ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

"ದೆಹಲಿ ಮಾದರಿಯಲ್ಲಿ ದಾಸರಹಳ್ಳಿ ಕ್ಷೇತ್ರ  ಅಭಿವೃದ್ಧಿ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ -ಸೌಂಧರ್ಯ ಮಂಜಪ್ಪ"


ಪೀಣ್ಯ  ದಾಸರಹಳ್ಳಿ: ರಾಜ್ಯದಲ್ಲಿ 40% ಕಮಿಷನ್ ಬಿಜೆಪಿ ಸರ್ಕಾರ ಈ ಸರ್ಕಾರದಿಂದ ರಾಜ್ಯದಲ್ಲಿ ಬಡವರ ಬದುಕು ಹಸನಾಗುವುದಿಲ್ಲಾ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೌಂದರ್ಯ ಮಂಜಪ್ಪ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಸೌಂದರ್ಯ ಕೀರ್ತಿನ್ ಕುಮಾರ್ ಹಾಗೂ ಕ್ಷೇತ್ರದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಜೀಮ್ ಮತ್ತು ಹೆಗ್ಗನಹಳ್ಳಿ ವಾರ್ಡಿನ ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಅಭ್ಯರ್ಥಿ ಅಬ್ದುಲ್ ರೆಹಮಾನ್ ಇವರುಗಳ ನೇತೃತ್ವದಲ್ಲಿ ಜನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.
ಹೆಗ್ಗನಹಳ್ಳಿ ವಾರ್ಡಿನ ಅಂದರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಆಮ್ ಆದ್ಮಿ ಪಕ್ಷದ ವಾರ್ಡ ಕಚೇರಿಯಿಂದ ಪ್ರಾರಂಭಗೊಂಡು ಹೆಗ್ಗನಹಳ್ಳಿ ಮುಖ್ಯ ರಸ್ತೆ ಮಾರ್ಗವಾಗಿ ಹೆಗ್ಗನಹಳ್ಳಿ ಕ್ರಾಸ್ ,ನೀಲಗಿರಿ ತೊಪು, ಸುಂಕದಕಟ್ಟೆ ಪೈಪ್ ಲೈನ್ ಕೆಟಿಜಿ ರಸ್ತೆ ದೊಡ್ಡ ಕೈಗಾರಿಕಾ ಪ್ರದೇಶ ಪೀಣ್ಯ 2ನೇ ಹಂತ ಮಾರ್ಗ ಮೂಲಕ ಕಚೇರಿಗೆ ಜನ ಜಾಗೃತಿ ಜಾಥಾ ತಲುಪಿತ್ತು.
ನಂತರ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಸರ್ಕಾರ ದಿನ ನಿತ್ಯದ ಪದಾರ್ಥಗಳಾದ ಹಾಲು ಮೊಸರು ಊಟಾ ಮಾಡುವ ಎಣ್ಣೆ ಮತ್ತು ಅಡುಗೆ ಅನಿಲ ಸಿಲಿಂಡರ್ ಮಕ್ಕಳ ವಿದ್ಯಾಭ್ಯಾಸ ಹೀಗೆ ಅನೇಕ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಲೆಯಿವೆ ಇದಕ್ಕೆ ಕಡಿವಾಣ ಹಾಕುವ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನಸು ಮಾಡುತ್ತಿಲ್ಲಾ ರಾಜ್ಯ ತೆರಿಗೆ ಕಟ್ಟುವ ಹಣದಲ್ಲಿ ಕಾರ್ಮಿಕರಿಗೆ ಬಸ್ ಪಾಸ್ , ವಿದ್ಯುತ್ ಕುಡಿಯುವ ನೀರು ಇವುಗಳು ಉಚಿತವಾಗಿ ಕೊಡಬಹುದು ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಬಡವರ ಕಷ್ಟಕ್ಕೆ ಸರ್ಕಾರ ಮುಂದಾಗ ಬಹುದೇ? ಎಂದು ಸೌಂದರ್ಯ ಮಂಜಪ್ಪ ಜಾಥಾ ಉದ್ದೇಶಿಸಿ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿದ್ದರು.

ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಸೌಂದರ್ಯ ಕೀರ್ತನ್ ಕುಮಾರ್, ಶಬ್ಬಿರ್ ಅಹ್ಮದ್, ಹಿಂದುಳಿದ ವರ್ಗಗಳ ಅಧ್ಯಕ್ಷ ಹೇಮಂತ್ ಕುಮಾರ್ ಆಮ್ ಆದ್ಮಿ ಪಕ್ಷದ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಜಾಥಾದಲ್ಲಿ ಪಾಲ್ಗೊಂಡಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News