ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ರಾಜ್ಯಕ್ಕೆ ಕುಮಾರಣ್ಣ ದಾಸರಹಳ್ಳಿ ಕ್ಷೇತ್ರಕ್ಕೆ ಶಾಸಕ ಆರ್ ಮಂಜುನಾಥ ಎನ್ನುವ ಘೋಷಣಾ ವಾಕ್ಯ""
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಲಕ್ಷ್ಮಿಪುರ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ರಾಜ್ಯಕ್ಕೆ ಕುಮಾರಣ್ಣ ಮನೆ ಮನೆಗೆ ಮಂಜಣ್ಣ ಎನ್ನುವ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಘೋಷಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಅವರು ಇಡೀ ನಾಲ್ಕು ವರ್ಷಗಳ ಅಭಿವೃದ್ಧಿ ಈ ಕ್ಷೇತ್ರವಾಗಿ ಬದಲಾವಣೆ ನಾನು ಮಾಡಿದ್ದೇನೆ ಇದರ ಮೂಲಕ ಇಡೀ ಕ್ಷೇತ್ರದ ಜನಕ್ಕೆ ತಿಳಿಸುವಂತಹ ಈ ಕಾರ್ಯಕ್ರಮ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಈ ಕ್ಷೇತ್ರದ ಬಹುತೇಕ ಜನರು ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ಪ್ರದೇಶದಿಂದ ಬಂದು ನೆಲೆಸಿದ್ದಾರೆ ಏಕೆಂದರೆ ಏಷ್ಯಾದಲ್ಲಿ ನಂಬರ್ ಒನ್ ಕೈಗಾರಿಕಾ ಪ್ರದೇಶ ಆಗಿರುವುದರಿಂದ ತನ್ನ ಬದುಕನ್ನು ಕಟ್ಟಿಕೊಳ್ಳಲು ಜನರು ಉದ್ಯೋಗವನ್ನು ಆರಿಸಿಕೊಂಡು ಬಂದಿರುವಂತಹ ಮಧ್ಯಮ ವರ್ಗ ಹಾಗೂ ಬಡ ಮತ್ತು ನಿರ್ಗತಿಕರು ಕಾರ್ಮಿಕರು ಮತ್ತು ಕೂಲಿಯ ಕಾರ್ಮಿಕರು ಮುಂದಿನ ದಿನಗಳಲ್ಲಿ ಮನೆ ಮತ್ತು ಅವರಿಗೆ ಬೇಕಾಗಿರುವಂತಹ ಮೂಲ ಸೌಕರ್ಯಗಳನ್ನು ನಾನು ಒದಗಿಸಿ ಕೊಡಬೇಕಾಗಿರುವುದರಿಂದ ಮತ್ತೆ ನಾನು ಈ ಕ್ಷೇತ್ರ ಜನತೆ ನನಗೆ ಆಶೀರ್ವಾದ ಮಾಡುವುದು ಶತಾಸಿದ್ದ ನಾನು 24 ಬಾರ್ 7 ನಮ್ಮ ಕ್ಷೇತ್ರದ ಭವಿಷ್ಯ ಅಭಿವೃದ್ಧಿಗೆ ಮತ್ತೊಮ್ಮೆ ಮಂಜಣ್ಣ ರಾಜ್ಯಕ್ಕೆ ಕುಮಾರಣ್ಣ ಎನ್ನುವ ಘೋಷಣೆ ನಮ್ಮ ಕಾರ್ಯಕರ್ತರು ಎಂದು ಕಾರ್ಯಕರ್ತರನ್ನು ಮತ್ತು ಅಭಿಮಾನಿಗಳನ್ನು ನನ್ನನ್ನು ಪ್ರೇರೇಪಿಸಿದರಿಂದ ಅವರಿಗೆ ಹಾರೈಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಮುನಿಸ್ವಾಮಣ್ಣ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶರಣ್ ಗೌಡ್ರು ಹಾಗೂ ಅಧ್ಯಕ್ಷರುಗಳಾದ ದೇವೇಗೌಡ್ರು ಮತ್ತು ರುದ್ರೇಗೌಡರು ಮತ್ತು ಮುನೇಗೌಡರು ಕ್ಷೇತ್ರದ ಎಲ್ಲಾ ವಾರ್ಡ್ ಗಳ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು,ಉಪಾಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ಯುವ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಲಕ್ಷ್ಮಿಪುರ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.