ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ದಾಸರಹಳ್ಳಿ ಶಾಸಕ ಆರ್ ಮಂಜುನಾಥ್ ವಿವಿಧ ಕಾಮಗಾರಿಗಳಿಗೆ ಹಾಗೂ ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದರು
ಪೀಣ್ಯ ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್ ಮಂಜುನಾಥ್    ಕ್ಷೇತ್ರದ ಚಿಕ್ಕಬಾಣವಾರ ಪುರಸಭೆ ವ್ಯಾಪ್ತಿಯ ಹೆಸರಘಟ್ಟ ಮುಖ್ಯ ರಸ್ತೆ  ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಕಳೆದ ನಾಲ್ಕುವರೆ ವರ್ಷಗಳಿಂದ ಈ ಭಾಗ ಚಿಕ್ಕಬಾಣಾವರ ಗ್ರಾಮಕ್ಕೆ ಸಂಪರ್ಕಿಸುವ ಎಲ್ಲಾ ಮುಖ್ಯ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಎಡಿಫೈ ಶಾಲೆಯ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ,  ಹೆಸರಘಟ್ಟ ಮುಖ್ಯ ರಸ್ತೆ ಹಾಗೂ ಸಂಪರ್ಕಿಸುವ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿ, ಮಾದರಿ ಪುರಸಭೆಯನ್ನಾಗಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.    ಶೆಟ್ಟಿಹಳ್ಳಿ ವಾರ್ಡ್ ಮೇದರಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು ಹಾಗೂ ಅಬ್ಬಿಗೆರೆ ಲಕ್ಷ್ಮಿ ದೇವಸ್ಥಾನ  ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಕುದ್ದು  ಪರಿಶೀಲಿಸಿದರು . ಇದೇ ಸಂದರ್ಭದಲ್ಲಿ ಕ್ಷೇತ್ರ ಸಂಯೋಜಕರು ಉಸ್ತುವಾರಿಗಳಾದ ಕೆ ಸಿ ವೆಂಕಟೇಶ್,  ಚಿಕ್ಕಬಾಣವರ ಜೆಡಿಎಸ್ ಅಧ್ಯಕ್ಷ
ಗೋವಿಂದರಾಜು, ಜೆಡಿಎಸ್ ಹಿರಿಯ ಮುಖಂಡರಾದ ಗ್ಯಾಸ್ ರಾಜಣ್ಣ, ವಾರದರಾಜು, ಹನುಮಂತಪ್ಪ, ಚೋಟೆ ಬಾಬು, ಅಜಿಜ್ ಬೈ, ಶಿವಕುಮಾರ್, ಶಶಿಕುಮಾರ್, ಕೇಶವಮೂರ್ತಿ, ಚಂದ್ರು, ಇಕ್ಬಾಲ್, ತಿಮ್ಮಣ್ಣ, ಶಕೀಲ್, ಶಿವಣ್ಣ, ಕುಮಾರ್ ಶಂಕ್ರಪ್ಪ, ಗಿರಿಜಮ್ಮ, ಲೀಲಾವತಿ, ಶಿವಲೀಲಾ, ವಿಜಯಲಕ್ಷ್ಮಮ್ಮ, ಬಡಾವಣೆ ನಿವಾಸಿಗಳು ನೂರಾರು ಕಾರ್ಯಕರ್ತರು, ಹಾಗೂ ಅಭಿಮಾನಿಗಳು ಹಾಜರಿದ್ದರು.*   ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ಇಂದು  ಶೆಟ್ಟಿಹಳ್ಳಿ ವಾರ್ಡ್ ಮೇದರಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು ಹಾಗೂ ಅಬ್ಬಿಗೆರೆ ಲಕ್ಷ್ಮಿ ದೇವಸ್ಥಾನ  ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಕುದ್ದು  ಪರಿಶೀಲಿಸಿದರು . ಇದೇ ಸಂದರ್ಭದಲ್ಲಿ ಕ್ಷೇತ್ರ ಸಂಯೋಜಕರು ಉಸ್ತುವಾರಿಗಳಾದ ಕೆ ಸಿ ವೆಂಕಟೇಶ್, ಜೆಡಿಎಸ್ ಹಿರಿಯ ಮುಖಂಡರಾದ ಚಂದ್ರಪ್ಪ, ಕೆಂಪ ಹೋಬಳಿ, ಗಣೇಶ್, ಚಿಕ್ಕ ಮರಿಯಪ್ಪ, ನರಸಿಂಹಮೂರ್ತಿ, ಗ್ರಾಮದ ಹಿರಿಯರಾದ  ರಾಜಣ್ಣ, ವೆಂಕಟೇಶ್, ಸುನಿಲ್, ಅಭಿಮಾನಿಗಳು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News