ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
" ಡಿಕೆ ಶಿವಕುಮಾರ್ ದಾಸರಹಳ್ಳಿ ಕಾಂಗ್ರೆಸ್ರಿಗೆ ಮೋಸ ಮಾಡಿದ ! ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎನ್ ರಮೇಶ್ ಗೌಡ್ರು ನಾಮಪತ್ರ ಸಲ್ಲಿಸಿ ಆರೋಪಿಸಿದರು"
ಪೀಣ್ಯ ದಾಸರಹಳ್ಳಿ : ಕ್ಷೇತ್ರದಲ್ಲಿ ಹದಿನೈದು ವರ್ಷಗಳ ಕಾಂಗ್ರೆಸ್ ಪಕ್ಷದ ಸಂಘಟನೆ ನಿರಂತರವಾಗಿ ಶ್ರದ್ದೆಯಿಂದ ಮಾಡಿದ್ದೇವೆ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಮಾಡಿ ಇಡಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದು ಎನ್ ರಮೇಶ್ ಗೌಡರಿಗೆ ರಾಹುಲ್ ಗಾಂಧಿ ಅವರು ಪ್ರಶಸ್ತಿ ನೀಡಿದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಯಾರು ಜಾಸ್ತಿ ಸದಸ್ಯತ್ವ ಮಾಡಿದವರಿಗೆ ಶಾಸಕ ಟಿಕೆಟ್ ನೀಡುವುದಾಗಿ ಹೇಳಿದ ಶಿವಕುಮಾರ್ ಪಕ್ಷದ ಕೆಲಸ ಮಾಡಿದವರಿಗೆ ಹಾಗೂ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಏಳು ಜನ ಇದ್ದರು ಪ್ರತಿ ವಿಧಾನಸಭಾ ಚುನಾವಣೆಗೆ ವಲಸಿಗರಿಗೆ ಟಿಕೆಟ್ ನೀಡಿ ನಮ್ಮನ್ನು ಜಿತಾಳು ಎಂದು ತಿಳಿದು ಕೊಂಡಿದಿಯಾ ಸ್ವಾಮಿ ಪಕ್ಷ ನೀಡಿದರುವ ಕೆಲಸ ಶ್ರದ್ದೆಯಿಂದ ಮಾಡಿದ್ದೇವೆ. ಎಂದು ಡಿ ಕೆ ಶಿವಕುಮಾರ್ ಮೇಲೆ ಗಂಭೀರ ಆರೋಪ ಮತ್ತು ಸೂಟ್ಕೇಸ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎನ್ ರಮೇಶ್ ಗೌಡ್ರು ಹೆಗ್ಗನಹಳ್ಳಿ ದಾಸರಹಳ್ಳಿ ಕ್ಷೇತ್ರದ ಬಿಬಿಎಂಪಿ ಕಛೇರಿಗೆ ತೆರಳಿ ಚುನಾವಣಾ ಅಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿ ಮಾದ್ಯಮದವರ ಮುಂದೆ ನೇರವಾಗಿ ಡಿಕೆ ಶಿವಕುಮಾರ್ ಅವರಿಗೆ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎನ್ ರಮೇಶ್ ಗೌಡರ ಬೆಂಬಲಿಗರು ಪಕ್ಷ ಸಂಘಟನೆ ದಾಸರಹಳ್ಳಿ ನಾಯಕರು ಬೇಕು ಶಾಸಕರ ಟಿಕೆಟ್ ವಲಸಿಗರಿಗೆ ಕೊಡುವುದು ಯಾವ ನ್ಯಾಯ ಎಂದು ಕಾಂಗ್ರೆಸ್ ಮಹಿಳಾ ಮುಖ್ಯಸ್ಥೆ ಗಾಯತ್ರಿ ಕಾಂಗ್ರೆಸ್ ರಾಜ್ಯ ನಾಯಕರ ಮೇಲೆ ಹರಿಹಾಯ್ದಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ನಾಗರಾಜ್ ಮಾಸ್ಟರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎನ್ ರಮೇಶ್ ಗೌಡರಿಗೆ ಸಾಥ್ ನೀಡಿದರು.