ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"ಕೋಡಿಮಠ ಸ್ವಾಮೀಜಿಯವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪಿಎನ್ ಕೃಷ್ಣಮೂರ್ತಿ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಭವಿಷ್ಯ ಇದೆ ಎಂದು ನೋಡಿದರು"" ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಪಿಎನ್ ಕೃಷ್ಣಮೂರ್ತಿ ಹುಟ್ಟು ಹಬ್ಬವನ್ನು 12 ವಾರ್ಡ್ ಅಧ್ಯಕ್ಷರುಗಳು ಹಾಗೂ ಬ್ಲಾಕ್ ಅಧ್ಯಕ್ಷರುಗಳು ವಿಜೃಂಭಣೆಯಿಂದ ಆಚರಣೆ ಮಾಡಿದರು .
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಪಿಎನ್ ಕೃಷ್ಣಮೂರ್ತಿಯವರ ಹುಟ್ಟುಹಬ್ಬವನ್ನು ಶ್ರೀ ಕೃಷ್ಣ ಚಂದ್ರ ಕನ್ವೆನ್ಷನ್ ಹಾಲ್ನಲ್ಲಿ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮವನ್ನು ಕೋಡಿಮಠ ಸಂಸ್ಥಾಪಕರಾದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪಿ ಎನ್ ಕೃಷ್ಣಮೂರ್ತಿ ಅವರ ಹುಟ್ಟುಹಬ್ಬಕ್ಕೆ ಆಗಮಿಸಿದ ಶುಭ ಹಾರೈಸಿದರು
ಇದೇ ಸಮಯದಲ್ಲಿ ಪಿಎನ್ ಕೃಷ್ಣಮೂರ್ತಿ, ದೃತಿದರಿ, ಅಭಿಷೇಕ್, ಆಕಾಶ್ ಗೌಡ ಸ್ವಾಮೀಜಿಯವರ ಪಾದ ಪೂಜೆಯನ್ನು ಮಾಡಿದರು.
ಈ ವೇಳೆ ಪ್ರತಿ ವರ್ಷದಿಂದ ಈ ವರ್ಷವೂ ಬಹಳ ವಿಭಿನ್ನವಾಗಿ ಅಭಿಮಾನಿಗಳು ಹಾಗೂ ಕ್ಷೇತ್ರದ ಜನತೆಯೊಂದಿಗೆ ಶ್ರೀಗಳ ಪಾದಪೂಜೆ ಮಾಡುವ ಮೂಲಕ ಅವರ ಆಶೀರ್ವಾದ ಪಡೆದುಕೊಂಡು ಬೃಹತ್ ಗಾತ್ರದ ಕೇಕನ್ನು ಕತ್ತರಿಸಿ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಹುಟ್ಟು ಹಬ್ಬದ ಪ್ರಯುಕ್ತ "ಉಚಿತ ಆರೋಗ್ಯ ಶಿಬಿರವನ್ನು" ಏರ್ಪಡಿಸಲಾಗಿತ್ತು.
ಮಹಿಳೆಯರಿಗೆ ಸೀರೆ ಹೆಲ್ಮೆಟ್ ಕಂಬಳಿ ನೀರಿನ ಕ್ಯಾನ್ ಸ್ವೆಟರ್ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರವನ್ನು ವಿತರಣೆ ಮಾಡಿದರು
ಈ ಕಾರ್ಯಕ್ರಮದಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಇದೆ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿಯಾದ ಹನುಮಂತ ರಾಯಪ್ಪ ಹಾಗೂ ಯಶವಂತಪುರ ಅಭ್ಯರ್ಥಿಯಾದ ನಾಗರಾಜ್ ಕಾಂಗ್ರೆಸ್ ಮುಖಂಡ ದಯಾನಂದ್ ಹಾಗೂ ಕೆಪಿಸಿಸಿ ಸದಸ್ಯರುಗಳಾದ ಮಾಕಳಿ ಪರಮೇಶ್ ಕೆ ಜಿ ವರ್ಗೀಸ್ ಜಯಂತಿ ಹಾಗೂ ಕಾಂಗ್ರೆಸ್ ಮುಖಂಡರುಗಳಾದ ರಾಬರ್ಟ್, ಜಾನ್ಸನ್ ಪಾಲ್ಗೊಂಡಿದ್ದರು
ತದನಂತರ ಚೊಕ್ಕಸಂದ್ರ ವಾರ್ಡ್ನ ಅಧ್ಯಕ್ಷ ನಾಗರಾಜ ಯಾದವ್ ಉಮೇಶ್ ಬೃಹತ್ ಗಾತ್ರದ ಸೇಬಿನ ಆಹಾರವನ್ನು ಹಾಕುವ ಮೂಲಕ ಚೊಕ್ಸಂದ್ರ ವಾರ್ಡಿಗೆ ಬರಮಾಡಿಕೊಂಡು ನಂತರ ಬೃಹತ್ ಗಾತ್ರದ ಕೇಕು ಅನ್ನು ಕತ್ತರಿಸುವ ಮೂಲಕ ಜೋಕಸಂದ್ರ ವಾರ್ಡಿನಲ್ಲಿ ಚಾಲನೆ ನೀಡಿದರು ಹಾಗೂ ರಾಜಗೋಪಾಲ್ ನಗರದ ನಾಗರಾಜ್ ಮತ್ತು ದಾಸರಹಳ್ಳಿ ವಾರ್ಡ್ ಅಧ್ಯಕ್ಷ ಸುನಿಲ್ 12 ವಾರ್ಡಿನ ಅಧ್ಯಕ್ಷರುಗಳು ಮತ್ತು ಮಹಿಳಾ ಬ್ಲಾಕ್ ಅಧ್ಯಕ್ಷರುಗಳು ಅಭಿಮಾನಿಗಳು ದಾಸರಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ಶುಭ ಹಾರೈಸಿದರು