ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಸರ್ಕಾರಿ ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು
ರೇಸ್‍ಕೋರ್ಸ್ ರಸ್ತೆ, ಬೆಂಗಳೂರು
ಸರ್ಕಾರಿ ಆರ್.ಸಿ. ಕಾಲೇಜಿನ ಮುಡಿಗೆ ಕರ್ನಾಟಕ ರಾಜ್ಯದ ಎರಡು ಪ್ರಶಸ್ತಿ ಗರಿ
     ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಸರ್ಕಾರಿ ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು 1948ರಲ್ಲಿ ಪ್ರಾರಂಭವಾಗಿದ್ದು,  ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಜೊತೆಗೆ, ರಾಜಕೀಯ, ಆಡಳಿತಾತ್ಮಕ, ಕಲೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ನಿರಂತರ ಕೊಡುಗೆಯನ್ನು ನೀಡುತ್ತಿದೆ.  2023ನೇ ವರ್ಷದಲ್ಲಿ 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಾ, “ರಜತ ಮಹೋತ್ಸವ” (Pಟಚಿಣiಟಿum ಎubiಟee) ಆಚರಿಸುವ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಪ್ರಧಾನ ಮಾಡಿರುವ ಕರ್ನಾಟಕದ “ಅತ್ಯುತ್ತಮ ಸರ್ಕಾರಿ ಕಾಲೇಜು” ಮತ್ತು “ಅತ್ಯುತ್ತಮ ವಿದ್ಯಾರ್ಥಿ ಸಹಾಯ ಕಾರ್ಯಕ್ರಮ”ಗಳಿಗಾಗಿ ನೀಡುವ ಎರಡು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. 

     ಕಾಲೇಜಿನಲ್ಲಿ ಸುಮಾರು 4200 ವಿದ್ಯಾರ್ಥಿಗಳು ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರದ ವಿಷಯಗಳನ್ನು ವ್ಯಾಸಂಗ ಮಾಡುತ್ತಿದ್ದಾರೆ.  ಕಾಲೇಜಿನಲ್ಲಿ ., ಬಿಕಾಂ, ಬಿಕಾಂ  ಟೂರಿಸಂ ಮ್ಯಾನೇಜ್ಮೆಂಟ್, ಬಿಕಾಂ -ಡಾಟಾ ಅನಲಿಸ್ಟಿಕ್, ಬಿಕಾಂ ಲಾಜಿಸ್ಟಿಕ್ಸ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ,ಬಿ ಕಾಂ ಫೈನಾನ್ಸ್ ಅಂಡ್ ಅಕೌಂಟಿಂಗ್, ಬಿಬಿಎ- ಎವಿಯೇಷನ್  ಮ್ಯಾನೇಜ್ಮೆಂಟ್, ಸ್ನಾತಕೋತ್ತರ ಪದವಿ ಕೊಡಿಸುಗಳಾದ ಎಂಕಾಂ .(ಎಫ್ & ಎ) ಎಂ. ಬಿ. ಎ,ಕೋರ್ಸ್‍ಗಳು ನಡೆಯುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ   , ಕೋರ್ಸ್‍ಗಳನ್ನು ಪ್ರಾರಂಭಿಸಲಾಗಿದೆ.  ಬೆಂಗಳೂರು ನಗರ ವಿಶ್ವವಿದ್ಯಾಲಯದ ಅನುಮೋದಿತ ಆರ್.ಸಿ. ಸಂಶೋಧನಾ ಕೇಂದ್ರದ ಮೂಲಕ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಅನೇಕರು ಪಿಹೆಚ್.ಡಿ. ಪದವಿಯನ್ನು ಗಳಿಸಿರುತ್ತಾರೆ.  ಬೆಂಗಳೂರು ನಗರ, ಹಾಗೂ ಗ್ರಾಮಾಂತರ,  ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮುಂತಾದ ಜಿಲ್ಲೆಗಳ ಬಡ, ಮಧ್ಯಮ ವರ್ಗದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದು, ಕಾಲೇಜಿಗೆ ಅನೇಕ ರ್ಯಾಂಕ್‍ಗಳು ಲಭಿಸಿವೆ.  
      ಎಲ್ಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಸುವುದರ ಜೊತೆಗೆ,  ವಿವಿಧ ಕೌಶಲ್ಯಗಳನ್ನು ಕಲಿಸುವ ಉದ್ದೇಶದಿಂದಾಗಿ ಸಿಎಂಕೆಕೆವೈ ಅಡಿಯಲ್ಲಿ “ಆರ್.ಸಿ. ಕೌಶಲ್ಯ ಕೇಂದ್ರ” ಪ್ರಾರಂಭಿಸಲಾಗಿದೆ.  ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತರಬೇತಿ ನೀಡಲು ಹಾಗೂ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ, 15 ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.  ಬಿ.ಕಾಂ. ಜೊತೆಯಲ್ಲಿಯೇ ಸಿ.ಎ. ಕೋರ್ಸ್ ಮತ್ತು ಸಿ.ಎಂ.ಎ. ಕೋರ್ಸ್ ಮಾಡಲು ತರಬೇತಿ ನೀಡುತ್ತಿರುವ ಕರ್ನಾಟಕದ ಏಕೈಕ ಸರ್ಕಾರಿ ಕಾಲೇಜಾಗಿದೆ.  ಈ ಕೋರ್ಸ್‍ಗಳಿಗೆ ತಗುಲುವ ವೆಚ್ಚವನ್ನು ಸಿ.ಎ. ಸಂಸ್ಥೆ, ಸಿ.ಎಂ.ಎ. ಸಂಸ್ಥೆ ಹಾಗೂ ದಾನಿಗಳ  ಮೂಲಕ ಭರಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.  ಇದರ ಜೊತೆಗೆ, ಎನ್.ಇ.ಟಿ., ಎಸ್.ಎಲ್.ಇ.ಟಿ., ಐ.ಎ.ಎಸ್., ಕೆ.ಎ.ಎಸ್ ಮುಂತಾದ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.
     ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತಹ, ಜಿ.ಎಸ್.ಟಿ., ಅಡ್ವಾನ್ಸ್ ಎಕ್ಸೆಲ್, ಸಾಫ್ಟ್ ಸ್ಕಿಲ್ಸ್,  ಡಿಜಿಟಲ್ ಮಾರ್ಕೆಟಿಂಗ್, ಫೈüನಾನ್ಷಿಯಲ್ ಮಾರ್ಕೆಟಿಂಗ್, ಸಂವಹನ ಕೌಶಲ್ಯ ಮುಂತಾದ ವಿಷಯಗಳನ್ನು ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.  
      ಪಠ್ಯದ ಜೊತೆಗೆ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ, ಎನ್.ಸಿ.ಸಿ., ಎನ್.ಎಸ್.ಎಸ್., ರೇಂಜರ್ಸ್ ಮತ್ತು ರೋವರ್ಸ್, ರೆಡ್‍ಕ್ರಾಸ್ ಕ್ಲಬ್, ಕನ್ನಡ ಸಂಘ, ಸಾರಸ್ವತ ಸಂದೀಪ, ಇನ್ನೋವೇಷನ್ ಕ್ಲಬ್, ಅಡ್ವೆಂಚರ್ ಕ್ಲಬ್, ಚುನಾವಣಾ ಸಾಕ್ಷರತಾ ಸಮಿತಿ, ಮ್ಯಾನೇಜ್‍ಮೆಂಟ್ ಫೆಸ್ಟ್ ಸಮಿತಿ, ಪ್ಲೇಸ್‍ಮೆಂಟ್ ಸೆಲ್, ಲಲನಾ ಮಹಿಳಾ ವೇದಿಕೆ, ವಾರದ ಸಮಾವೇಶ- ಮೊದಲಾದ ಸಮಿತಿಗಳು ನಡೆಸುವ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ.  
    ಸರ್ಕಾರಿ ಆರ್.ಸಿ. ಕಾಲೇಜಿನ ಮತ್ತು ಬೆಂಗಳೂರು ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳ ಸರ್ಕಾರಿ ಕಾಲೇಜಿನ ಬಡ, ಮಧ್ಯ, ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ,  “ಪ್ರಗತಿಪಥ” ಎಂಬ ಹೆಸರಿನಡಿಯಲ್ಲಿ ಪ್ರತಿ ವರ್ಷವೂ, ಉದ್ಯೋಗ ಮೇಳವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗುತ್ತಿದೆ.  ಈ ರೀತಿಯ ಉದ್ಯೋಗ ಮೇಳವನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಉದ್ಯೋಗ ಮೇಳವನ್ನು  ಹಮ್ಮಿಕೊಳ್ಳಲಾಗಿತ್ತು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News