ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಉಚಿತ ಆರೋಗ್ಯ ತಪಾಸಣೆ ಜಿಎನ್ ಆರ್ ಫೌಂಡೇಶನ್ ನಿಂದ ಏರ್ಪಡಿಸಲಾಗಿತ್ತು ""
ಪೀಣ್ಯ ದಾಸರಹಳ್ಳಿ: ದಿವಂಗತ ಜಿ ನಾರಾಯಣ ರೆಡ್ಡಿ ಅವರ ಸುಪುತ್ರ ಹಾಗೂ ಜಿಎನ್ಆರ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಜಿ ಮಧುಸೂದನ್ ರೆಡ್ಡಿ ಅವರ ನೇತೃತ್ವದಲ್ಲಿ ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗುಡ್ ವಿಲ್ ಶಾಲೆಯಲ್ಲಿ ನಗರವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಅಂತ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು ಚಾಲನೆ ನೀಡಿದ ನಂತರ ಇಂದಿನ ಈ ಕಾಲಘಟ್ಟದಲ್ಲಿ ಸಮಾಜದಲ್ಲಿ ನಿರ್ಗತಿಕರ ಜನ ಸಮುದಾಯಕ್ಕೆ ಆರೋಗ್ಯ ಸೇವೆ ವಂಚಿತರಾದವರಿಗೆ ನೆರವಾಗಲಿ ಎಂದು ನಮ್ಮ ಫೌಂಡೇಶನ್ ಮೂಲಕ ಉಚಿತ ಆರೋಗ್ಯ ತಪಾಸನೆ ಔಷಧಿ ಮತ್ತು ಪರಿಹಾರವನ್ನು ಹೆಚ್ಚಿನ ಚಿಕಿತ್ಸೆ ನೀಡುವ ಕಾರ್ಯ ಮಾಡುತ್ತೇವೆ ಹಾಗೆ ಕಣ್ಣಿನ ತಪಾಸನೆ ಮಾಡಿದ ನಂತರ ಆ ಕ್ಷಣದಲ್ಲಿ ಉಚಿತ ಕನ್ನಡಕವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ತಪಾಸನೆಗೆ ಬಂದಿರುವಂತಹ ಎಲ್ಲಾ ಸಾರ್ವಜನಿಕರಿಗೂ ಹಣ್ಣು ತಂಪಾದ ಪಾನೀಯವನ್ನು ಹಾಗೂ ಸಾಬೂನನ್ನು ವಿತರಿಸಿದರು ಈ ಸಂದರ್ಭದಲ್ಲಿ ಮಾಲಾದ್ರಿ ರೆಡ್ಡಿ ಶ್ರೀ ಹರಿ ರೆಡ್ಡಿ ಮಂಜು ಹರಿಬಾಬು ಕಿರಣ್ ಪ್ರದೀಪ್ ಸೇರಿದಂತೆ ಹಲವಾರು ಮುಖಂಡರುಗಳು ಪಾಲ್ಗೊಂಡಿದ್ದರು