ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದಿಂದ 500ಕ್ಕೂ ಹೆಚ್ಚು ಕಾರ್ಯಕರ್ತರು ಮುಖಂಡರು ಬಿಜೆಪಿಗೆ ಸೇರ್ಪಡೆ""
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನ ಕಾರ್ಯಕರ್ತರು ಹಾಗೂ ಮುಖಂಡರು ಜೆಡಿಎಸ್ ಪಂಚ ರತ್ನ ರಥ ಯಾತ್ರೆ  ದಿನದಂದೇ ಪಕ್ಷಾಂತರ ಪರ್ವ ಬಿಜೆಪಿ ಪಕ್ಷದ ತತ್ವ, ಸಿದ್ದಾಂತ, ಜನಪರ ಯೋಜನೆಗಳು  ಎಸ್.ಮುನಿರಾಜ ರವರ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳು ಅವರ ಸಂಘಟನಾ ಶಕ್ತಿಯನ್ನು ಮೆಚ್ಚಿ,ಸಚಿವರಾದ ಕೆ ಗೋಪಾಲಯ್ಯ  ಹೇಳಿದರು .ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಸಚಿವರು ಬೆಂಗಳೂರು ಉತ್ತರ ಲೋಕಸಭಾ ಸದಸ್ಯರು  .ಡಿ.ವಿ.ಸದಾನಂದಗೌಡ ರವರು ಹಾಗೂ ಮಾನ್ಯ ಅಬಕಾರಿ ಸಚಿವರು ಹಾಸನ ಮಂಡ್ಯ ಉಸ್ತುವಾರಿ ಸಚಿವರಾದ  ಕೆ.ಗೋಪಾಲಯ್ಯ ರವರ ಸಮ್ಮುಖದಲ್ಲಿ  500 ಕ್ಕೂ ಹೆಚ್ಚು ಮಂದಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಜೆ.ಡಿ.ಎಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಬಿಜೆಪಿ ಪಕ್ಷವು  ಕಾರ್ಯಕರ್ತರಿಗೆ ಆಶಾ ಭಾವನೆ ಹೆಚ್ಚಿಸುವ ಪಕ್ಷವಾಗಿದೆ.  ಕಾರ್ಯಕರ್ತರೇ ಪಕ್ಷಕ್ಕೆ ಬಲ, ಕಾರ್ಯಕರ್ತರೊಂದಿಗೆ ಪಕ್ಷ ಸದಾ ನಿಮ್ಮ ಜೊತೆ ಇರಲಿದೆ. ಎಂದು ಮಾಜಿ ಶಾಸಕರು ಎಸ್ ಮುನಿರಾಜು  ಹೇಳಿದರು
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ  ಜಿ.ಮರಿಸ್ವಾಮಣ್ಣ ರವರು ಮಂಡಲ ಅಧ್ಯಕ್ಷರಾದ  ಎನ್.ಲೋಕೇಶ್ ರವರು ಶಕ್ತಿಕೇಂದ್ರ ಅಧ್ಯಕ್ಷರಾದ  ಗಿರೀಶ್ ರವರು ಹಾಗೂ ಚಿಕ್ಕಬಾಣವಾರ ಲಕ್ಷಿಪುರ ಸೋಮಶೆಟ್ಟಿಹಳ್ಳಿ ಗಾಣಿಗರಹಳ್ಳಿ ಎಲ್ಲಾ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News