ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಜಯರಾಮ್ ನರಸಿಂಹ ರವರ ಹುಟ್ಟುಹಬ್ಬ ವನ್ನು ಅದ್ದೂರಿಯಾಗಿ ಕಾರ್ಯಕರ್ತರಿಂದ ಆಚರಣೆ ಮಾಡಿದರು ""
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡ್
 22 ರ ಜೆಡಿಎಸ್ ಪಕ್ಷದ ಅಧ್ಯಕ್ಷ ಆಗಿರುವಂತಹ ಜಯರಾಮ್ ನರಸಿಂಹ ರವರ ಹುಟ್ಟುಹಬ್ಬಕ್ಕೆ ಕ್ಷೇತ್ರದ ಜೆಡಿಎಸ್ ಶಾಸಕರಾದ ಮಂಜುನಾಥ .ಆರ್. ಕೇಕನ್ನು ಕತ್ತರಿಸುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳು ಕೋರಿ ತದನಂತರ ಮುಂದಿನ ದಿನಗಳಲ್ಲಿ ಸಕಲ ಸುಖ ಸಂಪತ್ತು ಐಶ್ವರ್ಯ ಅಧಿಕಾರ ಸಿಗಲಿ ಎಂದು ಹಾರೈಸಿ ಇದೇ ರೀತಿ ಜನಸಾಮಾನ್ಯರನ್ನು ಹಾಗೂ ಬಡ ವರ್ಗದ ಜನತೆಯನ್ನು ಗುರುತಿಸಿ ಅವರ ಕಷ್ಟಗಳಿಗೆ ಸ್ಪಂದಿಸಿ ವಾರ್ಡ್ ನ ಮತ್ತು ಅಕ್ಕ ಪಕ್ಕದ ವಾರ್ಡಗಳ ಜನರು ಮೆಚ್ಚುವಂತಹ ಒಳ್ಳೆಯ ಕೆಲಸಗಳನ್ನು  ಮಾಡಲಿ ಎಂದು ಹಾರೈಸಿದರು ಇಡೀ  ಹೆಗ್ಗನಹಳ್ಳಿ ವಾರ್ಡ್ ಜನತೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿರೋದು ನೋಡಿ ಈ ಭಾಗದ ಜನರು ನಿಮ್ಮ ಮೇಲೆ ಪ್ರೀತಿ ಮತ್ತು ವಿಶ್ವಾಸ ಇಟ್ಟಿರುವುದರಿಂದ ಇಷ್ಟು ಜನ ಸೇರಿರೋದು ಹಾಗೆ ನಿಮ್ಮ ಕಾರ್ಯ ವೈಕಲಿ ಕೂಡ ಜನರು ನೋಡಿ ನಿಮ್ಮ ಶುಭಕೋರಲ್ ಬಂದಿದ್ದಾರೆ ಮುಂದಿನ ದಿನಗಳಲ್ಲಿ ನಿಮಗೆ ಬಹುಶಃ ಇದೆ ಈ ಭಾಗದ ಜನರು  ನಿಮಗೆ ಆಶೀರ್ವಾದ ಮಾಡುತ್ತಾರೆ ಎಂದರು  ಶಾಸಕರು ಸಂತೋಷ ಗೊಂಡರು ಹಾಗೆ ಶುಭ ಹಾರೈಸಿದರು .
ಇದೇ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಈ ಭಾಗದ ಅಧ್ಯಕ್ಷ  ಜಯರಾಮ್ ನರಸಿಂಹ ರವರು ನನಗೆ ಹೆಗ್ಗನಹಳ್ಳಿ ವಾರ್ಡ್ ಕೀರ್ತಿ ಗೌರವ  ಜೀವನ ವೃತ್ತಿ ಬದುಕು  ಆಶ್ರಯ ಇದೆಲ್ಲವನ್ನು  ನನಗೆ  ನೀಡಿದೆ  ಗೌರವಕ್ಕೆ ಈ ಭಾಗದ ಜನತೆಗೆ ಕೊಟ್ಟಿರುವಂತಹ ಪ್ರೀತಿಗೆ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ನನ್ನ ಉಸಿರು ಇರುವ ತನಕ ನನ್ನ ಊರು ನನ್ನ ತವರು  ಹೆಗ್ಗನಹಳ್ಳಿ ವಾರ್ಡ್  ಮತ್ತು ರಾಜಗೋಪಾಲ್ ನಗರ ವಾರ್ಡಿನ ಸಾರ್ವಜನಿಕರಿಗೆ ಅವರ ಕಷ್ಟಗಳಿಗೆ  ಸ್ಪಂದಿಸುವೆ   ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು ಹಾಗೆ ಹುಟ್ಟುಹಬ್ಬಕ್ಕೆ ಬಂದಿರುವಂತಹ  ವಾರ್ಡ್  5000ಕ್ಕೂ ಹೆಚ್ಚು ಜನರಿಗೆ ಕುಕ್ಕರ್ ಬ್ಲಾಂಕೆಟ್   ವಾಲ್ ಕ್ಲಾಕ್ ಸ್ವೆಟರ್ ನೀಡಿದರು ಇದೇ ಸಂದರ್ಭದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರು ಅನ್ನದಾನಪ್ಪ ಹಾಗೂ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಎಂ ಮುನೇಗೌಡ್ರು ಹಾಗೂ ವಾರ್ಡ್ ಅಧ್ಯಕ್ಷರಾದ ರುದ್ರೇಗೌಡ್ರು ಹಾಗೂ ಯುವ ಜನತಾದಳದ ಅಧ್ಯಕ್ಷ ವಿನಯ್ ಕುಮಾರ್ ,ಆಶಾ ಜಯರಾಮ್  ಹೆಗ್ನಳ್ಳಿ ವಾರ್ಡ್ ಯುವ ಘಟಕ ಅಧ್ಯಕ್ಷ ಪ್ರತಾಪ್ ಹಾಗೂ ಜಯರಾಮ್ ನರಸಿಂಹ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ಪ್ರಧಾನ ಕಾರ್ಯದರ್ಶಿ ಚಂದ್ರು ನಯಾಜ್ ಶ್ರೀನಿವಾಸ್ ಯೋಗೇಶ್ ಪ್ರಶಾಂತ್ ಹಾಗೂ ರಾಜಮ್ಮ, ಲಲಿತಮ್ಮ, ಕಮಲಮ್ಮ, ಶಿಲ್ಪ, ಉಮಾ, ಜಯಂತಿ, ವೀಣ, ಲತಾ ಮತ್ತು ದೀಪ ಇನ್ನು ಹಲವಾರು ಜೆಡಿಎಸ್ ಹಿರಿಯ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು , ಸೇರಿ  ಜಯರಾಮ್ ನರಸಿಂಹ ರವರಿಗೆ ಶುಭಾಶಯಗಳು ಕೋರಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News