ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಶಿಕ್ಷಕರನ್ನು ಗೌರವಿಸುವ ಜನಪ್ರತಿನಿಧಿಗಳು ಒಳ್ಳೆಯ ರಾಜಕಾರಣಿಗಳು-
ಎಂಎಲ್ಸಿ ಶ್ರೀ ಕಂಠೇಗೌಡ
ಪೀಣ್ಯ ದಾಸರಹಳ್ಳಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಶಾಸಕ ಭವನದಲ್ಲಿ ಗುರು ನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಪರಿಷತ್ತು ಸದಸ್ಯ ಕೆಟಿ ಶ್ರೀಕಂಠೇಗೌಡರು ಮಾತನಾಡಿ ರಾಜ್ಯದಲ್ಲಿ ಅತ್ಯಂತ ಅಪರೂಪವಾದ ಕಾರ್ಯಕ್ರಮ ನನಗೆ ಹೃದಯ ತುಂಬಿ ಬಂದಿದೆ , ಅನೇಕ ವರ್ಷಗಳ ಕಾಲ ನಾನು ಶಿಕ್ಷಕರ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದನೆ , ಜನಪ್ರತಿನಿಧಿಗಳು ಶಿಕ್ಷಕರಿಗೆ ಗೌರವಿಸುವಂತ ಕಾರ್ಯಕ್ರಮ ಮೆಚ್ಚುವಂತವುದು,ಶಾಸಕ ಅರ್ ಮಂಜುನಾಥ್ ರವರು ಹಮ್ಮಿಕೊಂಡಿರುವುದು, ಇತರರಿಗೆ ಮಾದರಿಯಾಗಿದೆ, ಸಂತಸ ತಂದಿದೆ .ನಿಮ್ಮೆಲ್ಲರ ಅರ್ಶೀವಾದ ಅವರ ಮೇಲೆ ಇರಲಿ, ಮುಂದಿನ ಕುಮಾರಣ್ಣನ ಸರ್ಕಾರದಲ್ಲಿ ಸಚಿವರಾಗುತ್ತಾರೆ ಎಂದರು.
ಕುಮಾರಣ್ಣನ ಪಂಚರತ್ನ ಯೋಜನೆ ರಾಜ್ಯದ ಅಭಿವೃದ್ಧಿ ಗೆ ಪೂರಕವಾಗಿದ್ದು ,ಎಲ್ ಕೆಜಿ ಯಿಂದ ಹೈಸ್ಕೂಲ್ ನವರಿಗೆ ಉಚಿತ ವಿದ್ಯಾಭ್ಯಾಸದ ಕನಸು ಹೊಂದಿದ್ದಾರೆ. ಅವರಕನಸು ಸಕಾರಗೊಳ್ಳುವ ಕಾಲ ಹತ್ತಿರ ಬರುತ್ತಿದೆ ಎಂದರು.
ಕ್ಷೇತ್ರದ ಶಾಸಕರಾದ ಆರ್ ಮಂಜುನಾಥ್ ನೇತೃತ್ವದಲ್ಲಿ ಹಾಗು ಶಿಕ್ಷಕರ ಸಮ್ಮಿಲನ ವೇದಿಕೆ ,ಆಧ್ಯ ಫೌಂಡೇಶನ್ ಅಂಡ್ ಸೋಷಿಯಲ್
ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಸತತ ನಾಲ್ಕನೇ ವರ್ಷದಲ್ಲಿ ಸುಮಾರು 1500 ಶಿಕ್ಷಕರಿಗೆ ಗುರುನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಶಾಸಕ ಅರ್ ಮಂಜುನಾಥ್ ಮಾತಾನಡಿ
ಶಿಶ್ತಿನ ಮೂಲಕ ಸಮಾಜಕ್ಕೆ ದಾರಿ ತೋರುವ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉತ್ತಮ ಮಾರ್ಗದರ್ಶಕರಾಗಿ ತೋರುವ ,ತಿದ್ದಿ ತಿಡಿ ಜೀವನ ಉತ್ತಮವಾಗಿರಲೆಂದು ಬಯಸುವ ಶಿಕ್ಷಕ ವೃಂಧದವರಿಗೆ ಸಾಷ್ಟಾಂಗ ನಮನಗಳು .ಶಿಕ್ಷಕ ಮೂರು ಪದಗಳಲ್ಲ ಬಾಳು ಬೆಳಗುವ ಜ್ಯೋತಿ ಎಂದರು.
ಗುರುವಿನ ಗುಲಾಮನಾಗುವತನಕ ದೊರೆಯದಯ್ಯ ಮುಕುತಿ ಎಂಬ ಗಾದೆ ಸರ್ವಕಾಲಿಕ ಅನ್ವಯವಾಗುವಂತದು.
ವಿದ್ಯಾರ್ಥಿಗಳನ್ನು
ಸಮಾಜದಲ್ಲಿ ತಿದ್ದಿ ತಿಡಿ ಸತ್ಪ್ರಜೆಯನ್ನಾಗಿಸುವ ಮಹಾತ್ಕಾರ್ಯ ಗುರುಗಳದ್ದೇ ಗುರುಗಳ ಮಹತ್ಕಾರ್ಯಕ್ಕೆ ನಾವೆಲ್ಲ ಅತ್ಯಂತ ಗುರುನಮನ ಸಲ್ಲಿಸುವ ನಮ್ಮೆಲ್ಲರ ಕರ್ತವ್ಯ ಎಂದಹೇಳಿದರು.
5ಲಕ್ಷ ಮತದಾರಿರುವ ಕ್ಷೇತ್ರ ಬಹುನಿರೀಕ್ಷೆಯಿಂದ ನನ್ನನ್ಬು ಅಯ್ಕೆ ಮಾಡಿದ್ದಾರೆ ಅಯ್ಕಯಾದ ಮೇಲೆ ಕ್ಷೇತ್ರದ ಕೆಲಸ ನನ್ನ ಮನೆ ಕೆಲಸ ಅಂತ ನಿರ್ವಹಿಸುತ್ತಿದ್ದನೆ, ಒಂದು ಕಡೆ ಕೊರೊನಾದ ಸಂಧರ್ಭದಲ್ಲಿ ಲಕ್ಷಾಂತರ ಅಹಾರ ಸಾಮಾಗ್ರಿಗಳ ವಿತರಣೆ ಮಾಡಿದೆ. ತಡೆ ಹಿಡಿದಿದ್ದ ಅನುದಾನವನ್ನು ಹೈಕೋರ್ಟ್ ಗೆ ಹೋಗಿ ಬಿಡುಗಡೆ ಮಾಡಿಸಿದೆ , ಎಷ್ಟೋ ಅಡೆತಡೆಗಳನ್ನು ಮೆಟ್ಟಿ ನಿಂತು ಕ್ಷೇತ್ರದ ಜನರ ನಿರೀಕ್ಷೆ ಹುಸಿಗೊಳಿಸದೇ ಕೆಲಸ ಮಾಡುತ್ತಿದ್ದನೆ.
ಈ ಸಂಧರ್ಭದಲ್ಲಿ , ರಾಜ್ಯ ಉಪಾಧ್ಯಕ್ಷ ಅಂದಾನಪ್ಪ, ಕ್ಷೇತ್ರದ ಅಧ್ಯಕ್ಷ ಮುನಿಸ್ವಾಮಿ, ಕ್ಷೇತ್ರದ ಪ್ರಚಾರ ಸಂಸ್ಥೆಯ ಅಧ್ಯಕ್ಷ ಚರಣ್ ಗೌಡ್ರು ದಾಸರಹಳ್ಳಿ ವಾರ್ಡಿನ ಅಧ್ಯಕ್ಷ ಕುಲವನಹಳ್ಳಿ ರಮೇಶ್ ನಿವೃತ್ತ ಕರ್ನಲ್, ರಾಜಾರಾಂ ಪೂರ್ಣ ಪ್ರರ್ಜ್ನಾ ಶಾಲೆಯ ಕಾರ್ಯನಿರ್ವಾಹಕ , ರಾಜ್ಯ ಪದವಿ ಪೂರ್ವ ಕಾಲೇಜು ಸಂಘದ ನಿಂಗೇಗೌಡ , ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷ ಸೂಡಿ ಸುರೇಶ್, ಡಿವೈಎಸ್ ಪಿ ನಾಗರಾಜ್, ಕ್ಷೇತ್ರದ ಉಸ್ತುವಾರಿ ಸಂಯೋಜಕ ಕೆಸಿ ವೆಂಕಟೇಶ, ಚೊಕ್ಕಸಂದ್ರ ವಾರ್ಡ ಅಧ್ಯಕ್ಷ ಗೋವಿಂದರಾಜು,,ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಹನುಮಂತರಾಯಪ್ಪ, ರುದ್ರೇಗೌಡ, ಹೆಚ್ ಎಸ್ ಪ್ರಕಾಶ್, ಹೆಚ್ ಜಿ ಸುರೇಶ್, ಜಯರಾಂ ನರಸಿಂಹ , ಚಂದ್ರಣ್ಣ, ರಾಮಾಂಜನಪ್ಪ, ಮಾಜಿ ಮಹಿಳಾ ಅಧ್ಯಕ್ಷೆ ರಾಣಿ ಪ್ರತಾಪ್ , ಸಿಜೆ ರಮೇಶ್, ಗೋಪಾಲ್, ಎಸ್ ಎಸ್ಟಿ ಅಧ್ಯಕ್ಷ ಕೆಂಪಹೋಬಯ್ಯ, ಮೇದರಹಳ್ಳಿ ನರಸಿಂಹಮೂರ್ತಿ, ಮತ್ತಿತರರು ಭಾಗವಹಿಸಿದ್ದರು.