ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಕಾಂಗ್ರೆಸ್ ನಿಂದ ಭೋವಿ ಸಮಾಜ ಕಡೆಗಣನೆ"" ನೆಲಮಂಗಲ: ಕಾಂಗ್ರೆಸ್ ಭೋವಿ ಸಮುದಾಯಕ್ಕೆ ಕೇವಲ ಎರಡೇ ಟಿಕೇಟ್ ನೀಡಿದೆ ಕಾಂಗ್ರೆಸ್ಸಿಗೆ ಬೆನ್ನೆಲುಬಾಗಿ ನಿಂತಿರುವ ಭೋವಿ ಸಮುದಾಯವನ್ನು ಕಡೆಗಣಿಸಿದೆ ಎಂದು ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಮಾಕಳಿ ಎಚ್ ರವಿ ಬೇಸರ ವ್ಯಕ್ತಪಡಿಸಿದರು. ಭೋವಿ ಸಮಾಜದ ವತಿಯಿಂದ ಆ ಯೋಜನೆ ಮಾಡಿದ್ದ ಪಂಜಿನ ಮೆರವಣಿಗೆಯಲ್ಲಿ ಅವರು ಮಾತನಾಡಿದರು
ನೆಲಮಂಗಲ ವಿಧಾನಸಭಾ ಕ್ಷೇತ್ರದ ಭೋವಿ ಸಮುದಾಯದ ಉಮಾದೇವಿ ಅವರಿಗೆ ಟಿಕೆಟ್ ನೀಡಲು ದ್ರೋಹ ಎಸಗಿದೆ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿತ್ತು ಆದರೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ.
ರಾಜ್ಯ ಭೋವಿ ಸಂಘದ ಜಂಟಿ ಕಾರ್ಯದರ್ಶಿ ವಿ ರಾಜನ ಮಾತನಾಡಿ ಪುಲಕೇಶಿ ನಗರದ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ರವರೆಗೆ ಇನ್ನೂ ಟಿಕೆಟ್ ಘೋಷಣೆ ಮಾಡದೆ ನಮ್ಮನ್ನು ಆತಂಕಕ್ಕೆ ದೂಡಿದ ಒಂದು ವೇಳೆ ಟಿಕೆಟ್ ಸಿಗದಿದ್ದರೆ 20 ರಿಂದ 30 ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವ ಭೋವಿ ಸಮಾಜ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಲಿದೆ ಎಂದರು. ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆಗೆ ಪಂಜಿನ ಮೆರವಣಿಗೆ ಮಾಡಲಾಯಿತು. ಕಾಂಗ್ರೆಸ್ ಯುವ ಮುಖಂಡ ವಿ ಗೋವರ್ಧನ್ ಗೋಪಿ ಸಾಹಿತಿ ಚೌಡಯ್ಯ ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ ಜಯಶಂಕರ್ ಮುಖಂಡರಾದ ಪೆದ್ದಣ್ಣಯ್ಯ ನಾಗೇಶ್, ಪ್ರಶಾಂತ್, ಕುಮಾರಯ್ಯ, ವೆಂಕಟರಾಜು ,ನಾಗರಾಜು, ಮುನಿ ವೆಂಕಟಪ್ಪ ಇನ್ನು ಅನೇಕರು ಸಮುದಾಯದ ಜನರು ಪಾಲ್ಗೊಂಡಿದ್ದರು .