ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

"ಬಸವ ಸಂಭ್ರಮ ಹಾಗೂ ವಚನ ಅಮೃತ ಮಹೋತ್ಸವ ""
ಬೆಂಗಳೂರು :ನಗರದ ಎನ್ ಹೆಚ್ ಎಂ ಬಡಾವಣೆಯಲ್ಲಿರುವ ಬಸವ ಧ್ಯಾನ ಸೆಂಟರ್ ನಲ್ಲಿ ವಿಶ್ವಗುರು ಬಸವಣ್ಣನವರ  ಭಾವಚಿತ್ರದ ಮೇಲೆ ಹೂವನ್ನು ಹಾಕುತ್ತಾ ದೀಪ ಬೆಳಗುವ ಮೂಲಕ ವಚನ ಅಮೃತ ಮಹೋತ್ಸವ ಕ್ಕೆ ಗುರುಬಸವ ಮಹಾಮನೆ ಮನಗುಂಡಿ ಧಾರವಾಡ ದಿವ್ಯ ಸಾನಿಧ್ಯ ವನ್ನು ವಹಿಸಿರುವ ಪೂಜ್ಯ ಶ್ರೀ ಶ್ರೀ ಶ್ರೀ ಬಸವನಂದ ಸ್ವಾಮೀಜಿಗಳು ಚಾಲನೆ ಕೊಟ್ಟರು ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಇಲ್ಲಿ ಆ ಸೀನರಾಗಿರುವ ಭಕ್ತಾದಿಗಳನ್ನು ಕುರಿತು  ಆಶೀರ್ವಚನವನ್ನು ನೀಡಿದರು ಸುಮಾರು 12ನೇ ಶತಮಾನದಲ್ಲಿ ಮಹಾಕ್ರಾಂತಿ ಧಾರ್ಮಿಕ ಸುಧಾರಣೆಯನ್ನು ಮಾಡಿದ ವಿಶ್ವವನ್ನೇ ಜ್ಞಾನದ ಕಡೆ ತೆಗೆದುಕೊಂಡು ವಿಶ್ವಕ್ಕೆ ಗುರು ಎಂದು ಅನಿಸಿಕೊಂಡಿರುವ ನಮ್ಮ ಬಸವಣ್ಣನವರು ತಮ್ಮ ವಚನಗಳ ಮೂಲಕ ವಿಶ್ವಕ್ಕೆ ಸಾರಿರುವ ಮಹಾನ್ ವ್ಯಕ್ತಿ ಎಂದರೆ ತಪ್ಪಾಗಲಾರದು ನಮ್ಮ ಮಕ್ಕಳಿಗೆ ಹಾಗೆ ನೀವುಗಳು ವಚನಗಳನ್ನು ಕಲಿತಮೇಲೆ ಅರ್ಥ ಮಾಡಿಕೊಂಡು ತಮ್ಮ ಮಕ್ಕಳಿಗೆ ಕಲಿಸಿದ್ದೇ ಆದರೆ ಅದು ನಮ್ಮ ಜೀವನದಲ್ಲಿ ಕಾರ್ಯರೂಪಕ್ಕೆ ಬಂದದ್ದೇ ಆದರೆ ನಮ್ಮ ಇಡೀ ಮನಕುಲಕ್ಕೆ ನಿಜವಾದ ಅರ್ಥ ಎಂದರು. ಹಾಗೆ ಕೆರೆ ಗುಡ್ಡದಲ್ಲಿ ವೀರಶೈವ ಅಧ್ಯಕ್ಷರಾದ ರಾಜೇಂದ್ರಣ್ಣ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ತದನಂತರ ಈ ಶತಮಾನೋತ್ಸದಲಿ ಬಸವ ಶರಣರು ಮತ್ತು ಶರಣೀಯರು ಸಂಭ್ರಮಿಸುವ ಈ ಸಂಭ್ರಮಕ್ಕೆ ಬಹಳ ಮಹತ್ವವಿದೆ ಏಕೆಂದರೆ ನೂರಾರು ವಚನ ಸಾಹಿತ್ಯವನ್ನು ನಮ್ಮ 12ನೇ ಶತಮಾನದಲ್ಲಿ ಕೊಟ್ಟಿರುವ ಎಲ್ಲ ಧರ್ಮಿಯರು ವಚನಕಾರ ವಚನಗಳನ್ನು ತಾವುಗಳು  ಓದಿಕೊಂಡು ಕಲಿತು ನಮ್ಮ ಜೀವನದ ಅಳವಡಿಸಿಕೊಂಡು ತತ್ವ ಸಿದ್ಧಾಂತಕ್ಕೆ ನಾವು ಬದ್ಧರಾಗಿದ್ದೆ ಆದರೆ ನಮ್ಮ ಶಿಕ್ಷಣ ಮೌಲ್ಯ ಹಾಗೂ ಕೌಶಲ್ಯತೆ ಮುಂದಿನ ಪೀಳಿಗೆಗೆ ಕೊಡುಗೆ ಕೊಟ್ಟಂತಾಗುತ್ತದೆ .ಹಾಗೆ  ಕ್ಷೇತ್ರದ ಮತ್ತೋರ್ವ ಅತಿಥಿ ಮಲ್ಲಸಂದ್ರ ಮಾಜಿ ಬಿಬಿಎಂಪಿ ಸದಸ್ಯರಾದ ಲೋಕೇಶ್ ಎನ್ ಈ ಸಂದರ್ಭದಲ್ಲಿ ವಿಶ್ವ ಕಂಡಂತಹ ಮಾನತಾವಾದಿ ಹಾಗೂ ವಿಶ್ವವೇ ನಮ್ಮ ಭಾರತದ ಕಡೆ ತಿರುಗಿ ನೋಡುವಂತಹ ಜ್ಞಾನವನ್ನು ಕೊಟ್ಟಂತಹ ಮಹಾಪೂಜ್ಯ ಭಾವನೆಯಿಂದ ಇಡೀ ವಿಶ್ವ ಭಾರತದ ಕಡೆ ಸಂಸ್ಕಾರವನ್ನು ನೋಡುವಂತದ್ದು ಆಗಿದೆ ಎಂದರೆ ಬಸವಣ್ಣನವರು  ಕಾರಣರು ಈ ವಿಶ್ವ ಗುರು ಬಸವಣ್ಣನವರು ಮಾಡಿರುವಂತಹ ದಿವ್ಯ ವ್ಯಕ್ತಿತ್ವ ವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
 ಇದೇ ಸಂದರ್ಭದಲ್ಲಿ ಚಿನ್ನ ಲಾದ್ರಿ ಟ್ರಸ್ಟ್ (ರಿ) ಬಸವ ಧ್ಯಾನ ಸೆಂಟರ್ ಅಧ್ಯಕ್ಷ ರು ಓಂಕಾರೇಶ್ವರಿ ನೇತೃತ್ವದಲ್ಲಿ ಬಸವ ಸಂಭ್ರಮದಲ್ಲಿ ಭಾಗವಹಿಸಿರುವ ನಮ್ಮ ಬಸವಣ್ಣನವರ ಅನುಸರಿಸಿವ ಮತ್ತು ಭಕ್ತರಿಗೆ ನೆರೆದಿರುವ ಎಲ್ಲರಿಗೂ ಶತಮಾನೋತ್ಸವ ದ ಶುಭ ಕೋರಿದ ನಂತರ ಬಸವಣ್ಣನವರು ಹಾಕಿ ಕೊಟ್ಟಿರುವಂತಹ ವಚನ ಮತ್ತು ಧ್ಯಾನ ಯೋಗ ಪ್ರಾಣಾಯಾಮ ನಮ್ಮ ಮಾನಸಿಕ ಚಿಂತೆ ದೂರವಾಗಬೇಕಾದರೆ ಮತ್ತು ಆರೋಗ್ಯಕರವಾಗಿರಬೇಕಾದರೆ ಧ್ಯಾನ ಯೋಗ ನಿಮಗೆ ನಮ್ಮ ಅನಾರೋಗ್ಯ ಕಾಯಿಲೆಗಳು ಇದ್ದಲ್ಲಿ ದೂರವಾಗುತ್ತವೆ ಏಕೆಂದರೆ ಈ ಧ್ಯಾನ ಸೆಂಟರ್   ಅನ್ನು 12 ವರ್ಷಗಳಿಂದ ನಿರಂತರವಾಗಿ ಜನತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೊಡುವುದರಲ್ಲಿ ಪ್ರಯತ್ನವನ್ನು ಮಾಡಿದೆ ಹಾಗೆ ಶ್ರಮವಹಿಸಿದೆ ಹಾಗೆ ಆಧ್ಯಾತ್ಮಿಕ ನೈಜ ಶಕ್ತಿಯ ಮೂಲಕ ಉಪಯುಕ್ತ ಗ್ರಂಥಗಳನ್ನು ಬಸವ ತತ್ವ ಪ್ರಚಾರ ಹಾಗೂ ಆರೋಗ್ಯ ಸಲಹೆಗಳನ್ನು ವಿಶೇಷವಾಗಿ ತರಗತಿಗಳು ಪ್ರತಿ ಭಾನುವಾರ ಸಂಜೆ 6:00ಗೆ  ಶಿವಾನುಭವ ಚಿಂತನೆ ನಡೆಸುವುದು ಪ್ರತಿ ತಿಂಗಳು ಮೊದಲನೇ ಭಾನುವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಗಳನ್ನು ಕಾಪಾಡಿಕೊಳ್ಳಿ ಎಂದು ಭಾಗವಹಿಸಿರುವ ಸುತ್ತಮುತ್ತಲಿನ ನಗರದ ಭಕ್ತಾದಿಗಳಿಗೆ ವಿನಂತಿಸಿ ಕೊಂಡರು ಈ ಸಂದರ್ಭದಲ್ಲಿ ಬಸವಶ್ರೀ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿಎಚ್ ರಾಜು ಮತ್ತು ಇನ್ನಿತರ  ಭಕ್ತ ವೃಂದದವರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News