ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

.ಎನ್ ಕೃಷ್ಣಮೂರ್ತಿ ನೇತೃತ್ವದಲ್ಲಿ ನೆಲಮಹೇಶ್ವರಮ್ಮ ದೇವಿ ದೀಪೋತ್ಸವ

ಪೀಣ್ಯ,ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿಯ ವಾರ್ಡ್ ನ ನೆಲಮಹೇಶ್ವರಮ್ಮ ದೇವಸ್ಥಾನದಲ್ಲಿ ಕೆಪಿಸಿಸಿ  ಸದಸ್ಯರಾದ ಹಾಗೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎನ್ ಕೃಷ್ಣಮೂರ್ತಿ ಕುಟುಂಬದವರಿಂದ ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಕಳಸೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 
      ದೀಪೋತ್ಸವದ ಅಂಗವಾಗಿ ದಾಸರಹಳ್ಳಿ ಹೆಬ್ಬಾಗಿಲಿನಿಂದ ಕಳಸೋತ್ಸವದ ಮೂಲಕ ಕಳಸಗಳನ್ನು ಹೊತ್ತು ದಾಸರಹಳ್ಳಿಯ ರಾಜಬೀದಿಗಳ ಮೂಲಕ ನೆಲಮಹೇಶ್ವರಮ್ಮ ದೇವಸ್ಥಾನದವರೆಗೆ ಅದ್ದೂರಿಯಾಗಿ ದೀಪೋತ್ಸವವನ್ನು ನೆರವೇರಿಸಲಾಯಿತು. 
     ಈ ವೇಳೆ ಮಾತನಾಡಿದ ದಾಸರಹಳ್ಳಿ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಸದಸ್ಯರಾದ ಪಿ.ಎನ್ ಕೃಷ್ಣಮೂರ್ತಿ, 'ದೇವರು ನಮಗೆ ಎಲ್ಲಾ ಸೌಕರ್ಯಗಳನ್ನು ಕೊಟ್ಟಿರುವ ಆ ದೇವರ ಹೆಸರಿನಲ್ಲಿ ಜನ ಸೇವೆ ಮಾಡಿದರೆ ಆ ದೇವರು ಸಂತೃಪ್ತನಾಗುತ್ತಾನೆ.  ಹಾಗೆಯೇ ತಾಯಿ ನೆಲಮಹೇಶ್ವರ ತಾಯಿಯು ಕ್ಷೇತ್ರದ ಜನತೆಗೆ ಒಳಿತನ್ನುಂಟುಮಾಡಲಿ', ಎಂದು ಜನತೆಗೆ ಶುಭ ಹಾರೈಸಿದರು.
      ದೀಪೋತ್ಸವದ ಪ್ರಯುಕ್ತ ಕ್ಷೇತ್ರದ ಜನತೆಗೆ ಸುಮಾರು 2500 ಇಂದ 3000 ಅರಿಶಿಣ ಕುಂಕುಮ ಹಾಗೂ ಸೀರೆ ವಿತರಣೆ ಮಾಡಲಾಯಿತು. ಹಾಗೆಯೇ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. 
       ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಪುಟ್ಟಸ್ವಾಮಿಗೌಡ, ಕೆಪಿಸಿಸಿ ಸದಸ್ಯರಾದ ಮಾಕಳಿ ಪರಮೇಶ್, ಜೀಜು ವರ್ಗೀಸ್, ಜಯಂತಿ ಭಗವಾನ್, ರಾಜಗೋಪಾಲನಗರ ವಾರ್ಡ್ ಅಧ್ಯಕ್ಷರಾದ ಬಿ ಜಗದೀಶ್ ಕುಮಾರ್, ಚೊಕ್ಕಸಂದ್ರ ವಾರ್ಡ್ ಅಧ್ಯಕ್ಷರಾದ ನಾಗರಾಜ್ ಯಾದವ್, ನರಸಿಂಹಯ್ಯ, ರಕ್ಷಿತ್, ಸುನೀಲ್ ಕುಮಾರ್, ರಾಬರ್ಟ್, ಉಮೇಶ್, ಮೈಕ್ ರವಿ, ಆಕಾಶ್, ಜಾನ್ಸನ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News