ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಪೀಣ್ಯ ದಾಸರಹಳ್ಳಿ : ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರೋದ್ಯೋಗ ದಿನದಿಂದ ದಿನಕ್ಕೆ ವಿದ್ಯಾವಂತ ಯುವಕರು ಯುವತಿಯರು ಕೆಲಸವಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ ಆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಶಾಸಕಿ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ ಹಾಗೂ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಗೀತಾ ಶಿವರಾಮ್ ಅವರ ನೇತೃತ್ವದಲ್ಲಿ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಬಾಗಲಗುಂಟೆ ಬಿಬಿ ಎಂಪಿ ಕಚೇರಿ ಎದುರುಗಡೆ ಬಿಎಂಟಿಸಿ ಬಸ್ ನಿಲ್ದಾಣದ ಆವರಣದಲ್ಲಿ
ದಿನಾಂಕ: 19.02.2023 ರಂದು ಬೆಳಿಗ್ಗೆ 9:00 ಗಂಟೆಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಗೀತಾ ಶಿವರಾಮ್ ಹೇಳಿದರು.
ಉದ್ಯಮಿ ಶ್ರೇಯಸ್ಸು ಈ ಉದ್ಯೋಗ ಮೇಳದಲ್ಲಿ ರಾಷ್ಟ್ರೀಯ ಬಹು ರಾಷ್ಟ್ರೀಯ ಕಂಪನಿಗಳು ಪಾಲ್ಗೊಳ್ಳಲಿದ್ದು ಉದ್ಯೋಗ ಮೇಳಕ್ಕೆ ಬಂದ ಯುವಕರಿಗೆ ನಿರಾಸೆ ಆಗಬಾರದೆಂದು ಎಲ್ಲ ತರಹದ ದೊಡ್ಡ ಕೈಗಾರಿಕಾ ಮತ್ತು ಸಣ್ಣ ಕೈಗಾರಿಕಾ 50ಕ್ಕೂಹೆಚ್ಚು ಕಂಪನಿಗಳು ಹಾಗೂ ಉದ್ಯಮಿಗಳಿಗೆ ಆಹ್ವಾನಿಸಿದ್ದು ಇದರಲ್ಲಿ ಬ್ಯಾಂಕ್ ಗಳ. ಆಟೋಮೊಬೈಲ್ ಭಾಗವಹಿಸಲಿವೆ ಎಂದರು.
ದಾಸರಹಳ್ಳಿ ಕ್ಷೇತ್ರದ ಶಾಸಕಿ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ ಗೀತಾ ಶಿವರಾಮ್ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಉದ್ಯೋಗ ಮೇಳದ ಪ್ರಚಾರಕ್ಕೆ ತಯರಾದ ವಾಹನಗಳಿಗೆ ಪೂಜಾ ಪುನಸ್ಕಾರ ಸಲ್ಲಿಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಪತ್ರಿಕಾಗೋಷ್ಠಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಜುನಾಥ್ ನಾಗಯ್ಯ, ಮುಖಂಡ ಕೇಶವ ಆಚಾರ್ಯ, ಪ್ರಕಾಶ್, ಯುವ ಮುಖಂಡರಾದ ಪ್ರಕಾಶ್, ಮೂರ್ತಿ, ಮಹಿಳಾ ಮುಖಂಡರಾದ ರೇವತಿ ರೇಣುಕಮ್ಮ ಮುಂತಾದವರು ಇದ್ದರು.