ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


""ಬೆಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಜನಸಾಗರ ""
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ನಡೆಸಿದ ರೋಡ್ ಶೋ ಅಪಾರ ಜನಸಾಗರವನ್ನು ಆಕರ್ಷಿಸಿತು. ನೈಸ್ ರೋಡ್ ಜಂಕ್ಷನ್, ಈಸ್ಟ್ ವೆಸ್ಟ್ ಕಾಲೇಜ್ ಜಂಕ್ಷನ್, ಆದಿಶ್ವರ ಜಂಕ್ಷನ್, ಸುಮನಹಳ್ಳಿ ಜಂಕ್ಷನ್ ಮೂಲಕ ರೋಡ್ ಶೋ ಹಾದು ಹೋಯಿತು. ಇಕ್ಕೆಲಗಳಲ್ಲಿ ಸೇರಿದ್ದ ಅಪಾರ ಜನಸ್ತೋಮವು ಮೋದಿ ಜೀ ಅವರಿಗೆ ಜಯವಾಗಲಿ, ಬಿಜೆಪಿಗೆ ಜಯವಾಗಲಿ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿ ಪ್ರಧಾನಿಯವರನ್ನು ಸ್ವಾಗತಿಸಿದರು. 
ಮಧ್ಯಾಹ್ನದಿಂದಲೇ ಮಹಿಳೆಯರೂ ಸೇರಿದಂತೆ ಜನರು ರಸ್ತೆಯ ಎರಡು ಬದಿಗಳಲ್ಲಿ ಜಮಾಯಿಸಿ ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದುದು ಕಂಡು ಬಂತು. 
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ರೋಡ್ ಶೋದಲ್ಲಿ ಭಾಗವಹಿಸಿದ್ದರು.  

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News