ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
- Get link
- X
- Other Apps
"₹ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥ ಯಾತ್ರೆಯಲ್ಲಿ ಎಚ್‌ಡಿಕೆ 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ - ವಿಶ್ವಾಸ"
ಪೀಣ್ಯ ದಾಸರಹಳ್ಳಿ : 2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕ ಸ್ಥಾನ ಪಡೆದು ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ದೇವ ಮೂಲೆಯಾದ ಲಕ್ಷ್ಮಿಪುರ ದಿಂದ ಕಮಗೊಂಡನಹಳ್ಳಿ ಚಿಕ್ಕಬಾಣವಾರ ಬಾಗಲಗುಂಟೆ ಪೀಣ್ಯ ಕೈಗಾರಿಕಾ ಪ್ರದೇಶ ಗಣಪತಿ ನಗರ ರಾಜಗೋಪಾಲನಗರ ಮುಖ್ಯ ರಸ್ತೆ ಹೆಗ್ಗನಹಳ್ಳಿ ಸುಂಕದಕಟ್ಟೆ ವರೆಗೆ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಪಂಚ ರತ್ನ ರಥಯಾತ್ರೆ ಸಂಚರಿಸುವ ಮೂಲಕ ರಸ್ತೆಯಲ್ಲಿ ಹೆಗ್ಗನಹಳ್ಳಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಎಚ್ ಜಿ ಸುರೇಶ್ ಅವರ ಜೆಡಿಎಸ್ ಕಾರ್ಯಾಲಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡಿ ಸಹಸ್ರಾರು ಸಂಖ್ಯೆಯ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಇಲ್ಲಿ ನೆರೆದಿರುವ ಜನ ನೋಡಿದರೆ ಜೆಡಿಎಸ್ ಮತ್ತು ಶಾಸಕ ಆರ್ ಮಂಜುನಾಥ್ ಅವರ ಮೇಲೆ ಜನರು ಇಟ್ಟಿರುವ ನಂಬಿಕೆ ವಿಶ್ವಾಸ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ ಹಾಗಾಗಿಯೇ ಜೆಡಿಎಸ್ 2023ರ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ಸರ್ಕಾರ ರಚನೆಯಾದರೆ ರೈತರ ಹಾಗೂ ಮಹಿಳೆಯರ ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ ಮಾಡಲಾಗುವುದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೈಟೆಕ್ ಆಸ್ಪತ್ರೆ, ಉಚಿತ ಶಿಕ್ಷಣ ಎಲ್ ಕೆ ಜಿ ಇಂದ 12ನೇ ತರಗತಿವರೆಗೂ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗುವುದು ಎಂದರು ಇದೆ ಸಮಯದಲ್ಲಿ ಕ್ಷೇತ್ರದ ಶಾಸಕ ಆರ್ ಮಂಜುನಾಥ ಸಾವಿರಾರು ಜನರು ನೆರೆದಿರುವುದನ್ನು ನೋಡಿ ನಾನು ನಿಮಗೆ ಆಭಾದಿಯಾಗಿದ್ದೇನೆ ನಾನು ನಿಮ್ಮ ಜೊತೆ ಇರುತ್ತೇನೆ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಮುಂಬರುವ ದಿನಗಳಲ್ಲಿ ಎಂದು ಭರವಸೆ ನೀಡಿದರು .
ಕರ್ನಾಟಕ ರಾಜ್ಯದ ರಾಜಧಾನಿಯಲ್ಲಿರುವ ದಾಸರಹಳ್ಳಿ ಕ್ಷೇತ್ರದಲ್ಲಿ ಪಂಚ ರತ್ನ ರಥಯಾತ್ರೆಯ ಅದ್ದೂರಿಯಾಗಿ ಮೆರೆವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂದಾನಪ್ಪ, ಕ್ಷೇತ್ರದ ಅಧ್ಯಕ್ಷ ಮುನಿಸ್ವಾಮಿ,ಬಿ ಎನ್ ಜಗದೀಶ್, ಕಾರ್ಯಾಧ್ಯಕ್ಷ ಎಂ ಮುನೇಗೌಡ್ರು ಉಸ್ತುವಾರಿ ವೆಂಕಟೇಶ್ ದೇವೇಗೌಡರು, ರಾಜ್ಯ ಜೆಡಿಎಸ್ ವಕ್ತಾರ ಚರಣ್ ಗೌಡ್ರು, ನರಸಿಂಹಮೂರ್ತಿ (ಸಿಂಹ), ಜಯರಾಮ್ ನರಸಿಂಹ, ಹೆಚ್ ಜಿ ಸುರೇಶ್,ಆರ್ ಕುಮಾರ್,ಡಾ.ರುದ್ರೇಗೌಡ್ರು,ಕೆಂಪಹೊಬಳಯ್ಯ, ಮುಂತಾದವರು ಭಾಗವಹಿಸಿದ್ದರು.
- Get link
- X
- Other Apps