ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


"ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿ ಲೋಕಾರ್ಪಣೆ"



ಪೀಣ್ಯ ದಾಸರಹಳ್ಳಿ : ಸಮಾಜದಲ್ಲಿ ಪವಿತ್ರ ಕ್ಷೇತ್ರ ಎಂದರೆ ಮಠ ಮಾನ್ಯಗಳು ಅದರಲ್ಲಿ ಒಂದಾದ ಸಂಸ್ಥಾನ  ಆದಿಚುಂಚನಗಿರಿ ಮಹಾಸಂಸ್ಥಾನ ಒಂದು ಎಂದು ಪೀಠಾಧೀಶರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು . ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿ ಲೋಕಾರ್ಪಣೆ ಮಾಡಿದರು.
 ಮಾಜಿ ನಗರಸಭಾ ನಾಮನಿರ್ದೇಶನ ಸದಸ್ಯ ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ದಾಸರಹಳ್ಳಿ ಕಾಂಗ್ರೆಸ್ ಮುಖಂಡ ಧನಂಜಯ್ ಅವರ ನೇತೃತ್ವದಲ್ಲಿ ಗಂಗಾಧರಪ್ಪ ಕಾಂಪ್ಲೆಕ್ಸ್ ಸರ್ಕಲ್ ದಲ್ಲಿ  ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಪುತ್ಥಳಿ ಅನಾವರಣ ಸಮಾರಂಭ ಆಯೋಜಿಸಿದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
 ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಪುತ್ಥಳಿ ಅನಾವರಣ ಪ್ರಯುಕ್ತ ಧನಂಜಯ್ ಅವರ ನಿವಾಸದಲ್ಲಿ ಕಾಂಗ್ರೆಸ್ ಮುಖಂಡ ಧನಂಜಯ್ ಅವರ ಕುಟುಂಬದ ಸದಸ್ಯರು  ಶ್ರೀಗಳ  ಪಾದ ಪೂಜೆ ಪುನಸ್ಕಾರ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಗಂಗಾಧರಯ್ಯ, ಗೀತಾ, ಉಮೇಶ್ ಗೌಡ, ಜಯಸೂರ್ಯ,ಬುಲೆಟ್ ಮಂಜು, ಸುರೇಶ್, ಹೇಮಾ ರಾಜೇಂದ್ರನ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಶಾಂತಿಧಾಮ ಶಾಲೆ ಹಾಗೂ ಕಾಲೇಜು ಸಿಬ್ಬಂದಿ ವರ್ಗ, ಶಾಲಾ ಮಕ್ಕಳು, ಪೋಷಕರು ಮುಂತಾದವರು ಇದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News