ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"ಪೀಣ್ಯ 2ನೇ ಹಂತದ ಆಟೋ ಚಾಲಕರಿಂದ ಅದ್ದೂರಿ 67ನೇ ಕನ್ನಡ ರಾಜ್ಯೋತ್ಸವದ ಸಂಬ್ರಮಕ್ಕೆ ಚಾಲನೆ - ಪಿ ಎನ್ ಕೃಷ್ಣಮೂರ್ತಿ"
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಪೀಣ್ಯ 2ನೇ ಹಂತ ಮಂಜು ಶ್ರೀ ಎಂಟರ್ ಪ್ರೈಸಸ್ ಎದುರುಗಡೆ ಇರುವ ಆಟೋ ಚಾಲಕರಾದ ಕೃಷ್ಣ ಮತ್ತು ಅವರ ಸಂಗಡಿಗರ ನೇತೃತ್ವದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ಸದಸ್ಯ ಪಿ ಎನ್ ಕೃಷ್ಣಮೂರ್ತಿ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಧ್ವಜಾರೋಹಣ ನೆರವೇರಿಸಿದರು.
ರಾಜ್ಯದ ನೆಲ ಜಲ ಭಾಷೆ ರಕ್ಷಣೆ ನಮ್ಮೆಲ್ಲರ ಹೊಣೆ ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಕನ್ನಡದ ಎಂಟು ಜನ ಮಹನೀಯರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕೀರ್ತಿ ನಮ್ಮ ನಾಡಿನ ಹೆಮ್ಮೆ ಮತ್ತು ಕನ್ನಡಿಗರ ಶ್ರಮ ನಾಡಿನಲ್ಲಿ ಅನೇಕ ಭಾಷಿಕರು ಇದ್ದಾರೆ ತಾವುಗಳು ಕನ್ನಡ ಕಲಿಯಿರಿ ಎಂದು ಕಾಂಗ್ರೆಸ್ ಮುಖಂಡ ಪಿ ಎನ್ ಕೃಷ್ಣಮೂರ್ತಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.