ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

"ದಾಸರಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಗೆಲ್ಲಿಸಿರಿ-ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ"


ಪೀಣ್ಯ ದಾಸರಹಳ್ಳಿ :ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಅವರಿಗೆ ಗೆಲ್ಲಿಸಿ ಎಂದು  ರಾಷ್ಟ್ರ ಕಂಡತಹ ಶ್ರೇಷ್ಠ ನಾಯಕ ಹುಟ್ಟೂ ಹೋರಾಟಗಾರ ಮಾಜಿ  ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಅವರ  ನೇತೃತ್ವದಲ್ಲಿ ಆಯೋಜಿಸಿದ್ದ  ಬಿಜೆಪಿ ಅಭ್ಯರ್ಥಿ  ಎಸ್.ಮುನಿರಾಜು ಅವರ ಪರ ಮತಯಾಚನೆ  ಪ್ರಯುಕ್ತ  ಹಿಂದೆ  ಶಾಸಕರಾಗಿದ್ದಾಗ ದಾಸರಹಳ್ಳಿ ಅಭಿವೃದ್ಧಿ ಕಂಡಿದ್ದು ಕಾರಣಕರ್ತ ಮುನಿರಾಜು 
ಅವರ ಪರ ಮತಯಾಚನೆ ಕಾರ್ಯ ಕ್ರಮ  ದಾಸರಹಳ್ಳಿಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ  ಪಾಟಿದಾರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜುಗೆ ಮತ ನೀಡಿ  ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಶತಾಯಗತಾಯ ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ಮುಖಂಡರಿಗೆ ಮಹಿಳೆಯರಿಗೆ  ಕಾರ್ಯಕರ್ತರು ಮತ್ತು 
ಮತದಾರರನ್ನು ದಾಸರಹಳ್ಳಿ ಕ್ಷೇತ್ರದ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅಂತ ತಿಳಿದು ನೀವೆಲ್ಲರೂ ಬಿಜೆಪಿ ಗೆ   ಮತ ಹಾಕಿ ನಮ್ಮ ಎಸ್ ಮುನಿರಾಜು ಅವರಿಗೆ ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತದಾರಲ್ಲಿ ಮನವಿ ಮಾಡಿ ಅವರು ಮಾತನಾಡಿದರು.
 ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಮಾತನಾಡಿ 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ನಾನು ಸೋಲು ಆಯಿತು ನಮ್ಮಮತದಾರರು ಕಳೆದ ಎರಡು ಚುನಾವಣೆಯ ಕಿಂತಲೂ ಜಾಸ್ತಿ ಮತ ಪಡೆದಿದೆ ಆದರೆ ನಮ್ಮ ಮತದಾರರು ನನಗೆ ಕೈ ಬಿಟ್ಟಿಲ್ಲಾ  ಅದರೂ ಒಳ ಒಪ್ಪಂದದಿಂದ ಸೋಲು ಅನುಭವಿಸ ಬೇಕಾಯಿತು ಎಂದು ಮಾಜಿ ಶಾಸಕ ಎಸ್ ಮುನಿರಾಜು ಮಾತಾಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಲಗೈ ಭಂಟ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿ ಮರಿಸ್ವಾಮಿ  ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಅವರು ಹಿಂದೆ ಶಾಸಕರಾಗಿದ್ದಾಗ ಕ್ಷೇತ್ರಕ್ಕೆ ಕಾವೇರಿ ನೀರು, ಒಳಚರಂಡಿ, ಹೈಮಾಸ್ ಲೈಟ್, ಉದ್ಯಾನ (ಪಾರ್ಕ್) ಮತ್ತು ಬಸ್ ವ್ಯವಸ್ಥೆ ಹೀಗೆ ಅನೇಕ ಅಭಿವೃದ್ಧಿ ಮಾಡಿ 224 ಶಾಸಕರಲ್ಲಿ ನಂಬರ್ ಒನ್ ಅಭಿವೃದ್ಧಿ ಶಾಸಕ ಎಸ್ ಮುನಿರಾಜು ಎಂದು ಇಂಗ್ಲೀಷ್ ಪತ್ರಿಕೆಯಾದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾಯಿತು.ಅದಕ್ಕೆ ಎಸ್ ಮುನಿರಾಜು ಅವರಿಗೆ ಅಭಿವೃದ್ಧಿ ಹರಿಕಾರ ಎಂದೇ ಕರೆಯಲ್ಪಡುತ್ತೇವೆ ಕಳೆದ ಐದು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕಂಡಿಲ್ಲ ಬಿಜೆಪಿ ಸರ್ಕಾರ ಅನುದಾನ ಕಿತ್ತುಕೊಂಡರು ಎಂದು ಕ್ಷೇತ್ರದ ಮತದಾರರಿಗೆ ಬೇರೆ ಸುಳ್ಳು ಹೇಳಿಕೊಂಡು ಅಭಿವೃದ್ಧಿ ಹರಿಕಾರ ಎಂದು ಹೇಳಿಕೊಂಡು ತಿರುಗಾಡುವ ಜೆಡಿಎಸ್ ಅಭ್ಯರ್ಥಿ ನಿಜವಾದ ಅಭಿವೃದ್ಧಿ ಹರಿಕಾರ ಎಸ್ ಮುನಿರಾಜು ಎಂದು ಘಂಟಾಘೋಷವಾಗಿ ಹೇಳುತ್ತೇವೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿ ಮರಿಸ್ವಾಮಿ ಪ್ರಾಸ್ತಾವಿಕವಾಗಿ ಭಾಷಣದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಂಗರಾಜು,ಕೃಷ್ಣಮೂರ್ತಿ, ರಾಜೇಂದ್ರ, ಬಸವರಾಜ್,  ಪ್ರಮುಖರಾದ ಶರತ್ ಹೊಂಬಾಳೆ, ಕಣ್ಣಪ್ಪ,ಬಿ.ಸುರೇಶ್,ಎಸ್ಸಿ ಮೋರ್ಚಾ ಮುಖಂಡರಾದ ಮುನಿರಾಜು, ಗಂಗಾಧರ್, ಮಾಜಿ ಪಾಲಿಕೆ ಸದಸ್ಯರಾದ ತಿಮ್ಮನಂಜಯ್ಯ, ಹೆಚ್ ಎನ್ ಗಂಗಾಧರ್, ಕೃಷ್ಣಯ್ಯ, ನಾಗಣ್ಣ, ಸಿ ಎಂ ನಾಗರಾಜ್, ವಾರ್ಡ ಅಧ್ಯಕ್ಷರಾದ ಗಂಗರಾಜು, ನರಸಿಂಹ ಮೂರ್ತಿ ಮಂಗಳ ವಾಟರ್, ಬಿಜೆಪಿ ಯುವ ಮುಖಂಡರಾದ ಹೆಚ್ ಆರ್ ಪ್ರಕಾಶ್, ನಾಗೇಶ್, ಸೋಮಶೇಖರ್, ವೈ ಜಿ ನಾಗರಾಜ್, ಕ್ಷೇತ್ರದ ಪ್ರದಾನ ಕಾರ್ಯದರ್ಶಿ. ಪಿ ಹೆಚ್ ರಾಜು, ಡಿಕೆ ಮಹೇಶ್, ವಿನೋದ್ ಗೌಡ, ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು
 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News