ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


ಬಿಟಿಎಂ ಲೇ ಔಟ್‍ನಲ್ಲಿ ಅಮಿತ್ ಶಾ ಭರ್ಜರಿ ರೋಡ್ ಷೋ
ಬೆಂಗಳೂರು: ನಗರದ ಬಿಟಿಎಂ ಲೇ ಔಟ್‍ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು, ಮುಖಂಡರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.
ಭಾರತ್ ಮಾತಾಕಿ ಜೈ, ಬಿಜೆಪಿಗೆ ಜಯವಾಗಲಿ, ಮೋದಿ, ಮೋದಿ, ಮೋದಿಜಿಯವರಿಗೆ ಜೈ, ಅಮಿತ್ ಶಾ ಅವರಿಗೆ ಜೈ ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಬಿಜೆಪಿಗೆ ಮತ ನೀಡುವಂತೆ ವಿನಂತಿಸುತ್ತ ರೋಡ್ ಷೋ ಮುಂದೆ ಸಾಗಿತು.
ಕಾರ್ಯಕರ್ತರು ಕೇಸರಿ ಶಾಲು ಸುತ್ತಿಸುವ ಮೂಲಕ ಜೈ ಬಜರಂಗಬಲಿ, ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಧ್ವಜಗಳನ್ನು ಎತ್ತಿ ಹಿಡಿದು ವಾದ್ಯಮೇಳಕ್ಕೆ ಹೆಜ್ಜೆ ಹಾಕಿದರು. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ಅಭ್ಯರ್ಥಿ ಶ್ರೀಧರ ರೆಡ್ಡಿ ಮತ್ತಿತರರು ಇದ್ದರು.


            

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News