ಕರ್ನಾಟಕ ಪಾಸ್ಟ್ ಎಕ್ಸಪ್ರೆಸ್ ನ್ಯೂಸ್
""ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ರೇಸ್ ಕೋರ್ಸ್ ರಸ್ತೆ ಬೆಂಗಳೂರು, ಸೃಜನ ಸಂಸ್ಕೃತಿ ಸಾಂಸ್ಕೃತಿಕ ವೇದಿಕೆ 2022-23 ಶೈಕ್ಷಣಿಕ ಸಾಲಿನ ಪ್ರತಿಭಾನ್ವೇಷಣೆ ಉದ್ಘಾಟನೆ""
ಬೆಂಗಳೂರು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು,, ಸೃಜನ ಸಂಸ್ಕೃತಿ ಸಾಂಸ್ಕೃತಿಕ ವೇದಿಕೆ ಪ್ರತಿಭಾನ್ವೇಷಣೆ 2022-23 ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ ಎಸ್ ಎಸ್, ರೇಂಜರ್ಸ್ ಅಂಡ್ ರೋವರ್ಸ್, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಅಡ್ವೆಂಚರ್ ಕ್ಲಬ್, ಲಲನಾ ಮಹಿಳಾ ವೇದಿಕೆ ಹಾಗೂ ಸಿಎಂಕೆಕೆವೈ ಆರ್ ಸಿ ಕೌಶಲ್ಯ ತರಬೇತಿ ಕೇಂದ್ರವನ್ನು ಶಿವಾಜಿನಗರದ ಕ್ಷೇತ್ರದ ಶಾಸಕ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಿಜ್ವಾನ್ ಹರ್ಷದ ರವರು ಉದ್ಘಾಟನೆ ಮಾಡಿದರು ತದನಂತರ . ಕಾಲೇಜು ದಿನಗಳು ಜೀವನದ ಅತ್ಯಮೂಲ್ಯ ದಿನಗಳು. ಈ ದಿನಗಳಲ್ಲಿ ವಿದ್ಯಾರ್ಥಿಗಳು ಓದಲೂ ಬೇಕು ಮತ್ತು ಆನಂದಿಸಲುl ಬೇಕು. ಓದು ಮತ್ತು ಆನಂದದ ಸಮತೋಲನ ವಿದ್ಯಾರ್ಥಿ ಜೀವನದಲ್ಲಿ ಅತ್ಯಾವಶ್ಯಕ"ವೆಂಬ ವಿಧಗಳಿಗೆ ಅರಿವು ಮೂಡಿಸಿದರು .
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರದೀಪ್ ಪಿ ರವರು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಯತ್ತ ಗಮಹರಿಸಿಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಉದ್ಯೋಗಗಿಟ್ಟಿಸಿಕೊಳ್ಳುವಂತಾಗಬೇಕೆಂದು . ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಸರ್ಕಾರ ಮುಂದಿನ ದಿನಗಳಲ್ಲಿ KPMG ಸಂಸ್ಥೆಯೊಂದಿಗೆ ಸಹಿ ಹಾಕಲಿರುವ ವಿದ್ಯಾರ್ಥಿ ಸ್ನೇಹಿ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್ ಡಿ ಗೌಡರವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಶ್ಯಕವಾಗಿಬೇಕಾಗಿರುವ ಕೌಶಲ್ಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಕಾಲೇಜಿನಲ್ಲಿ ಆರಂಭವಾಗಲಿರುವ ಕೌಶಲ್ಯ ತರಬೇತಿ ಕೇಂದ್ರದ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕೆಂದು ಹಾಗೂ ತಂತ್ರಜ್ಞಾನ ಮೂಲಕ ನೀವು ಹೆಚ್ಚು ಹೆಚ್ಚಿನ ತನ್ನ ಸ ವಿವರಗಳ ಬಗ್ಗೆ ಹಾಗೆ ವಿದ್ಯೆಗೆ ಜ್ಞಾನ ಎಷ್ಟು ಮುಖ್ಯವೋ ಅಷ್ಟೇ ತಮ್ಮ ವಿನಯತೆ ದೂರ ದೃಷ್ಟಿಗಳು ತನ್ನ ಪ್ರಮಾಣ ಪತ್ರದ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳ ಮನಸಳೆದರು ಹಾಗೆ ಈ ಕರ್ನಾಟಕ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಈ ಕಾಲೇಜಿಗೆ ತಂದು ಕೊಡುವುದರಲ್ಲಿ. ಕಾಲೇಜಿನ ಪ್ರಾಂಶುಪಾಲರ ಡಾ ಚಂದ್ರಶೇಖರ್ ಬಿ , ಬಹಳಷ್ಟು ಶ್ರಮ ಇದೆ ಎಂದು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಬಗ್ಗೆ ಅವರ ದೂರದೃಷ್ಟಿಯನ್ನು ಪ್ರಶಂಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರು ಆಗಿರುವ ಭವಾನಿ ಹೆಗಡೆ ಸುಗಮ ಸಂಗೀತ ಹೇಳಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು ಸಂದರ್ಭದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ ನರಸಿಂಹರಾಜು ಇವರ ಸೃಜನ ಸಂಸ್ಕೃತಿ ಮತ್ತು ಸಂಸ್ಕೃತ ವೇದಿಕೆ ಪ್ರತಿಭಾನ್ವೇಷಣೆ 2022 ಪ್ರಸ್ತಾವಿಕ ನುಡಿಯನ್ನು ನುಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಚಂದ್ರಶೇಖರ್ ರವರು ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು ಮುಂದಿನ ಅಂದರೆ ವಿದ್ಯಾರ್ಥಿಯ ಜೀವನದ ನಂತರ ಬರುವಂತಹ ಜೀವನ ನಿಮಗೆ ಒಂದು ಉದ್ಯೋಗ ಅದು ನಿಮಗೆ ಅತ್ಯಮೂಲ್ಯ ಏಕೆಂದರೆ ಜೀವನ ಮಾಡಲು ನಿಮಗೆ ಒಂದು ಉದ್ಯೋಗ ಅವಶ್ಯಕತೆ ಇದೆ ಉದ್ಯೋಗವನ್ನು ಪಡೆದುಕೊಳ್ಳಲು ಈ ದಿನದ ಕೌಶಲ್ಯ ಅಭಿವೃದ್ಧಿ ಹಾಗೂ ಸಿಎಂ ಕೆ ಕೆ ವೈ ನಮ್ಮ ಕಾಲೇಜಿನಲ್ಲಿ ತರಬೇತಿ ಪಡೆದುಕೊಂಡು ನಿಮ್ಮ ಬರುವಂತಹ ಜೀವನವನ್ನು ಉದ್ಯೋಗ ಪಡೆದುಕೊಳ್ಳಲು ಇದು ನಿಮಗೆ ಒಳ್ಳೆಯ ಅವಕಾಶ ಎಂದು ವಿದ್ಯಾರ್ಥಿಗಳಿಗೆ ತಿಳಿ ಪಡಿಸಿದರು ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು