ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಎ ಎ ಪಿ ಅಭ್ಯರ್ಥಿಯಾದ ಕೀರ್ತನ್ ಕುಮಾರ್ ಮಂಜಪ್ಪ ಮನೆ ಮನೆಗೆ ಬೇಟಿ"'
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಎ ಎ ಪಿ ಅಭ್ಯರ್ಥಿಯಾದ ಕೀರ್ತನ್ ಕುಮಾರ್ ಮಂಜಪ್ಪ ಅವರು ದಾಸರಹಳ್ಳಿ ಕ್ಷೇತ್ರದ ಅಬ್ಬಿಗೆರೆ ಇಂದ ಶೆಟ್ಟಹಳ್ಳಿ ಕಮಗೊಂಡನಹಳ್ಳಿ ಚಿಕ್ಕಬಾಣವರ ಬಾಗಲಗುಂಟೆ, ಮಲಸಂದ್ರ ದಾಸರಹಳ್ಳಿ ಚೊಕ್ಕಸಂದ್ರ ಜಾಲಹಳ್ಳಿ ಕ್ರಾಸ್ ನೆಲ ಗೆದ್ದರನಹಳ್ಳಿ, ಪೀಣ್ಯ ಎರಡನೇ ಹಂತ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶ ಲಗ್ಗೆರೆ ರಾಜಗೋಪಾಲ್ ನಗರ ರುಕ್ಮಿಣಿ ನಗರ ಸೇರಿದಂತೆ ಸುಮಾರು ವಾರ್ಡುಗಳಿಗೆ ಬೇಟಿ ನೀಡಿ ವಾರ್ಡ್ ಅಧ್ಯಕ್ಷರು ಬೂತ್ ಮಟ್ಟದ ಅಧ್ಯಕ್ಷ ಗಳನ್ನು ಭೇಟಿ ನೀಡಿ ಕ್ಷೇತ್ರದ ಎ ಎ ಪಿ ಗೆ ಮತನೀಡಿ ಎಂದು ಮನೆ ಮನೆಗೆ ಭೇಟಿ ಮಾಡಿ ಅವರ ಜೊತೆ ರಾಜ್ಯದ ಮತ್ತು ಕ್ಷೇತ್ರದ ಕುಂದು ಕೊರತೆಗಳ ಹಾಗೂ ಸಮಸ್ಯೆಗಳ ಬಗ್ಗೆ ಹಾಗೆ ಮುಂದಿನ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿ ತದನಂತರ ನಮ್ಮ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಮಾರ್ಗದರ್ಶನದಲ್ಲಿ ದೆಹಲಿಯಲ್ಲಿ ಯಾವ ರೀತಿ ಅಭಿವೃದ್ಧಿಯನ್ನು ಕೈಗೊಂಡಿದ್ದಾರೆ ಅದೇ ಮಾರ್ಗದಲ್ಲಿ ನಾವು ಕರ್ನಾಟಕದಲ್ಲಿ ಹಾಗೂ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಕೆಲಸಗಳನ್ನ ಯಾವುದೇ ಅಭಿವೃದ್ಧಿ ರಸ್ತೆ ಕುಡಿಯುವ ನೀರು ಶಿಕ್ಷಣ ಬಡ ಮತ್ತು ರೈತರ ಬಗ್ಗೆ ನಾವು ಸಹಾಯ ಕಲ್ಪಿಸಿಕೊಡಲು ನಾನು ನಿಮಗೆ ಭರವಸೆಯನ್ನು ಕೊಡುತ್ತೇನೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿಶೇಷ ವಾಗಿ ಶಿಕ್ಷಣ ಮತ್ತು ಮನೆಯ ಬಳಕೆಗೆ ವಿದ್ಯುತ್ ಮತ್ತು ಇನ್ನಿತರ ಜನಸಾಮಾನ್ಯರ ಮೂಲ ಸೌಕರ್ಯಗಳನ್ನ ನಾವು ಕೊಡಲು ಸಿದ್ದ ಎಂದು ಮನವರಿಕೆ ಮಾಡುತ್ತಾ ಮನೆ ಮನೆಗೆ ಭೇಟಿ ಮಾಡುವುದರ ಮೂಲಕ ಕ್ಷೆತ್ರದ ಜನತೆಯನ್ನು ಗೆದ್ದಿದ್ದಾರೆ ಏಕೆಂದರೆ ಕ್ಷೇತ್ರದ ಎಲ್ಲಿ ಹೋದರು ಯಾವ ವಾರ್ಡಿಗೂ ಹೋದರೂ ಎ ಎ ಪಿಗೆ ಜನ ಸೇರ್ಪಡೆಯಾಗುವುದನ್ನು ನೋಡಿದರೆ ಅವರ ಜೊತೆಯಲ್ಲಿ ಸಾವಿರಾರು ಜನ ಸ್ವಯಂ ಪ್ರೇರಿತರಾಗಿ ಭಾಗವು ವಹಿಸುತ್ತಿರುವುದು ನಮ್ಮ ಮುಂದೆ ನಮ್ಮ ಕಣ್ಣ ಮುಂದೆ ಕಾಣುತ್ತಿದೆ ಕಾರ್ಯಕರ್ತರ ಪಡೆ ನನ್ನ ಜೊತೆ ಇದೆ ಎಂದು ಕ್ಷೇತ್ರದ ಅಭ್ಯರ್ಥಿಯಾದ ಕೀರ್ತನ್ ಕುಮಾರ್ ಮಂಜಪ್ಪ ನವರು ತಿಳಿಸಿದರು