ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲ್ ನಗರ ದ ಬಸಪ್ಪನ ಕಟ್ಟೆಯಲ್ಲಿರುವ ದುಗ್ಗಲಮ್ಮ ದೇವಸ್ಥಾನಕ್ಕೆ ಒಂದು ಲಕ್ಷ ರೂ ದೇಣಿಗೆ ನೀಡಿ ಹಾಗೂ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಸಂಘಟನಾ ಕಾರ್ಯಕ್ರಮದಲ್ಲಿ ಭಾಗಿಯಾದ  ಕಾಂಗ್ರೆಸ್ ಅಭ್ಯರ್ಥಿ ಪಿ ಎನ್ ಕೃಷ್ಣಮೂರ್ತಿ"" 
ಪೀಣ್ಯ ದಾಸರಹಳ್ಳಿ:  ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ರಾಜಗೋಪಾಲ್ ನಗರದ ಬಸಪ್ಪನ ಕಟ್ಟೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಘಟಕ ಸಂಘಟನಾ ಕಾರ್ಯಕ್ರಮವನ್ನು ಚೊಕ್ಕಸಂದ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ನಿರ್ಮಲಮ್ಮ ಹಾಗೂ ಹೆಗ್ಗನಹಳ್ಳಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಮಣಿ ಸುಬ್ರಮಣ್ಯ ಇವರ ನೇತೃತ್ವದಲ್ಲಿ ಮಹಿಳಾ ಘಟಕದ ಕಾರ್ಯಕ್ರಮವನ್ನು   ಆಯೋಜನೆ ಮಾಡಲಾಗಿತ್ತು.
 ಈ ಕಾರ್ಯಕ್ರಮದಲ್ಲಿ  ಕೆಪಿಸಿಸಿ ಸದಸ್ಯ ಹಾಗೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾದ ಪಿಎನ್ ಕೃಷ್ಣಮೂರ್ತಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಹಾಗೆ 40% ಕಮಿಷನ್ ಹಾಗೂ ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೆ ಹೋಗಿದೆ ಇದರ ಜೊತೆಗೆ ಅಡಿಗೆ ತೈಲ ಮತ್ತು  ಗ್ಯಾಸ್ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಕೂಡ ಜಾಸ್ತಿ ಆಗಿದೆ ಇಂತಾ ಸರ್ಕಾರ ನಮಗೆ ಬೇಡ ಎಂದು ದಿಕ್ಕಲಿಸುವ ಮೂಲಕ ನಮ್ಮ ಕಾಂಗ್ರೆಸ್ ಸರ್ಕಾರ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಸರ್ಕಾರ ಅಂದರೆ ಕಾಂಗ್ರೆಸ್ ಸರ್ಕಾರ ಬೇಕಾಗಿರುವ ದಿನನಿತ್ಯದ ವಸ್ತುಗಳು ನಾವು ಕಡಿಮೆ ಮಾಡುತ್ತೇವೆ ನಮ್ಮ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವರುಗಳ ನೇತೃತ್ವದಲ್ಲಿ ಹಲವಾರು ಬಾರಿ ವಿಧಾನಸಭೆಯು ವಿಧಾನ ಸಭೆಯ ಒಳಗೆ ಹೊರಗೆ ಹೋರಾಟ ಮಾಡಿದರು ಈ ಬಿಜೆಪಿ ಸರ್ಕಾರಕ್ಕೆ ಕಿವಿ ಮತ್ತು ಕಣ್ಣುಗಳು ಇಲ್ಲದಂತೆ ವರ್ತಿಸುತ್ತಿದ್ದಾರೆ. 
ಕ್ಷೇತ್ರದ ಕ್ಷೇತ್ರದಲ್ಲಿ ನಾನು ನಾಲ್ಕು ವರ್ಷದಿಂದ ಕ್ಷೇತ್ರದ ಜನತೆಯ ಕಷ್ಟ ಸುಖಕ್ಕೆ ಸ್ಪಂದಿಸುತ್ತಾ ಬಂದಿದ್ದೇನೆ ಮಹಾಮಾರಿ ಕರೋನದಲ್ಲಿ ಪ್ರತಿದಿನ ಒಂದು ಲಕ್ಷ ಜನರಿಗೆ ಊಟ  ತಯಾರಿಸಿ ನಮ್ಮ ಕಾರ್ಯಕರ್ತರು ಮುಖಂಡರ ಜನರು ಇರುವ ಸ್ಥಳಕ್ಕೆ ಊಟ  ವಿತರಿಸುತ್ತಿದ್ದರು ಆಹಾರ ಪದಾರ್ಥಗಳು ಇಟ್ಟು ತರಕಾರಿ ಹೀಗೆ ಅನೇಕ ರೂಪದಲ್ಲಿ ನಿರಂತರವಾಗಿ ನನ್ನ ಸ್ವಂತ ದುಡಿಮೆಯಲ್ಲಿ ನಾನು ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ ಹಾಗೆ ಈ ದಿನ ಬಸಪ್ಪನ ಕಟ್ಟೆಯಲ್ಲಿರುವ ದುಗ್ಗಲಮ್ಮ ದೇವಸ್ಥಾನಕ್ಕೆ 1 ಲಕ್ಷ ರೂಗಳ ದೇಣಿಗೆಯನ್ನು ನೀಡಿದರು  ಹಾಗೆ ಈ ಭಾಗದ ಬಡ ವರ್ಗದ ಜನರಿಗೆ  ಉಡುಗೊರೆಯಾಗಿ ಕುಕ್ಕರ್ ಮತ್ತು ಮಿಕ್ಸಿಯನ್ನು ವಿತರಿಸುತ್ತಿದ್ದೇನೆ ಈ ಬರುವ ಚುನಾವಣೆಯಲ್ಲಿ ಕಾಂಗ್ರೆಸನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಕೈಯಲ್ಲಿದೆ ಎಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಜಿಕೆ ವರ್ಗೀಸ್ ಮತ್ತು ಜಾನ್ಸನ್ ಹಾಗೂ ನಾಗರಾಜ್ ಯಾದವ್ ಉಮೇಶ್ ಏರ್ಟೆಲ್ ಸೋಮಶೇಖರ್ ಸುನಿಲ್ ರಕ್ಷಿತ್ ರವಿ ಗೌಡ ಹಾಗೂ ಮಹಿಳಾ ಮುಖಂಡರು ಗೌರಮ್ಮ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹೆಚ್ಚು ಮಹಿಳಾ ಮುಖಂಡರು  ಸೇರಿದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News