ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸರ್ಕಾರಿ ರಾಂ ನಾರಾಯಣ್  ಚೆಲ್ಲಾರಾಂ ಕಾಲೇಜು ಮತ್ತೊಂದು ರತ್ನ ಮುಡಿಗೇರಿಸಿಕೊಂಡಿದೆ.  ರಾಷ್ಟ್ರೀಯ ಮೌಲ್ಯಾಂಕ  ಮತ್ತು ಮಾನ್ಯತೆಯ ಸಮಿತಿ ಪರಿಶೀಲಿಸಿದ ನಂತರ  ಕಾಲೇಜಿಗೆ  "ಎ" (ಗ್ರೇಡ್) ಶ್ರೇಣಿ ಪಡೆದುಕೊಂಡಿದೆ""
 ಬೆಂಗಳೂರು :ನಗರದ ಕೇಂದ್ರ ಭಾಗದಲ್ಲಿರುವ ಸರ್ಕಾರಿ ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು 1948ರಲ್ಲಿ ಪ್ರಾರಂಭವಾಗಿದ್ದು, ನಿರಂತರವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಜೊತೆ ಜೊತೆಗೆ ರಾಜಕೀಯ ಮತ್ತು ಆಡಳಿತಾತ್ಮಕ ಕಲೆ ಮತ್ತು ಶಿಕ್ಷಣದ ಕ್ಷೇತ್ರಗಳಿಗೆ ಕೊಡುಗೆಯನ್ನು ನೀಡುತ್ತ ಬಂದಿದೆ. ಈ ಕಾಲೇಜಿಗೆ ರಾಜ್ಯ ಸರ್ಕಾರ ಪ್ರಧಾನ ಮಾಡಿರುವ ಕರ್ನಾಟಕದ "ಅತ್ಯುತ್ತಮ ಸರ್ಕಾರಿ ಕಾಲೇಜು" ಮತ್ತು ಅತ್ಯುತ್ತಮ "ವಿದ್ಯಾರ್ಥಿ ಸಹಾಯ ಕಾರ್ಯಕ್ರಮ"ಗಳಿಗಾಗಿ ನೀಡಿರುವ ಎರಡು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ ಹಾಗೆ ಇಂತಹ ಒಂದು ಸಂತೋಷದ ಸಮಯದಲ್ಲಿ ಈ ಕಾಲೇಜಿಗೆ 75 ವರ್ಷದ "ರಜತ ಮಹೋತ್ಸವವನ್ನು" ಆಚರಿಸುವ ಸಮಯ ಬಂದಿದೆ. ಹಾಗೆ ಕಾಲೇಜಿಗೆ ಮತ್ತೊಂದು ಕೀರ್ತಿಯನ್ನು ತನ್ನದಾಗಿಸಿ ಹೆಚ್ಚಿಸಿಕೊಂಡಿದೆ "ಎ" ಗ್ರೇಡ್   ಶ್ರೇಣಿ  ಅನ್ನು ತನ್ನ ಮುಡಿಗೆ  ಹೇರಿಸಿಕೊಂಡಿದೆ  ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಶೇಖರ್. ಬಿ ತಿಳಿಸಿದರು.
 ಕಳೆದ ಜುಲೈ ತಿಂಗಳಲ್ಲಿ 2022.ನಾಲ್ಕನೇ ಸರಣಿಯಲ್ಲಿ ನ್ಯಾಕ್ ಮಾನ್ಯತೆಗೆ ಒಳಪಟ್ಟಂತೆ ಈ ಕಾಲೇಜಿನಲ್ಲಿ ಮೌಲ್ಯಮಾಪನ ಮಾಡಿ "ಬಿ"    ಶ್ರೇಣಿಯನ್ನ ನೀಡಿತ್ತು. ಈ ಫಲಿತಾಂಶ ಕಾಲೇಜಿನ ಸಿಬ್ಬಂದಿಗೆ ನಿರತ್ಸಾಹ ಪಡಿಸಿತ್ತು. ಹಾಗಾಗಿ ತಜ್ಞರು ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೆ  ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರ ಪ್ರದೀಪ್ ಪಿ. ಹಾಗೂ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರುಗಳ ಜೊತೆ ಚರ್ಚೆ ಮಾಡಿ ಇವರ ಮಾರ್ಗದರ್ಶನದೊಂದಿಗೆ ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನ ಸಲ್ಲಿಸಲಾಗಿತ್ತು  ತದನಂತರ  ಇದಕ್ಕೆ ಸಂಬಂಧಿಸಿದ ಇಲಾಖೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿಯ ಮುಂದೆ ಮನವಿ ಮಾಡಿಕೊಂಡ ನಂತರ ಒಂದು ಸಮಿತಿಯನ್ನು ರಚನೆ ಮಾಡಿ ಬೇರೆ ಬೇರೆ ರಾಜ್ಯದ ಮೂರು ಜನರ ತಂಡವನ್ನು ಕಾಲೇಜಿಗೆ ಮರು ಭೇಟಿ ನೀಡಲು ಅವಕಾಶ ಮಾಡಿತ್ತು. ಈ ನ್ಯಾಕ್ ಪೀರ್ ತಂಡವು ಕಾಲೇಜಿಗೆ ಭೇಟಿ ನೀಡಿ ಎರಡು ದಿನಗಳ ಕಾಲ ಅಂದರೆ ಫೆಬ್ರವರಿ 9 ಮತ್ತು 10ನೇ ದಿನಾಂಕದಂದು ಬಂದು ದಾಖಲೆಗಳ ಕಡತಗಳನ್ನು  ದೀರ್ಘ ಪರಿಶೀಲನೆ ಮಾಡಿತ್ತು ಈ ಸಮಯದಲ್ಲಿ  ಸ್ನಾತಕೋತ್ತರ ವಿಭಾಗ ಮತ್ತು ಪದವಿ ಎಲ್ಲಾ ವಿಭಾಗಗಳ ಪರಿಶೀಲಿಸಿ ಗ್ರಂಥಾಲಯ ಲ್ಯಾಬ್ ಕ್ರೀಡಾ ವಿಭಾಗ ಕ್ಯಾಂಟೀನ್ ಶೌಚಾಲಯವನ್ನು ಪರಿಶೀಲಿಸಿ ಹಾಗೆ ಸಿಬ್ಬಂದಿ ಯೋಡನೆ ಹಾಗೂ ಹಳೆಯ ವಿದ್ಯಾರ್ಥಿಗಳೊಡನೆ ಮತ್ತು ಈಗಿನ  ವಿದ್ಯಾರ್ಥಿಗಳ ಮತ್ತು ಪೋಷಕರ ಯೊಡನೆ ಎಲ್ಲ ಉನ್ನತ ವರ್ಗದೊಡನೆ ಸಂವಾದವನ್ನು ಮಾಡಿದರು ಎಂದು  ಸಂಚಾಲಕರಾದ ಡಾ. ಪ್ರಹ್ಲಾದ್ ಚೌದರಿ. ತಿಳಿಸಿದರು ಇದೇ ಸಮಯದಲ್ಲಿ  ಪರಿಶೀಲನೆ ಆದ ನಂತರ ನಮ ಕಾಲೇಜಿಗೆ "ಎ" ಶ್ರೇಣಿ (ಗ್ರೇಡ್)  ಬಹಳ ಖುಷಿ ತಂದುಕೊಟ್ಟಿದೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಐ.ಕ್ಯೂ.ಎ.ಸಿ. ಮುಖ್ಯಸ್ಥ ಡಾ. ಸತೀಶ್ ಎಚ್. ಕೆ. ಸಹಾಯಕರಾದ ಡಾ .ಎಂ.ಸಿ ಪ್ರಕಾಶ್ ಹಾಗೂ ವಾಣಿಜ್ಯಶಾಸ್ತ್ರ ಮತ್ತು ಎಂ.ಬಿ.ಎ. ಮುಖ್ಯಸ್ಥ  ಡಾ. ಎಜಾಜ್ ಅಹಮದ್ ಖಾನ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಟರಾಜ್ ಡಿ.ಕೆ. ಉರ್ದು ವಿಭಾಗದ ಡಾ ಮುನೀರ್ ಅಹಮದ್ ಹಾಗೂ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ ನರಸಿಂಹ ರಾಜು .ಕೆ. ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಸಂತೋಷವನ್ನು ಹಂಚಿಕೊಂಡರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News