ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು ಮಾಗಡಿ : ಕೆಂಪೇಗೌಡ ಮಿಲಿನಿಯಮ್ ಬ್ಲಡ್ ಬ್ಯಾಂಕ್ ತ್ರಿವೇಣಿ ರೋಡ್ ಯಶವಂತಪುರ ಇವರು ಮಾಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಕಾಲೇಜಿನ ಎನ್.ಎಸ್.ಎಸ್. ಮತ್ತು ಸ್ಕೌಟ್ ಅಂಡ್ ಗೈಡ್ಸ್, ರೆಡ್ ಕ್ರಾಸ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಶಿಬಿರಕ್ಕೆ ಕಾಲೇಜಿನ ಪ್ರಾಂಶುಪಾಲರು ಚಾಲನೆ ನೀಡಿದರು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಕ್ತ ಕೊಡುವುದರಿಂದ ಶರೀರಕ್ಕೆ ಬೇರೆ ಯಾವುದೇ ತರಹದ ತೊಂದರೆ ಆಗುವುದಿಲ್ಲ ಆರೋಗ್ಯವಾಗಿರಬಹುದು ಯೋಗ ಮತ್ತು ವ್ಯಾಯಾಮ್ ಅನ್ನು ಮಾಡುತ್ತಿದ್ದರೆ ಅದರಿಂದ ನಮ್ಮ ದೇಹದ ಎಲ್ಲಾ ಅಂಗಾಂಗಗಳಿಗೆ ಕೆಲಸವನ್ನು ಕೊಟ್ಟಾಗ ಶರೀರ ಸರಿಯಾದ ರೀತಿಯಿಂದ ರಕ್ತ ಚಲನೆ ಯಾಗುತ್ತದೆ ಎಂದರು .
ನಂತರ ಕಾಲೇಜಿನ ಎನ್ಎಸ್ಎಸ್ ಮತ್ತು ಸ್ಕೌಟ್ ಅಂಡ್ ಗೈಡ್ಸ್ ರೆಡ್ ಕ್ರಾಸ್ ಮತ್ತು ಆಂಗ್ಲ ಉಪನ್ಯಾಸಕರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಆಂಗ್ಲ ಭಾಷಾ ವಿಭಾಗದ ಪರೀಕ್ಷಾ ಮುಖ್ಯಸ್ಥರಾದ ಮಂಜುನಾಥ್. ಎಸ್. ವಿದ್ಯಾರ್ಥಿ ಗಳಿಗೆ ನಾವು ರಕ್ತ ನೀಡುವುದರಿಂದ ನಮ್ಮ ದೇಶದ ರಕ್ತ ಶುದ್ದಿಯಾಗುತ್ತದೆ ಅಷ್ಟೇ ವೇಗದಲ್ಲಿ ಮತ್ತೆ ದೇಹಕ್ಕೆ ರಕ್ತ ಶೇಖರಣೆ ಯಾಗುತ್ತದೆ ಹಾಗೆ ಮತ್ತೊಬ್ಬರ ಜೀವನ ಹಾಗೂ ಕುಟುಂಬಕ್ಕೆ ಬೆಳಕು ನೀಡಿದಂತಾಗುತ್ತದೆ ಎಂದರು ತದನಂತರ ಸ್ವಯಂ ಪ್ರೇರಿತ ರಕ್ತದಾನ ನೀಡಿದ ಉಪನ್ಯಾಸಕರಗಳಿಗೂ ಮತ್ತು ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ಉಪಹಾರ ತಂಪಾದ ಪಾನೀಯವನ್ನು ನೀಡಿ ಪ್ರಮಾಣ ಪತ್ರ ಕೊಟ್ಟು ಶುಭ ಹಾರೈಸಿದರು .ಈ ರಕ್ತದಾನ ಶಿಬಿರದ ಯಶಸ್ಸಿಗೆ ಕಾರಣರಾದ ಎನ್ ಎಸ್ ಎಸ್ ಕ್ರೀಡೆ ಸ್ಕೌಟ್ ಅಂಡ್ ಗೈಡ್ಸ್ ಹಾಗೂ ರೆಡ್ ಕ್ರಾಸ್ ಮತ್ತು ಕಾಲೇಜಿನ ಎಲ್ಲಾ ಆಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಮಿಲಿನಿಯಂ ಬ್ಲೇಡ್ ಬ್ಯಾಂಕ್ ಕಾರ್ಯದರ್ಶಿಗಳಾದ ಶಿವಶಂಕರ್ ಅಭಿನಂದನೆ ತಿಳಿಸಿದರು .
ಇದೇ ಸಂದರ್ಭದಲ್ಲಿ ಈ ಕಾಲೇಜಿನಿಂದ 115 ಬಾಟಲ್ ಗಳನ್ನ ಶೇಖರಿಸಿಕೊಂಡಿದ್ದೇವೆ ಈ ರಕ್ತವನ್ನು ಬಡ ಮತ್ತು ನಿರ್ಗತಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಈ ರಕ್ತವನ್ನು ನೀಡಲಾಗುತ್ತದೆ ಎಂದರು