ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ವಾಲಿಬಾಲ್ ಹಾಗೂ ಟೇಕ್ವಾಂಡೋ ಟೂರ್ನಮೆಂಟ್ ವಿಜಯಶ್ರೀ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು""
ಪೀಣ್ಯ ದಾಸರಹಳ್ಳಿ: ವಿಜಯ ಶ್ರೀ ಪಬ್ಲಿಕ್ ಸ್ಕೂಲ್ ನಲ್ಲಿ ಓಪನ್ ನ್ಯಾಷನಲ್ ಇಂಟರ ಸ್ಕೂಲ್ ವಾಲಿಬಾಲ್ ಹಾಗೂ ಟೇಕ್ವಾಂಡೋ ಟೂರ್ನಮೆಂಟ್ ಎನ್ನು ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಾಸರಹಳ್ಳಿ ಕೆಪಿಸಿಸಿ ಅಭ್ಯರ್ಥಿಯಾದ ಪಿ. ಎನ್ ಕೃಷ್ಣಮೂರ್ತಿ ರವರನ್ನು ಆಹ್ವಾನಿಸಿ, ಗೌರವಿಸಿ, ಸನ್ಮಾನಿಸಿ, ಗೆದ್ದ ಕ್ರೀಡಾಪಟುಗಳಿಗೆ ಪಂದ್ಯಾವಳಿಯ ಉಸ್ತುವಾರಿಗಳಾದ ಅಲೋಕ್ನಾಥ ರವರ ಸಮ್ಮುಖದಲ್ಲಿ ಬಹುಮಾನ ವಿತರಣೆ ಮಾಡಿಸಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಸದಸ್ಯರಾದ ಕೆ.ಜಿ. ವರ್ಗೀಸ್ , ಶೆಟ್ಟಿಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಜಾನ್ಸನ್ ಸಿ.ಪಿ. , ಶೆಟ್ಟಿಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಮಿಕರ ವಿಭಾಗದ ಅಧ್ಯಕ್ಷರಾದ ನಾರಾಯಣಸ್ವಾಮಿ , ಬಾಗಲಗುಂಟೆ ಹಾಗೂ ಕಮ್ಮಗೊಂಡನಹಳ್ಳಿ ವಾರ್ಡ್ ಅಧ್ಯಕ್ಷರುಗಳಾದ ಚಂದ್ರೇಶ್ ಹಾಗೂ ಮಂಜುನಾಥ್ , ಯುವ ಮುಖಂಡರುಗಳಾದ ಪಿಎನ್ ಕೃಷ್ಣಮೂರ್ತಿಯ ಸುಪುತ್ರ ಆಕಾಶ್ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.