ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಜೆಡಿಎಸ್ ಅಭ್ಯರ್ಥಿ ಎಂ ಮುನೇಗೌಡ ಅವರಿಂದ ಮತಯಾಚನೆಗೆ ಅದ್ದೂರಿ ಸ್ವಾಗತ;

ಯಲಹಂಕ; ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಅವರು ದಾಸನಪುರ ಹೋಬಳಿಯ ಮಾದಾವರ ಗ್ರಾಮಕ್ಕೆ ಭೇಟಿ ನೀಡಿದರು.

ಮುನೇಗೌಡ ಅವರ ಸ್ವಾಗತಕ್ಕೆ ಸೇರಿದ ನೂರಾರು ಕಾರ್ಯಕರ್ತರು ಸಿಡಿಮದ್ದು ಮದ್ದು ಸಿಡಿಸುವ ಮೂಲಕ ಸ್ವಾಗತ ಕೋರಿದರು.

ನಂತರ ಕಾರ್ಯಕರ್ತರೊಂದಿಗೆ ತೆರಳಿದ ಮುನೇಗೌಡ ಅವರು ಮಾದಾವರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೈಮುಗಿದು ಮತಯಾಚನೆ ಮಾಡಿ ಹಲವು ಹಿರಿಯ ಮುಖಂಡರ ಮನೆಗೆ ಭೇಟಿ  ನೀಡಿದರು .

ನಂತರ ಮಾದವರದ ಮಾರಮ್ಮ ದೇವಿ ಸರ್ಕಲ್ ಬಳಿ ಸಾರ್ವಜನಿಕರ ಉದ್ದೇಶಿಸಿ ಮಾತನಾಡಿದ್ದ ಮುನೇಗೌಡ ಅವರು ಇಂದಿನ ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದು ತುಂಬಾ ಸಂತೋಷವಾಗಿದ್ದು ಹಲವಾರು ಮುಖಂಡರು ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಈ ಬಾರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಲೆ ಇದ್ದು ಯಲಹಂಕದಲ್ಲಿ ಸಹ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದರು.

ಈ ಪಾದಯಾತ್ರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ಮುನೇಗೌಡ. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ. ಮುಖಂಡರಾದ ಹೇಮಂತ್ ಗೌಡ ಮತ್ತು ಇನ್ನು ಮುಂತಾದ ಹಿರಿಯ ಮುಖಂಡರು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News