ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಶ್ರೀಮದ್ ಭಾಗವತ ಕಥ ಜ್ಞಾನ ಯಜ್ಞ ಸನಾತನ ಧರ್ಮ ಹಾಗೂ ಹಿಂದೂ ಸಂಸ್ಕೃತಿಯುಳ್ಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಪೀಣ್ಯ ದಾಸರಹಳ್ಳಿ ಶ್ರೀ ಪರಮಾಪೂಜ್ಯರಾದಂತಹ ದಯಾ ಸಾಗರದಂತಹ ದಿವ್ಯ ಗುರು ಶ್ರೀ ಆಶುತೋಷ್ ರವರ ಕೃಪಾ ಕಟಾಕ್ಷದಿಂದ ಶ್ರೀಮದ್ ಭಾಗವತ ಮಹಾಪುರಾಣ ಸಪ್ತಾಹದ ಭವ್ಯ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಏಳು ದಿನಗಳ ಕಾಲ ದಿವ್ಯ ಜ್ಯೋತಿ ಜಾಗ್ರತಿ ಸಂಸ್ಥಾನ,ಬೆಂಗಳೂರು ಶಾಖೆ, ಇವರಿಂದ ಆಯೋಜಿಸಲಾಗಿತ್ತು.
ಶ್ರೀ ವೇದ ವ್ಯಾಸರ ತಾವು ರಚಿಸಿದ 17 ಪುರಾಣಗಳು ಅವರಿಗೆ ಆತ್ಮ ತೃಪ್ತಿಯನ್ನು ನೀಡದಾಗ 18ನೇ ಪುರಾಣವಾದ ಶ್ರೀಮದ್ ಭಾಗವತ ಮಹಾಪುರಾಣವನ್ನು ರಚಿಸಿದರು .ಶ್ರೀ ವೇದ ವ್ಯಾಸರು ಮಗನಾದ ಶುಕ ದೇವ ಮುನಿಯವರು ತಮ್ಮ ಶಿಷ್ಯನಾದ ಪರೀಕ್ಷಿತ ಮಹಾರಾಜನಿಗೆ ಬೋಧಿಸಿ ಬ್ರಹ್ಮ ಜ್ಞಾನದ ಮೂಲಕ ಆತನನ್ನು ಮೃತ್ಯುವಿನಿಂದ ಪಾರುಗೊಳಿಸಿ ಮೋಕ್ಷದ ಹಾದಿಯನ್ನು ದಯಪಾಲಿಸಿದರು. ಪರೀಕ್ಷಿತ ಮಹಾರಾಜನು ಕಲಿಯ ಪ್ರಭಾವದಿಂದ ಅಧರ್ಮ ರಾಜನ ಕಿರೀಟವನ್ನು ಧಾರಣೆ ಮಾಡಿದಾಗ ಬುದ್ಧಿ ಭ್ರಷ್ಟನಾಗಿ ಶಮೀಕ ಋಷಿ ಧ್ಯಾನದಲ್ಲಿ ಮುಳುಗಿರುವಾಗ ಸತ್ತ ಸರ್ಪವನ್ನು ಕೊರಳಿಗೆ ಹಾಕಿ ಬಿಡುತ್ತಾನೆ. ಇದನ್ನು ಕಂಡ ಶಮೀಕ ಋಷಿಯ ಮಗ ಶೃಂಗಿ ಋಷಿ ಏಳು ದಿನದೊಳಗೆ ತಕ್ಷಕ ಸರ್ಪ ಕಚ್ಚಿ ಸಾವು ಬರಲಿ ಎಂದು ಶಪಿಸುತ್ತಾರೆ ಇದನ್ನು ತಿಳಿದ ಪರೀಕ್ಷಿತ ಮಹಾರಾಜನು ಪಶ್ಚಾತಾಪ ಪಟ್ಟು ಶುಕ ದೇವ ಮುನಿಯ ಹತ್ತಿರ ಬಂದಾಗ ಮಹಾ ಪುರಾಣವನ್ನು ಬೋಧಿಸಿ ಪರೀಕ್ಷಿತ ಮಹಾರಾಜರನ್ನು ಸಾವಿನ ದವಡೆಯಿಂದ ದಾಟಿಸಿ ಮುಕ್ತಿ ಮೋಕ್ಷವನ್ನು ಬ್ರಹ್ಮ ಜ್ಞಾನದ ಮೂಲಕ ಬೋಧಿಸುತ್ತಾರೆ.
ಶ್ರೀಮದ್ ಭಾಗವತ ಕಥಾ ಜ್ಞಾನ ಯಜ್ಞವನ್ನು 8ನೇ ಮೈಲಿ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಪಾಟಿದಾರ್ ಸಮಾಜ ದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮಕ್ಕೆ ಶ್ರೀ ಆಶುತೋಷ್ ಮಹಾರಾಜ್ ರವರ ಶಿಷ್ಯೆ ಭಾಗವತಾಚಾರ್ಯ ಭಾಗವತ ಭಾಸ್ಕರ್ ಸಾಧ್ವಿ ವೈಷ್ಣವಿ ಭಾರತೀಯರು ನಡೆಸಿಕೊಟ್ಟರು .ಸನಾತನ ಧರ್ಮ ದ ಸಾರ ತತ್ವ ಭಾರತೀಯ ಮಹಾನ್ ಗ್ರಂಥವಾದ ಶ್ರೀಮದ್ ಭಾಗವತ್ ಪುರಾಣದಲ್ಲಿ ಅಡಕವಾಗಿರುವ ಶ್ರೀ ಕೃಷ್ಣ ಪರಮಾತ್ಮನ ದಿವ್ಯ ಲೀಲೆಗಳನ್ನು ಆಧ್ಯಾತ್ಮಿಕ ಸಾರ ತತ್ವದೊಂದಿಗೆ ಮಧುರ ಭಜನೆ ಯೊಂದಿಗೆ ಪ್ರಸ್ತುತಪಡಿಸಿದರು.
ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠ, ಬಸವನಗುಡಿ ಸ್ವಾಮಿ ಅನಿಲಾಯನಂದಜೀ ಮಹಾರಾಜ್ ,
ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠ ತಂಗನಹಳ್ಳಿ,
ಶ್ರೀ ಬಸವ ಮಹಾಲಿಂಗ ಸ್ವಾಮಿಯವರು,
ಶ್ರೀವನಕಲ್ಲು ಮಠ,ಶಿವಗಂಗೆ, ಡಾಬಸ ಪೇಟೆ, ಶ್ರೀ ಡಾ||ಬಸವ ರಾಮಾನಂದ ಸ್ವಾಮಿ,ಚಾಮರಾಜನಗರ ಕೊಳ್ಳೇಗಾಲ, ಕುಂತೂರು ವೀರ ಸಿಂಹಾಸನ ಮಠ ಅಧ್ಯಕ್ಷರಾದ ಶ್ರೀ ಶಿವಪ್ರಭು ಸ್ವಾಮಿಯವರು,ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿ, ಸುಕ್ಷೇತ್ರ ಶ್ರೀ ಸಾಲೂರು ,ಬೃಹನ್ಮಠ,ಶ್ರೀ ಕ್ಷೇತ್ರಮಲೆ ಮಹದೇಶ್ವರ ಬೆಟ್ಟ,ಮತ್ತು ಇತರ ಸ್ವಾಮೀಜಿಯವರು ಮತ್ತು ದಿವ್ಯಜ್ಯೋತಿ ಜಾಗ್ರತಿ ಸಂಸ್ಥಾನ ದ ಸಾಧ್ವಿ ರಿತು ಭಾರತಿ, ಸಾಧ್ವಿ ಉನ್ಮೇಷಾ ಭಾರತಿ, ಮಠದ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ದಾಸರಹಳ್ಳಿ ಮಹಾ ಭಕ್ತ ಮಹನೀಯರು ಹಾಗೂ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.