ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್





ಸರ್ಕಾರಿ ಆರ್.ಸಿ. ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬೆಂಗಳೂರು : ನಗರದ ಹೃದಯ ಭಾಗದಲ್ಲಿರುವ ರಾಮ್ ನಾರಾಯಣ್ ಚೆಲ್ಲಾರಾಂ  ಕಾಲೇಜಿನಲ್ಲಿ ಎನ್‌ ಸಿ ಸಿ ಯ 75 ನೇ ವರ್ಷದ ಸ್ಥಾಪನೆಯನ್ನು ಗುರುತಿಸಲು, 3 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ  ಲಯನ್ಸ್ ಕ್ಲಬ್ ರಕ್ತ ಕೇಂದ್ರ ವಿಲ್ಸನ್ ಗಾರ್ಡನ್ ಹಾಗೂ ಹೆಚ್. ಡಿ. ಎಫ್ .ಸಿ .ಬ್ಯಾಂಕ್ ನ ಸಹಯೋಗದೊಂದಿಗ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
 ಈ ಶಿಬಿರಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಶೇಖರ್ .ಬಿ.ಚಾಲನೆಯನ್ನ ನೀಡಿದರು. ನಂತರ ಅವರು ಈ ಶಿಬಿರದ ಉದ್ದೇಶವು  ಒಂದು ಜೀವ ಉಳಿಸಲು ರಕ್ತವನ್ನು ಕೊಡುವುದರಿಂದ ಯಾವುದೇ ತರಹದ ಶರೀರಕ್ಕೆ ತೊಂದರೆ ಆಗುವುದಿಲ್ಲ ಡಾಕ್ಟರ್ ತಪಾಸಣೆ ಮಾಡಿ  ರಕ್ತವನ್ನು ತೆಗೆದುಕೊಳ್ಳುತ್ತಾರೆ ಹಾಗೆ ರಕ್ತ ಕೊಡುವುದರಿಂದ ಶರೀರದಲ್ಲಿ ರಕ್ತ ಚಲನೆಗೆ ಅತಿ ಶೀಘ್ರದಲ್ಲಿ ಮತ್ತೆ ದೇಹಕ್ಕೆ ರಕ್ತ ಶೇಖರಣೆಯಾಗುತ್ತಿದೆ ಹಾಗೂ ಶರೀರದ ಸದೃಢವಾಗಿ ಇಟ್ಟುಕೊಳ್ಳಬಹುದು ಎಂದು  ಕೆಡೆಟ್‌ಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು . ಈ ಸಂದರ್ಭದಲ್ಲಿ 3 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯ 250 ಕೆಡೆಟ್‌ಗಳು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಲೆಫ್ಟಿನೆಂಟ್ ಕರ್ನಲ್ ದಾಮೋದರನ್ ಮತ್ತು ಪಿ.ಪಿ. ಕಮಾಂಡಿಂಗ್ ಆಫೀಸರ್, 3 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ  ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಶಿಬಿರದ ಉದ್ದೇಶ ರಕ್ತದಾನ ಮಾಡುವುದರಿಂದ ಜೀವ ಅಷ್ಟೇ ಅಲ್ಲ  ಎಷ್ಟೋ ಕುಟುಂಬಗಳ ಜೀವವನ್ನು ಕಾಪಾಡಿದಂತಾಗುತ್ತದೆ ಬಡ ಮತ್ತು  ನಿರ್ಗತಿಕರಿಗೆ ಜೀವನ ಉಳಿಸಿದಂತಾಗುತ್ತದೆ ಹಾಗೆ  ಕೆಡೆಟ್‌ಗಳಿಗೆ ಮೂರು ತಿಂಗಳಿಗೊಮ್ಮೆ  ರಕ್ತದಾನ ಮಾಡುವಂತೆ ಪ್ರೇರೇಪಿಸಿದರು. ಸಂದರ್ಭದಲ್ಲಿ 3 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯ 250 ಯುನಿಟಿಗಳನ್ನ ಕೆಡೆಟ್‌ಗಳು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಅನಿಲ್ ಕುಮಾರ್ P. Adm ಅಧಿಕಾರಿ, 3 ಕರ್ನಾಟಕ ಬೆಟಾಲಿಯನ್ ಹಾಗೂ HDFC ಬ್ಯಾಂಕ್, ರಿಚ್ಮಂಡ್ ರೋಡ್ ಶಾಖೆಯಿಂದ ರಕ್ತದಾನ ನೀಡಿದ ವಿದ್ಯಾರ್ಥಿಗಳಿಗೂ ತಂಪು ಪಾನೀಯ ಹಾಗೂ ಉಪಹಾರದ ವ್ಯವಸ್ಥೆ ಹಾಗೂ ನೀರಿನ ಬಾಟಲ್ ಅನ್ನು ಉಡುಗೊರೆಯಾಗಿ  ಹಿರಿಯ  ವ್ಯವಸ್ಥಾಪಕಿಯಾದ ಮಧುಮತಿ ರಾವ್,ಹಾಗೂ ಹಿರಿಯ ವ್ಯವಸ್ಥಾಪಕರಾದ ಅಶ್ವಿನ್ ಕುಮಾರ್ ಕೊಟ್ಟು ಹಾರೈಸಿದರು  ಹಾಗೂ ಲಯನ್ಸ್ ಕ್ಲಬ್ ರಕ್ತ ಕೇಂದ್ರ ವಿಲ್ಸನ್ ಗಾರ್ಡನ್ ಅಧ್ಯಕ್ಷ  ಶಿವಶಂಕರ್, ಎನ್ ಸಿ ಸಿ ಸಂಚಾಲಕರು ಹಾಗೂ ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಎಂ. ಯೂತ್ ರೆಡ್‌ಕ್ರಾಸ್ ಕ್ಲಬ್‌ನ ಸಂಚಾಲಕ, ದೈಹಿಕ ನಿರ್ದೇಶಕರಾದ  ಮೋಹನಕುಮಾರ,
  ಎನ್.ಸಿ.ಸಿ. ಅಧಿಕಾರಿಗಳು, ಪಿಐ ಸಿಬ್ಬಂದಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.  ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ರಕ್ತ ದಾನಿಗಳಿಗೆ ಲಘು ಉಪಾಹಾರ ಮತ್ತು ಸ್ಮರಣಿಕೆಯನ್ನು ನೀರಿನ ಬಾಟಲ್ ಅನ್ನು ನೀಡಲಾಯಿತು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News