ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಬೆಂಗಳೂರು ವಿಶ್ವವಿದ್ಯಾಲಯ ಆಂಗ್ಲ ಭಾಷಾ ಮೂರನೇ ಸೆಮಿಸ್ಟರ್ ಬಿಎ ಬಿಕಾಂ ಬಿ ಎಸ್ ಸಿ ಬಿ ಎ ಪಠ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ""
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯ ಆಂಗ್ಲ ಭಾಷಾ ಉಪನ್ಯಾಸಕರ ಸಂಘ ಹಾಗೂ  ಸುರಾನ ಕಾಲೇಜು ಪೀಣ್ಯ ಸಹಯೋಗದೊಂದಿಗೆ ಬದಲಾದ ಪಠ್ಯ ಪುಸ್ತಕದ ಈ ಕಾರ್ಯಕ್ರಮವನ್ನು ಆ ಯೋಜನೆ ಮಾಡಲಾಗಿತ್ತು . ಈ ಕಾರ್ಯಕ್ರಮಕ್ಕೆ ಇದೇ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್ .ಎಂ. ಜಯಕರ ರವರು ಮೂರನೇ ಸೆಮಿಸ್ಟರ್ ಬಿ.ಎ, ಬಿ.ಕಾಂ,.ಬಿ .ಎಸ್ .ಸಿ, ಬಿ.ಬಿ. ಎ, ಆಂಗ್ಲ ಭಾಷಾ ಪಠ್ಯಪುಸ್ತಕವನ್ನು ವಿದ್ಯುಕ್ತವಾಗಿ ಬಿಡುಗಡೆ ಮಾಡಿದರು.. ತದನಂತರ ಆಂಗ್ಲ ಭಾಷಾ ಉಪನ್ಯಾಸಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಯನ್ನು ನಮ್ಮ ವಿಶ್ವವಿದ್ಯಾನಿಲಯ ಪಾಲಿಸಬೇಕಾಗಿದೆ. ಇದು ಮಕ್ಕಳ ಭವಿಷ್ಯತ್ತಿನ ಅನುಕೂಲಕ್ಕಾಗಿ ರಾಷ್ಟ್ರೀಯ ಶಿಕ್ಷಣ ಪಾಲಿಸಿಯನ್ನ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್   ಮೊಟ್ಟಮೊದಲಿಗೆ ನಮ್ಮ ಕರ್ನಾಟಕದಲ್ಲಿ ಈ ಶಿಕ್ಷಣದ ವ್ಯವಸ್ಥೆಯನ್ನ ಜಾರಿಗೆ ತರುವ ಮೂಲಕ ಉನ್ನತ  ಶಿಕ್ಷಣಕ್ಕೆ ಬರುವಂತಹ   ಪೀಳಿಗೆಗೆ ದಾರಿ ದೀಪ ಆಗಬೇಕೆಂದು ಉಪನ್ಯಾಸಕರಿಗೆ ಮನವರಿಕೆ ಮಾಡಿದರು.  ನಂತರ ಜ್ಯೋತಿ ನಿವಾಸ್ ಕಾಲೇಜಿನ ಉಪನ್ಯಾಸಕರಾದ ಡಾ . ಪ್ರಕೃತಿ  ಈ ಪಠ್ಯಪುಸ್ತಕದ ಉಪನ್ಯಾಸವನ್ನು ನೀಡಲು ಕರೆಸಿಕೊಳ್ಳಲಾಗಿತ್ತು ಬೆಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕರು ಮತ್ತು ಶಿಕ್ಷಣ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತ ವಾಗಿರುವಂಥದ್ದು ಈ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ ಈ ಪಠ್ಯಕ್ರಮವನ್ನು ಮಕ್ಕಳಿಗೆ ಅರ್ಥೈಸುವ ಮೂಲಕ ಶಿಕ್ಷಣದ ಶ್ರೇಯ ಅಭಿವೃದ್ಧಿಗೆ ಉನ್ನತ ಮಠದ ವಿದ್ಯಾಭ್ಯಾಸಕ್ಕೆ ಅನು ಮಾಡು ಕೊಡುತ್ತದೆ ಎಂದರು. ಹಾಗೆ ಬೆಂಗಳೂರು ವಿಶ್ವವಿದ್ಯಾಲಯದ ಆಂಗ್ಲ ಮುಖ್ಯಸ್ಥೆಯಾದ ಡಾ. ಗೀತಾ ಆರ್. ರವರು ಪಠ್ಯ ಪುಸ್ತಕ ಬಿಡುಗಡೆ ನಂತರ ಕೆಲವು  ಬರಹಗಾರರು ಬರೆದಿರುವ ಬರವಣಿಗೆ ಮೌಲ್ಯ ಆಧಾರವಾಗಿರುವ ಈಗಿನ ಪೀಳಿಗೆಗೆ ಬಹಳಷ್ಟು ಉಪಯುಕ್ತ ಮತ್ತು ಮಾದರಿ ಬದಲಾವಣೆಗಳನ್ನ ತಂದು ಕೊಡುವಂತಹ ಉನ್ನತ ಶಿಕ್ಷಣಕ್ಕೆ ಬೆಂಗಳೂರು ವಿಶ್ವವಿದ್ಯಾ ವಿದ್ಯಾಲಯ ಮಹತ್ವದ ಪಠ್ಯ ಪುಸ್ತಕದ ಕ್ರಮ ಬದಲಾವಣೆ ಈ ಬದಲಾವಣೆಯನ್ನ ವಿದ್ಯಾರ್ಥಿ ಮತ್ತು ಆಧ್ಯಾಪಕರು ಮಧ್ಯ ಶಿಕ್ಷಣದ ಮೂಲಕ ಬರಹಗಾರರ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಬದಲಾವಣೆ ಕೊಡುವುದೇ ಈ ರಾಷ್ಟ್ರೀಯ ಶಿಕ್ಷಣ ನೀತಿ ಎಂದರು. ಮತ್ತೆ BUTA  ಅಧ್ಯಕ್ಷರಾದ  ಹಾಗೂ ಅಕಾಡೆಮಿ ಕೌನ್ಸಿಲ್ ಸದಸ್ಯರು ಡಾ. ತಮ್ಮಯ್ಯ ಆರ್. ಬಿ .ವಿಶ್ವವಿದ್ಯಾಲಯದ ಪಠ್ಯಕ್ರಮ ಈ ದಿನ ಅತ್ಯಂತ ಪರಿಣಾಮಕಾರಿ ಹಾಗೂ ಮುಂದಿನ ವಿದ್ಯಾರ್ಥಿಯ ಭವಿಷ್ಯ ಬೆಳಕು ಕೊಡುವಂತದ್ದಾಗ ಬೇಕು ಅವರ ಜೀವನದಲ್ಲಿ ಕಲಿಕೆಯ ಕ್ರಮ ಮತ್ತು ನಿರಂತರವಾಗಿ ವಿದ್ಯಾರ್ಥಿಗಳು ಓದುವಂತಹ ಹವ್ಯಾಸ ಬರೆಯುವಂತಹ ಹವ್ಯಾಸ ಇದ್ದರೆ ಎಂದಿಗೂ ಅವರು ಯುವ ಪೀಳಿಗೆಗೆ ಜ್ಞಾನ ಬಂಡಾರವನ್ನ ಜ್ಞಾನ ದೇಗುಲವನ್ನ ನಿರ್ಮಾಣ ಮಾಡುವಂತಹ ಶಿಕ್ಷಣ ಬಿಟ್ಟರೆ ಮತ್ತೆ ಯಾವುದೇ ಹಂತಗಳು ಕೂಡ ಓದಿನ ಮೂಲಕ ಬರಹದ ಮೂಲಕ ಮನದಟ್ಟ ಆದರೆ ಮಾತ್ರ ಬದಲಾವಣೆಗಳು ಸಾಧ್ಯ ಈ ಒಂದು ಶಿಕ್ಷಣ ನೀತಿಯನ್ನ ನಿಯಮಗಳನ್ನ ಪಾಲಿಸಿದ್ದೆ ಆದರೆ ನಿಜಕ್ಕೂ ಈ ಪಠ್ಯಪುಸ್ತಕಕ್ಕೆ ಒಂದು ಬದಲಾವಣೆಗೆ ಮೆರಗು ಸಾರ್ಥಕತೆ ಎಂದರು.
 ಈ ಸಂದರ್ಭದಲ್ಲಿ ಸುರಾನ ಕಾಲೇಜಿನ  ಸಂಸ್ಥಾಪಕರಾದ ಡಾ. ಅರ್ಚನಾ ಸುರನ್ ಹಾಗೂ ಇದೇ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮ್ಯ ಆರ್ ಮತ್ತು ಅಶ್ವಿನಿ  ಬಿ ಬೆಂಗಳೂರು  ವಿದ್ಯಾಲಯಕ್ಕೆ ಸೇರಿರುವ ಕಾಲೇಜಿನ ಮುಖ್ಯಸ್ಥರು ಹಾಗೂ ಆಂಗ್ಲ ಉಪನ್ಯಾಸಕರು   ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News