ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯನ್ನು ಆಚರಣೆ ಮಾಡಿದ ಈಶ್ವರ ಖಂಡ್ರೆ""
 ಬೆಂಗಳೂರು: ಬೆಂಗಳೂರಿನ ರಮಣ  ಮಹರ್ಷಿ ರಸ್ತೆಯಲ್ಲಿರುವ  ವೀರಶೈವ ಲಿಂಗಾಯಿತರ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕಾರ್ಯದರ್ಶಿಗಳಾದ ಈಶ್ವರ್  ಖಂಡ್ರೆ ಅವರು ತ್ರಿವಿಧ ದಾಸೋಹಿ, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ ಪೂಜೆಯನ್ನು ಸಲ್ಲಿಸಿದರು .
ನಂತರ ತ್ರಿವಿಧ ದಾಸೋಹಿ ವಿಶ್ವಗುರು ಬಸವಣ್ಣನವರ  'ಕಾಯಕವೇ ಕೈಲಾಸ' ತತ್ವವನ್ನು ಬದುಕಿನುದ್ದಕ್ಕೂ ಪಾಲಿಸಿದ ಶತಾಯುಷಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನ ನಮಗೆಲ್ಲರಿಗೂ ಸ್ಪೂರ್ತಿ ನೀಡುವಂತಹುದ್ದು.ಅತ್ಯಂತ ಸರಳ ಹಾಗೂ ಸಾರ್ಥಕ ಜೀವನ ನಡೆಸಿ ಹಲವರ ಭವಿಷ್ಯ ಕಲ್ಪಿಸಿದ ನಡೆದಾಡುವ ದೇವರಿಗೆ ಅವರ ಪುಣ್ಯ ಸ್ಮರಣೆಯ ಈ "ದಾಸೋಹ ದಿನ"ದಂದು ನನ್ನ ಶತ ಶತ ನಮನಗಳು. ಸಲ್ಲಿಸುವ ಮುಖಾಂತರ ನಮ್ಮ ಜೀವನದಲ್ಲಿ ಅವರ ಸಿದ್ದಾಂತಗಳು ತತ್ವಗಳು ಧಾರ್ಮಿಕ ಮೌಲ್ಯಗಳು ಚಿಂತನೆಗಳ ಮೂಲಕ ನಾವುಗಳು ತೊಡಗಿಸಿಕೊಂಡಿದ್ದೆ ಆದರೆ ಭವಿಷ್ಯತ್ನಲ್ಲಿ ನಮ್ಮ ಸಮಾಜಕ್ಕೆ ಮಾದರಿಯಾಗುತ್ತೇವೆ ಎಂದರು 
ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ  ನಟರಾಜ್ ಸಾಗರನಹಳ್ಳಿ ಹಾಗೂ ಬೆಂಗಳೂರು ನಗರ ಜಿಲ್ಲಾ ಘಟಕ ಅಧ್ಯಕ್ಷ ಗುರುಸ್ವಾಮಿಯವರು ಮಹಾಸಭಾ ನಿರ್ದೇಶಕರು ಉಮೇಶ್ ಬಣಕರ್ ಕಲ್ಪನಾ ಸುಧಾರಣೆ ಸುಮಿತ್ರ ಭಾರತಿ ಉಮೇಶ್ ಮತ್ತು ಮಹಾಸಭಾ ಸಭೆಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News