ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಮುನಿರಾಜು ಎಸ್ ನಾಮಪತ್ರ ಸಲ್ಲಿಸಿದರು ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಮಾಜಿ ಶಾಸಕರು ಹಾಗೂ ಅಭ್ಯರ್ಥಿಯಾದ ಮುನಿರಾಜು ಎಸ್ ರವರು ಈ ದಿನ ನಾಮಪತ್ರ ಸಲ್ಲಿಸುವ ಕಿಂತ ಮುಂಚೆ ಕ್ಷೇತ್ರದ ಆಶೀರ್ವಾದ ತೆಗೆದುಕೊಳ್ಳಲು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಚಲಿಸುವ ಬೆಳಗ್ಗೆ ಮೊದಲನೆಯ ದೇವಸ್ಥಾನ ಶೆಟ್ಟಿ ಹಳ್ಳಿಯ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ, : ದಾಸರಹಳ್ಳಿಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನ , ದಾಸರಹಳ್ಳಿಯ ಮಹೇಶ್ವರಮ್ಮನ ದೇವಸ್ಥಾನ, ಡಿಫೆನ್ಸ್ ಕಾಲೋನಿಯ ಶಿವನ ದೇವಸ್ಥಾನ , ಬಾಗಲಗುಂಟೆಯ ಮಾರಮ್ಮನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, 8ನೇ ಮೈಲಿಯಿಂದ ಬೈಕ್ ರ‍್ಯಾಲಿ ಮುಖಂಡರುಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಮುಖಾಂತರ *ಎಂ.ಇ.ಐ* ಬಡಾವಣೆಯಲ್ಲಿರುವ ಬಿ.ಬಿ.ಎಂ.ಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಶ್ರೀಮತಿ ಸುಜಾತ ಎಸ್ ಮುನಿರಾಜು ಇಬ್ಬರು ಪುತ್ರಿಯರು ಕ್ಷೇತ್ರದ ಹಿರಿಯ ಮುಖಂಡರುಗಳು ಹಾಗೂ ಶೆಟ್ಟಳ್ಳಿ ವಾರ್ಡ್ ಅಧ್ಯಕ್ಷರಾದ ಸುರೇಶ್ ರವರು ವಾರ್ಡ್ ಅಧ್ಯಕ್ಷರುಗಳು ಬ್ಲಾಕ್ ಅಧ್ಯಕ್ಷರು ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಬಂಧುಗಳು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸಾತ್ ನೀಡುವ ಮೂಲಕ 2023ರ ಚುನಾವಣೆ ಯಲ್ಲಿ ಗೆದ್ದು ಬರುವಂತೆ ಘೋಷಣೆಯನ್ನು ಕೂಗಿದರು