ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ಕ್ಷೇತ್ರದಲ್ಲಿ ಕಾರ್ಮಿಕರ ಸ್ನೇಹ ಸಮ್ಮೇಳನ""
 ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು  ಎಂಎಸ್ ರಾಮಯ್ಯ ಬಡಾವಣೆಯ ನಾಗಸಂದ್ರ ಮೆಟ್ರೋ  ಸ್ಟೇಷನ್ ಹತ್ತಿರ ಇರುವ  ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಕಾರ್ಮಿಕರ ಅಧ್ಯಕ್ಷರಾದ ಜಿಕೆ ಮಂಜುನಾಥ್ ರವರು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದರು.
 ಈ ಕಾರ್ಯಕ್ರಮದಲ್ಲಿ ಕಾರ್ಮಿಕರ ಅಧ್ಯಕ್ಷ ಮಂಜುನಾಥ್  ಪ್ರಸ್ತಾವಿಕ ನುಡಿಯನ್ನು  ಬಂದಿರುವಂತಹ ಸ್ನೇಹಿತರ ಆದ ಕಾರ್ಮಿಕರಿಗೆ ಕ್ಷೇತ್ರದ ಬೆಳವಣಿಗೆ ಬಗ್ಗೆ ಹಾಗೂ ಇಲ್ಲಿನ ಹೆಚ್ಚು ಕಾರ್ಮಿಕರು ಇರುವ ಈ ಕೈಗಾರಿಕಾ  ಪ್ರದೇಶದಲ್ಲಿ ಆಗಿರುವುದರಿಂದ  ಸರ್ಕಾರದಿಂದ  ಸಿಗುವಂತಹ ಮೂಲಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಕೊಟ್ಟರು ಇದೇ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಸ್ನೇಹ ಸಮ್ಮೇಳನಕ್ಕೆ ಕಾರ್ಮಿಕರು ನನ್ನ ಸ್ನೇಹಿತರೆ ಇದ್ದ ಹಾಗೆ ಏಕೆಂದರೆ ನಾನು ಸುಮಾರು ವರ್ಷಗಳ ಕಾಲ ಕಾರ್ಮಿಕರನ್ನಾಗಿ ಕೆಲಸ ನಿರ್ವಹಿಸಿದ್ದೇನೆ ನಿಮ್ಮ ಕಷ್ಟ ನನಗೆ ಚೆನ್ನಾಗಿ ತಿಳಿದಿದೆ ನಾನು ಯಾವಾಗಲೂ ನಿಮ್ಮ ಜೊತೆಯಲ್ಲೇ ಇರುತ್ತೇನೆ ನಿಮಗೆ ನಾನು ಏನೇ ಕಷ್ಟ ಬಂದರೂ ನಿಮಗೆ ನಾನು ಸ್ಪಂದಿಸುತ್ತೇನೆ ಸರ್ಕಾರದ ಮೂಲ ಸೌಕರ್ಯಗಳು ನಿಮಗೆ  ನಾನು  ಸಾಕಷ್ಟು ಮಾಡಿಕೊಟ್ಟಿದ್ದೇನೆ ಇನ್ನು ಮುಂದೆ ಕೂಡ ನಾನು ಕಾರ್ಮಿಕರಿಗೆ ಕೆಲಸ ಕಾರ್ಯಗಳು ಮಾಡಿಕೊಡುತ್ತೇನೆ ಕ್ಷೇತ್ರದ ಬೆಳವಣಿಗೆ ದೇಶದ ಬೆಳವಣಿಗೆ ನಿಮ್ಮಂದನೆ ಆಗುವಂತದ್ದು ಎಂದು  ನುಡಿದರು.
 ಇದೇ ಸಂದರ್ಭದಲ್ಲಿ ಡೈನಮಿಕ್ ಸಿಸ್ಟಮ್ ಎಂಡಿ ಸುರೇಂದರ್ ರಾವ್ ಹಾಗೂ ಸಿ ಎಂ ಸಿ ಎಮ್ ಡಿ ಯಾದ ನಾರಾಯಣ್ ಮತ್ತು ಎಸ್ಎಲ್ಎನ್  ಪ್ರಿಶನ್ ವರ್ಕ್  ಮ್ಯಾನುಫ್ಯಾಕ್ಚರಿಂಗ್ ಮಿಷನ್ ಕಂಪನಿ ಹನುಮಂತೇಗೌಡ ಹಾಗೂ ಎ ಸಿ ಇ ಗ್ರೂಪ್ ರವರು ಕಾರ್ಮಿಕ ವರ್ಗದವರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು  

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News