ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

*ಗೋದ್ರೇಜ್ ಸೆಕ್ಯುರಿಟಿ ಸೊಲ್ಯೂಷನ್ಸ್ ಭೌತಿಕ ಭದ್ರತಾ ಉತ್ಪನ್ನಗಳ ಶ್ರೇಣಿ ವಿಸ್ತರಣೆ- ಕರ್ನಾಟಕದಲ್ಲಿ 'ಸ್ಮಾರ್ಟ್‍ಫಾಗ್' ಮತ್ತು 'ಅಕ್ಯೂಗೋಲ್ಡ್' ಗೆ ಚಾಲನೆ*

* ಹಣಕಾಸು ಸಂಸ್ಥೆಗಳು ಮತ್ತು ಆಭರಣ ಮಳಿಗೆ ಸಮುದಾಯಕ್ಕೆ ಇತ್ತೀಚಿನ ಆವಿಷ್ಕಾರಗಳೆನಿಸಿದ 'ಸ್ಮಾರ್ಟ್‍ಫಾಗ್' ಮತ್ತು 'ಅಕ್ಯುಗೋಲ್ಡ್' ಅನ್ನು ಬ್ರ್ಯಾಂಡ್ ಐಐಜೆಎಸ್ ತೃತೀಯಾದಲ್ಲಿ ಅನಾವರಣಗೊಳಿಸಿತು.

ಬೆಂಗಳೂರು, 20 ಮಾರ್ಚ್ 2023: ಗೋದ್ರೇಜ್ ಉದ್ಯಮ ಸಮೂಹದ ಪ್ರಮುಖ ಕಂಪನಿಯಾದ ಗೋದ್ರೇಜ್ ಮತ್ತು ಬಾಯ್ಸ್‍ನ  ಗೋದ್ರೇಜ್ ಸೆಕ್ಯುರಿಟಿ ಸೊಲ್ಯೂಷನ್ಸ್ ವಿಭಾಗ ಇಂದು ತಮ್ಮ ಇತ್ತೀಚಿನ ಆವಿಷ್ಕಾರಗಳಾದ 'ಸ್ಮಾರ್ಟ್‍ಫಾಗ್' ಮತ್ತು 'ಅಕ್ಯುಗೋಲ್ಡ್' ಅನ್ನು ದಿ ಜೆಮ್ & ಜ್ಯುವೆಲ್ಲರಿ ಎಕ್ಸ್‍ಪೋರ್ಟ್ ಪ್ರಮೋಷನ್ ಕೌನ್ಸಿಲ್ (ಜಿಜೆಇಪಿಸಿ) ಬೆಂಗಳೂರು ಇಂಟರ್‍ನ್ಯಾಶನಲ್ ಎಕ್ಸಿಬಿಷನ್ ಸೆಂಟರ್‍ನಲ್ಲಿ (ಬಿಐಇಸಿ) ಮಾರ್ಚ್ 17 ರಿಂದ 20 ರ ವರೆಗೆ ಆಯೋಜಿಸಿದ್ದ 'ಇಂಡಿಯಾ ಇಂಟರ್‍ನ್ಯಾಷನಲ್ ಜ್ಯುವೆಲ್ಲರಿ ಶೋ - 'ಐಐಜೆಎಸ್ ತೃತೀಯಾ'ದಲ್ಲಿ ಕಂಪನಿಯು ತಮ್ಮ ನವೀನ ಕೊಡುಗೆಗಳನ್ನು ಪ್ರದರ್ಶಿಸಿತು ಹಾಗೂ ಬಿಡುಗಡೆ ಮಾಡಿತು.

'ಸ್ಮಾರ್ಟ್‍ಫಾಗ್, ಒಂದು ಪ್ರಬಲವಾದ ಫಾಗಿಂಗ್ ಭದ್ರತಾ ವ್ಯವಸ್ಥೆಯಾಗಿದ್ದು, ಒಳನುಗ್ಗುವವರನ್ನು ತಮ್ಮ ಟ್ರ್ಯಾಕ್‍ಗಳಲ್ಲಿ ನಿಲ್ಲಿಸಲು ಶಕ್ತವಾಗುವಂತೆ ಸಶಕ್ತಗೊಳಿಸಲಾಗಿದೆ. ಆದರೆ 'ಆಕ್ಯೂಗೋಲ್ಡ್' ಆಭರಣವನ್ನು ಹಾನಿಯಾಗದಂತೆ ಅತ್ಯಂತ ನಿಖರತೆಯೊಂದಿಗೆ ಚಿನ್ನದ ಪರಿಶುದ್ಧತೆಯನ್ನು ನಿರ್ಧರಿಸಲು ಸಜ್ಜುಗೊಂಡಿದೆ. ಈ ಎರಡೂ ಆವಿಷ್ಕಾರಗಳನ್ನು ಬ್ರ್ಯಾಂಡ್‍ನ ಭೌತಿಕ ಭದ್ರತಾ ಶ್ರೇಣಿಯ ಉತ್ಪನ್ನಗಳನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಸಾಂಸ್ಥಿಕ ಭದ್ರತೆಯ ಕ್ಷೇತ್ರದಲ್ಲಿ ನಾಯಕರಾಗಿ ಸ್ಥಾಪಿಸಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಗೋದ್ರೇಜ್ ಸೆಕ್ಯುರಿಟಿ ಸೊಲ್ಯೂಷನ್ಸ್ ಇಂತಹ ತಂತ್ರಜ್ಞಾನ ಮತ್ತು ಉತ್ಪನ್ನಗಳ ಮೂಲಕ ಹಣಕಾಸು ಸಂಸ್ಥೆಗಳು ಮತ್ತು ಆಭರಣ ವಲಯವನ್ನು ಪರಿವರ್ತಿಸಲು ಉತ್ಸುಕವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಶಾಖೆಗಳು ಮತ್ತು ಕರ್ನಾಟಕದಲ್ಲಿ ಗ್ರಾಮೀಣ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅಸ್ತಿತ್ವವನ್ನು ಬೆಳೆಸಿಕೊಳ್ಳುತ್ತಿರುವ ಖಾಸಗಿ ಬ್ಯಾಂಕ್‍ಗಳು ರಾಜ್ಯದಲ್ಲಿ ಬೃಹತ್ ಬೆಳವಣಿಗೆಯನ್ನು ಪ್ರಚೋದಿಸಿದ್ದು, ಈ ಹೊಸ ಉತ್ಪನ್ನಗಳು ಇಂಥ ಸಂಸ್ಥೆಗಳಿಗೆ ನೆರವಾಗಲಿವೆ. ಇದಲ್ಲದೆ, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿ ಇಡಲು ಸೇಫ್‍ಗಳು ಮತ್ತು ಸ್ಟ್ರಾಂಗ್ ರೂಮ್ ಬಾಗಿಲುಗಳಿಗೆ ಚಿನ್ನಾಭರಣ ಅಂಗಡಿಗಳಿಂದ ಬಲವಾದ ಬೇಡಿಕೆ ಇದೆ. ಇದರ ಜೊತೆಯಲ್ಲಿ, ಅಪರಾಧ ದರಗಳಲ್ಲಿನ ತಡವಾದ ಏರಿಕೆಯು ಆಭರಣ ವ್ಯಾಪಾರಿಗಳಲ್ಲಿ ಉನ್ನತ ದರ್ಜೆಯ ಸೇಫ್‍ಗಳು ಮತ್ತು ಬಾಗಿಲುಗಳು ಮತ್ತು ತಾಂತ್ರಿಕವಾಗಿ ಸುಧಾರಿತ ಭದ್ರತಾ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಗೋದ್ರೇಜ್ ಸೆಕ್ಯುರಿಟಿ ಸೊಲ್ಯೂಷನ್ಸ್‍ನ ಬಿಸಿನೆಸ್ ಹೆಡ್ ಶ್ರೀ ಪುಷ್ಕರ್ ಗೋಖಲೆ, "ಗೋದ್ರೇಜ್ ಸೆಕ್ಯುರಿಟಿ ಸೊಲ್ಯೂಷನ್ಸ್‍ನಲ್ಲಿ ನಾವು ನಿರಂತರವಾಗಿ ನಾವೀನ್ಯತೆ ಮತ್ತು ನಮ್ಮ ಗ್ರಾಹಕರ ಭದ್ರತಾ ಅಗತ್ಯಗಳನ್ನು ಪೂರೈಸಲು ಪರಿಣಾಮಕಾರಿ ಪರಿಹಾರಗಳನ್ನು ನೀಡಲು ಬದ್ಧರಾಗಿದ್ದೇವೆ. ಕಳೆದ ಕೆಲವು ವರ್ಷಗಳಿಂದ, ನಾವು ಕರ್ನಾಟಕದಲ್ಲಿ ಭೌತಿಕ ಭದ್ರತಾ ಉತ್ಪನ್ನಗಳ ಶ್ರೇಣಿಯ ಬೆಳವಣಿಗೆ ಮತ್ತು ಬೇಡಿಕೆಯನ್ನು ಗಮನಿಸುತ್ತಾ ಬಂದಿದ್ದೇವೆ ಮತ್ತು ಸಾಂಸ್ಥಿಕ ಭದ್ರತಾ ವಿಭಾಗದಲ್ಲಿ ನಮ್ಮ ಭೌತಿಕ ಭದ್ರತಾ ಉತ್ಪನ್ನ ಕೊಡುಗೆಗಳನ್ನು ನಾವು ವಿಸ್ತರಿಸುತ್ತಿದ್ದೇವೆ. ಪ್ರಸ್ತುತ, ನಾವು ಆರಂಭಿಕ ಅಳವಡಿಕೆಯ ಹಂತದಲ್ಲಿರುತ್ತೇವೆ ಮತ್ತು ನಮ್ಮ ರೋಡ್‍ಶೋಗಳು ಮತ್ತು ಪ್ರದರ್ಶನಗಳ ಸಮಯದಲ್ಲಿ ವ್ಯಕ್ತವಾದ ಅಗಾಧ ಪ್ರತಿಕ್ರಿಯೆಯನ್ನು ಅನುಸರಿಸುತ್ತಿದ್ದೇವೆ, ಮುಂದಿನ 2 ವರ್ಷಗಳಲ್ಲಿ ರಾಷ್ಟ್ರೀಯವಾಗಿ (ಎರಡೂ ಉತ್ಪನ್ನಗಳಿಗೆ) 2500 ಯೂನಿಟ್‍ಗಳ ವಾರ್ಷಿಕ ಮಾರಾಟ ಮತ್ತು ಆದಾಯದಲ್ಲಿ ಶೇಕಡ 25 ರಷ್ಟು ಸಂಭಾವ್ಯ ಬೆಳವಣಿಗೆಯನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದರು.

"ಕರ್ನಾಟಕವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ರಾಜ್ಯ ಆರ್ಥಿಕತೆಯಾಗಿದೆ. ಶಾಖೆಯ ವಿಸ್ತರಣೆ ಮತ್ತು ಹೊಸ ಬ್ಯಾಂಕಿಂಗ್ ಸೇವೆಗಳನ್ನು ಆರಂಭ ಮಾಡುವ ವಿಷಯದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‍ಯು) ಮತ್ತು ಖಾಸಗಿ ಬ್ಯಾಂಕ್‍ಗಳಿಂದ ಸಮಾನ ಗಮನವನ್ನು ಹೊಂದಿರುವ ಸಾಂಸ್ಥಿಕ ಭದ್ರತೆಗಾಗಿ ಇದು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ, ಕಳೆದ 3 ವರ್ಷಗಳಲ್ಲಿ ಅತ್ಯಧಿಕ ಜಿಡಿಪಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ಅತ್ಯಂತ ಯಶಸ್ವಿ ತಂತ್ರಜ್ಞಾನ ಆಧಾರಿತ ಕಂಪನಿಗಳಿಗೆ ನೆಲೆಯಾಗಿದೆ. ಇದು ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿದೆ, ಎಚ್‍ಎನ್‍ಐ ಗಳ ಕೇಂದ್ರವಾಗಿದೆ ಮತ್ತು ಚಿನ್ನ ಮತ್ತು ಅಮೂಲ್ಯ ಹರಳುಗಳು ಸೇರಿದಂತೆ ಅನೇಕ ಉತ್ಪಾದನಾ ಸೌಲಭ್ಯಗಳು ಇಲ್ಲಿವೆ. ಇದು ದಕ್ಷಿಣ ವಲಯದ ವೇಗವಾಗಿ ಬೆಳೆಯುತ್ತಿರುವ ಶಾಖೆಗಳಲ್ಲಿ ಒಂದಾಗಿದೆ. ಮಾರುಕಟ್ಟೆಯ ಹೊಸ ವಿಭಾಗಗಳನ್ನು ತಲುಪಲು, ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಚಾನೆಲ್ ಪಾಲುದಾರರು ಮತ್ತು ಎಎಸ್‍ಪಿ ಗಳ ದೃಢವಾದ ಜಾಲವನ್ನು ನಿರ್ಮಿಸುವುದು ವಿಶೇಷವಾಗಿ ನಮ್ಮ ಗಮನವಾಗಿದೆ. ಈ ಎರಡೂ ನವೀನ ಕೊಡುಗೆಗಳು ಬ್ರಾಂಡ್ ಅನ್ನು ಯಶಸ್ವಿಯಾಗಿ ಮುನ್ನಡೆಸಲು ಮತ್ತು ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಭೌತಿಕ ಭದ್ರತಾ ಉತ್ಪನ್ನಗಳ ವರ್ಗದಾದ್ಯಂತ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದು ಶ್ರೀ ಗೋಖಲೆ ಹೇಳಿದರು.

ಸ್ಮಾರ್ಟ್‍ಫಾಗ್ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾದ ಈ ಬಗೆಯ ವಿಶಿಷ್ಟ ಮತ್ತು ಮೊದಲ ಪರಿಕಲ್ಪನೆಯಾಗಿದೆ. ಈ ಕ್ರಾಂತಿಕಾರಿ ಉತ್ಪನ್ನವು ಬ್ಯಾಂಕ್‍ಗಳು ಮತ್ತು ಆಭರಣ ವ್ಯಾಪಾರಿಗಳ ಒಟ್ಟಾರೆ ಭದ್ರತಾ ಪರಿಸರ ವ್ಯವಸ್ಥೆಗೆ ಹೆಚ್ಚುವರಿ ರಕ್ಷಣೆಯ ಪದರವನ್ನು ಸೇರಿಸುತ್ತದೆ. ಯಾವುದೇ ವ್ಯಾಲೆಟ್ ಅಥವಾ ಸೇಫ್ ಲಾಕರ್‍ಗಳನ್ನು ತೆರೆಯಲು ಅನಧಿಕೃತ ಪ್ರಯತ್ನಗಳನ್ನು ಪತ್ತೆಹಚ್ಚಲು ಇದು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತದೆ. ಇದು ರಿಮೋಟ್ ಕ್ಲೌಡ್ ಆಧಾರಿತ ಅಪ್ಲಿಕೇಶನ್ ಜೊತೆಗೆ ಸಿಸ್ಟಮ್ ಅನ್ನು ಪ್ರಚೋದಿಸಲು ವೈರ್‍ಲೆಸ್ ತಂತ್ರಜ್ಞಾನವನ್ನು ಹೊಂದಿದೆ. ಪ್ರಚೋದಿಸಿದಾಗ, ಸ್ಮಾರ್ಟ್ ಫಾಗ್ ಸಾಂದ್ರೀಕೃತ ದ್ರವೀಕೃತ ಗ್ಲೈಕೋಲ್‍ನಿಂದ ಮಾಡಿದ ದಟ್ಟವಾದ ಮಂಜನ್ನು ಹೊರಸೂಸುತ್ತದೆ - ಇದು ಮನುಷ್ಯರಿಗೆ ಹಾನಿಯಾಗುವುದಿಲ್ಲ ಆದರೆ ಭಯವನ್ನು ಉಂಟುಮಾಡುತ್ತದೆ ಮತ್ತು ಶೂನ್ಯ ಗೋಚರತೆಯ ಕಾರಣದಿಂದಾಗಿ ಅಪರಾಧಿಯನ್ನು ನಿಶ್ಚಲಗೊಳಿಸುತ್ತದೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಕ್ಷೇತ್ರ ಹಂತದ ಸಿಬ್ಬಂದಿಗೆ ಸಾಕಷ್ಟು ಸಮಯವನ್ನು ನೀಡುತ್ತದೆ.

ಅಕ್ಯೂಗೋಲ್ಡ್ ಅತ್ಯಾಧುನಿಕ ಮತ್ತು ನಿಖರವಾಗಿ ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸುವ ಪರೀಕ್ಷಾ ಯಂತ್ರವಾಗಿದೆ. ಅಕ್ಯುಗೋಲ್ಡ್ ಅನ್ನು ಪರೀಕ್ಷೆಯ ಅಡಿಯಲ್ಲಿ ಯಾವುದೇ ಆಭರಣದ ನಿಖರವಾದ ಸಂಯೋಜನೆಯನ್ನು ನೀಡಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ, ಯಾವುದೇ ರೀತಿಯಲ್ಲಿ ಆಭರಣವನ್ನು ಹಾನಿಗೊಳಿಸದೆ, ಚಿನ್ನಾಭರಣಗಳು, ಬ್ಯಾಂಕ್‍ಗಳು ಮತ್ತು ಚಿನ್ನದ ಶುದ್ಧತೆಯನ್ನು ನಿರ್ಧರಿಸಲು ಹೆಚ್ಚಿನ ನಿಖರತೆಯನ್ನು ಬಯಸುವ ಹಣಕಾಸು ಸಂಸ್ಥೆಗಳಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ.

ಸೆಕ್ಯೂರ್ 4.0 ಎನ್ನುವುದು ಗೋದ್ರೇಜ್ ಸೆಕ್ಯುರಿಟಿ ಸೊಲ್ಯೂಷನ್ಸ್‍ನ ಉಪಕ್ರಮದ ಮುಂದುವರಿಕೆಯಾಗಿದ್ದು, ಬೆದರಿಕೆಗಳ ಪ್ರಕಾರದಲ್ಲಿನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅತ್ಯುತ್ತಮ ಭದ್ರತಾ ಕ್ರಮಗಳಿಗೆ ಮೇಲ್ದರ್ಜೆಗೇರುವ ಬಗ್ಗೆ ಬಳಕೆದಾರರು ಜಾಗೃತರಾಗುವಂತೆ ಮಾಡುತ್ತದೆ. 2021 ರ ಹಿಂದಿನ ಆವೃತ್ತಿಯಲ್ಲಿ, ಬ್ಯಾಂಕಿಂಗ್ ಉದ್ಯಮವು ತಮ್ಮ ಸಾಂಸ್ಥಿಕ ಭದ್ರತೆಯನ್ನು ಹೇಗೆ ಪರಿವರ್ತಿಸಬೇಕು ಎಂಬುದನ್ನು ಚರ್ಚಿಸಲು ಸೆಕ್ಯೂರ್ ಸ್ಪೇಸ್ಸ್ ಬ್ಯಾಂಕಿಂಗ್ ಕಾನ್‍ಕ್ಲೇವ್ ಬ್ಯಾಂಕಿಂಗ್ ಉದ್ಯಮದ ದಿಗ್ಗಜರನ್ನು ಒಟ್ಟಿಗೆ ಸೇರಿಸಿತ್ತು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News