ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಬೆಂಗಳೂರು ವಿಶ್ವವಿದ್ಯಾಲಯ ಆಂಗ್ಲ ಭಾಷಾ ಪಠ್ಯಪುಸ್ತಕ ಬಿಡುಗಡೆ""
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಆಂಗ್ಲಭಾಷಾ  ಉಪನ್ಯಾಸಕರ ಸಂಘ ಹಾಗೂ  ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಕೆಂಗೇರಿ ಸಹಯೋಗದೊಂದಿಗೆ ನಾಲ್ಕನೇ ಸೆಮಿಸ್ಟರ್ ಬದಲಾದ ಪಠ್ಯಪುಸ್ತಕದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಎಸ್. ಎಂ.

ಜಯಕರ್  ರವರು ನಾಲ್ಕನೇ ಸೆಮಿಸ್ಟರ್ ಬಿ.ಎ, ಬಿಕಾಂ, ಬಿ .ಎಸ್. ಸಿ, ಬಿ. ಸಿ .ಎ , ಆಂಗ್ಲ ಭಾಷಾ ಬದಲಾದ ಪಠ್ಯ ಪುಸ್ತಕವನ್ನು ಬಿಡುಗಡೆ ಮಾಡಿದರು. ತದನಂತರ ಬಿ.ಯು .ಆಂಗ್ಲ ಭಾಷಾ ಉಪನ್ಯಾಸಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ವಿಶ್ವವಿದ್ಯಾಲಯ ಪಾಲಿಸಬೇಕಾಗಿದೆ ಇದು ಮಕ್ಕಳ ಭವಿಷ್ಯದ ಅನುಕೂಲಕ್ಕಾಗಿ ಹಾಗೂ ಉನ್ನತ ಶಿಕ್ಷಣದ ವ್ಯವಸ್ಥೆ ಬಲಿಷ್ಠವಾಗಬೇಕಾದರೆ ಬರುವಂತಹ ಪೀಳಿಗೆಗೆ ಬಹಳ ಅವಶ್ಯವಾಗಿದೆ ಎಂದರು.
 ಈ ಒಂದು ದಿನದ ಕಾರ್ಯಗಾರ ಉಪನ್ಯಾಸಕರಿಗೆ ಬಹಳ ಮಹತ್ವಪೂರ್ಣವಾಗಿರುವಂತಹದ್ದು ಈ ಪಠ್ಯಕ್ರಮವನ್ನು ತಿಳಿದುಕೊಳ್ಳಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಬಿ .ಯು. ಇ .ಟಿ. ಏ. ಸಂಸ್ಥಾಪಕರಾದ ಡಾ. ಎಂ ಸಿ ಪ್ರಕಾಶ್ ತಿಳಿಸಿದರು.
 ಈ ಸಂದರ್ಭದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಸದಸ್ಯರಾದ ಎಂ.ಡಿ .ಅಶೋಕ್  ಮತ್ತು ಬೆಂಗಳೂರು ವಿಶ್ವ ವಿದ್ಯಾಲಯ ಆಂಗ್ಲ ಭಾಷಾ ಮುಖ್ಯಸ್ಥೆ ಡಾ. ಕೆ.ಜಿ. ಗೀತಾ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಮತ್ತು ಬಿ. ಯು. ಟಿ. ಎ. ಮತ್ತು ಬಿ .ಯು. ಸಿ. ಟಿ. ಎ. ಅಧ್ಯಕ್ಷರಾದ ಡಾ. ತಮ್ಮಯ್ಯ ಆರ್. ವಿ. ಮತ್ತು ಡಾ. ಶೇಷಗಿರಿ ಹಾಗೂ ಪದಾಧಿಕಾರಿಗಳಾದ ಡಾ. ಶಂಕರ್ ಮೂರ್ತಿ ಮತ್ತು ಎಸ್. ಎಂ. ರಮೇಶ್ ಬಿ. ಯು. ಟಿ ಎ ಸದಸ್ಯರುಗಳು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News