ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪಿಎನ್ ಕೃಷ್ಣಮೂರ್ತಿಯಿಂದ ಬೆಲೆ ಏರಿಕೆ ಹಾಗೂ 40% ಕಮಿಷನ್ ವಿರುದ್ಧ ಪ್ರತಿಭಟನೆ ಮಾಡಿದರು""
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಪಿ ಎನ್ ಕೃಷ್ಣಮೂರ್ತಿಯವರು ಪ್ರತಿಭಟನೆಗೆ ಜಾಲಹಳ್ಳಿ ಕ್ರಾಸ್ ಬಳಿ ಚಾಲನೆ ನೀಡಿದರು .
ನಂತರ ಬಿಜೆಪಿ ವಿರುದ್ಧ ಹರಿ ಹಾಯ್ದರು ಬೆಲೆ ಏರಿಕೆ ಪೆಟ್ರೋಲ್ ಡೀಸೆಲ್ ದಿನಸಿ ಸಾಮಗ್ರಿಗಳ ಹಾಗೂ ಗ್ಯಾಸ್ ಇನ್ನು ಮುಂತಾದವುಗಳು ತುಂಬಾ ಬೆಲೆ ಏರಿಕೆಯಾಗಿದ್ದು ಹಾಗೆ 40% ಕಮಿಷನ್ ದಂದೆ ಧರ್ಮದ ವಿರುದ್ಧ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಇಂದ ನಡೆಯುತ್ತದೆ ತಕ್ಷಣವೇ ನಿಲ್ಲಿಸಬೇಕೆಂದು ಇದರ ವಿರುದ್ಧವಾಗಿ ಈ ದಿನ ಪ್ರತಿಭಟನೆಯನ್ನು ಸಾವಿರಾರು ಕಾರ್ಯಕರ್ತರ ಜೊತೆ ವಿರೋಧ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಮಾಕಳಿ ಪರಮೇಶ್ ಹಾಗೂ ಜಿಕೆ ವರ್ಗೀಸ್ , ಜಯಂತಿ ಭಗವಾನ್ ಬ್ಲಾಕ್ ಅಧ್ಯಕ್ಷರುಗಳು, ವಾರ್ಡ್ ಅಧ್ಯಕ್ಷರುಗಳು ಹಾಗೂ ಎಲ್ಲಾ ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳ ನೇತೃತ್ವದಲ್ಲಿ, ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.