ಯಲಹಂಕ  ವಿಧಾನಸಭಾ ಕ್ಷೇತ್ರದಲ್ಲಿ  ಭಾನುವಾರದಂದು ಮಧ್ಯಾಹ್ನ, ಯಲಹಂಕ ಕ್ಷೇತ್ರದ ಹಾಲಿ ಶಾಸಕರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ತಿರುಮಲ ತಿರುಪತಿ ದೇವಸ್ಥಾನದ ಆಡಳಿತ  ಮಂಡಳಿಯ ಸದಸ್ಯರು ಹಾಗೂ  ಯಲಹಂಕ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯೂ ಆಗಿರುವ  ಎಸ್. ಆರ್. ವಿಶ್ವನಾಥ್ ಅವರಿಗೆ, ಕ್ಷೇತ್ರದ ಮತದಾರರು ತಮ್ಮ ಮತವನ್ನು   ನೀಡುವ ಮೂಲಕ ಯಲಹಂಕ ಕ್ಷೇತ್ರದ  ಸರ್ವತೋಮುಖ  ಅಭಿವೃದ್ಧಿಗಾಗಿ, ಈಗಾಗಲೇ ಕ್ಷೇತ್ರದ  ಶಾಸಕರಾಗಿ ಮೂರು ಬಾರಿ ಗೆದ್ದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಮಾದರಿ ಎನಿಸಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಅವಿರತವಾಗಿ ಶ್ರಮಿಸುತ್ತಿರುವ ಎಸ್.ಆರ್. ವಿಶ್ವನಾಥ್ ರವರಿಗೆ  ಮತ್ತೊಮ್ಮೆ ಸತತವಾಗಿ ನಾಲ್ಕನೇ ಬಾರಿಗೆ ಮರು ಆಯ್ಕೆ ಮಾಡಬೇಕೆಂದು ವಿನಂತಿಸುತ್ತಾ ಸೀತಾ ಕೆಂಪನಹಳ್ಳಿ ಹಾಗೂ ಹಾರೋಹಳ್ಳಿ ಪಾಳ್ಯದ ಯುವಕರುಗಳು ಸುಮಾರು 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಬೈಕ್ ರ್ಯಾಲಿಯನ್ನು ನಡೆಸುತ್ತಾ, ಮತದಾರರಲ್ಲಿ ಮತದಾನದ ಅವಶ್ಯಕತೆ ಹಾಗೂ ಪ್ರತಿಯೊಬ್ಬರೂ ತಪ್ಪದೇ  ಕಡ್ಡಾಯವಾಗಿ ಮತದಾನವನ್ನು ಮಾಡುವ ಕುರಿತಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನದೊಂದಿಗೆ, ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಈ ಬಾರಿಯೂ ಮತದಾನದ ಮೂಲಕ ಬೆಂಬಲಿಸಬೇಕೆಂದು ಮತಯಾಚನೆ ಮಾಡಿದ,  ತಂಡದ ನೇತೃತ್ವವನ್ನು ಬಿಜೆಪಿ ಮುಖಂಡರುಗಳಾದ   ಎಸ್ ಸಿ / ಎಸ್ ಟಿ ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಸನ್ನ ಕುಮಾರ್,  ಯತೀಶ್ ಗೌಡ ಹಾಗೂ ಇನ್ನಿತರರು ವಹಿಸಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News