ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಸೌಂದರ್ಯ ಪಿಯು ಕಾಲೇಜಿನಲ್ಲಿ ರಾಜ್ಯೋತ್ಸವ ಅಂಗವಾಗಿ ಕಲೋತ್ಸವ ಆಚರಣೆ ""
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಹಾವನೂರು ಬಡಾವಣೆಯಲ್ಲಿರುವ ಸೌಂದರ್ಯ ಸಂಯುಕ್ತ ಕಾಲೇಜು ಕನ್ನಡ ರಾಜ್ಯೋತ್ಸವ ಅಂಗವಾಗಿ ಅಂತರ ಶಾಲಾ ಜಾನಪದ ಸಮೂಹ ಹಾಗೂ ನೃತ್ಯ ಸಮೂಹ ಮತ್ತು ಗಾಯನ ಮತ್ತು ಏಕ ಪಾತ್ರ ಅಭಿನಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಸೌಂದರ್ಯ ಕಾಲೇಜಿನ ಸಂಸ್ಥಾಪಕರಾದ ಹಾಗೂ ಅಧ್ಯಕ್ಷರು ಸೌಂದರ್ಯ ಮಂಜಪ್ಪ ಪಿ ಯವರು ಹಾಗೂ ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಕೀರ್ತನ್ ಕುಮಾರ್ .ಎಂ. ಉದ್ಘಾಟನೆ ಮಾಡಿದರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಈ ಸಂಸ್ಥೆಯ ಸಂಸ್ಥಾಪಕರಾದ ಮಂಜಪ್ಪನವರು ವಿವಿಧ ಶಾಲೆಗಳಿಂದ ಬಂದಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಲೋತ್ಸವ ವಿದ್ಯಾರ್ಥಿಗಳಿಗೆ ಕಲೆ ಪ್ರತಿಯೊಬ್ಬರಲ್ಲೂ ಇದ್ದರು ಅಳವಡಿಸಿಕೊಳ್ಳಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ ಅಂತಹ ಪ್ರತಿಭೆಗಳು ಕಲಾ ರಸಿಕರು ಇಲ್ಲಿ ನೃತ್ಯ ಮತ್ತು ಜನಪದ ಗೀತೆ ಹಾಗೂ ಏಕ ಅಭಿನಯ ಪಾತ್ರಗಳನ್ನು ಮಾಡುವಂತಹ ಅವಕಾಶಗಳು ದೊರಕುವುದು ಅದು ನಿಮ್ಮ ಪುಣ್ಯ ಎಂದರು.
ಈ ಸಂಯುಕ್ತ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಸಂಬಂಧಪಟ್ಟ ಹಾಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ಈ ವಸ್ತು ಪ್ರದರ್ಶನವನ್ನು ವೀಕ್ಷಣೆ ಮಾಡಿದ ಈ ಸಂಸ್ಥೆಯ ಕಾರ್ಯದರ್ಶಿಗಳಾದ ಕೀರ್ತನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ನಂತರ ವಿದ್ಯಾರ್ಥಿಗಳು ಸ್ವಯಂ ಪ್ರೇವಿತ ಅವಿಷ್ಕಾರಗಳ ಮೂಲಕ ತಮ್ಮ ಜ್ಞಾನವನ್ನು ಪ್ರದರ್ಶನ ವನ್ನು ವಿವಿಧ ತಂತ್ರಜ್ಞಾನ ಮತ್ತು ಆಧುನಿಕ ಶಿಕ್ಷಣವನ್ನ ಪರಿಚಯಿಸುವ ಜ್ಞಾನವನ್ನು ಅಭಿವೃದ್ಧಿ ಕಡೆಗೆ ದೇಶ ಮತ್ತು ನಾಡನ್ನು ಜ್ಞಾನ ವನ್ನು ಯುವ ಪೀಳಿಗೆ ಸ್ಪೂರ್ತಿ ದಾಯಕ ಎಂದು ಖುಷಿ ಪಟ್ಟರು
ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಭಾಗವಹಿಸಿದ ಸ್ಪರ್ಧ ವಿಜೇತರಿಗೆ ಬಹುಮಾನವನ್ನು ನಿವೃತ್ತಿ ಪ್ರಾಂಶುಪಾಲರಾದ ಸುರೇಶ್ ತುಂಗಾ ಅವರು ವಿತರಣೆ ಮಾಡಿದರು.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಸುನಿತ ಮಂಜಪ್ಪ , ಕಾಲೇಜಿನ ಪ್ರಾಂಶುಪಾಲರಾದ ಮಹಾಬಲೇಶ್ ತುಂಗಾ ಮತ್ತು ಉಪನ್ಯಾಸಕರಾದ ಕೃಪ .ಆರ್ .ದೇವ್, ಪಾರ್ಥ ಸಾರಥಿ, ಚಿನ್ನಮ್ಮ, ಕಾವೇರಪ್ಪ ,ಡಾ. ಚನ್ನೇಶ್ ಜನಪದ ಕಲಾವಿದರಾದ ಸೌಮ್ಯ ,ಭಾರತಿ ರೇವ ,ಸಿದ್ದಯ್ಯ ಕಾಲೇಜಿನ ಉಪನ್ಯಾಸಕರು ಮತ್ತು ಆಡಳಿತ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಮತ್ತು ಇನ್ನು ಮುಂತಾದವರು ಭಾಗವಹಿಸಿದ್ದರು.