ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ರಾಜಧಾನಿ ರಾಜಕೀಯದ ಭವಿಷ್ಯದಲ್ಲಿ ಸಂಚಲನ ಮೂಡಿಸುತ್ತಿದೆ ದಾಸರಹಳ್ಳಿ ಆಮ್ ಆದ್ಮಿ ಪಾರ್ಟಿ  ""

 ಪೀಣ್ಯ ದಾಸರಹಳ್ಳಿ : ಏಷ್ಯಾ ಖಂಡದಲ್ಲಿ ಎರಡನೇ ಸ್ಥಾನ ದೇಶದಲ್ಲಿ ಮೊದಲನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪೀಣ್ಯ ಕೈಗಾರಿಕಾ ಪ್ರದೇಶ ಹೆಸರುವಾಸಿಯಾಗಿದೆ. ಈ ಭಾಗದಲ್ಲಿಅತಿ ಹೆಚ್ಚಾಗಿವಾಸಿಸುವಅನ್ಯ ರಾಜ್ಯ   ಎಲ್ಲಾ ಜಿಲ್ಲೆಯ ಜನತೆಯ ಕಾರ್ಮಿಕರು ವಾಸಿಸುವದರಿಂದ ಅವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳೊಂದಿಗೆ ಸರಕಾರಿ ಸೌಲಭ್ಯಗಳು ಸಿಗುವಂತಾಗಬೇಕಾದರೆ ನಾವೆಲ್ಲರೂ  ಅರವಿಂದ ಕೇಜ್ರಿವಾಲ ರ ಆಮ್ ಆದ್ಮಿ ಪಕ್ಷದ ಕೈ ಹಿಡಿಯಬೇಕಾಗಿದೆ ಎಂದರು .ಬಾಗಲಗುಂಟೆಯ ಹಾವನೂರು ಬಡಾವಣೆ ಸೌಂದರ್ಯ ಆರ್ಕೇಡ್ ನಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ದಾಸರಹಳ್ಳಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೀರ್ತನ್ ಕುಮಾರ್ ಮಂಜಪ್ಪ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಹಿರಿಯ ಮುಖಂಡರಾದ ಸೌಂದರ್ಯ ಮಂಜಪ್ಪ ಕೂಡ ಮಾತನಾಡುತ್ತಾ ದೇಶದಲ್ಲಿ ಭ್ರಷ್ಟತೆ ಕಿತ್ತೊಗೆಯುವ ನಿಟ್ಟಿನಲ್ಲಿ ಅಣ್ಣಾ ಹಜಾರೆ ಮೂಲಕ ಅರವಿಂದ ಕೇಜ್ರಿವಾಲಾ ಅವರು ಆಮ್ ಆದ್ಮಿ ಪಕ್ಷವನ್ನು ಕಟ್ಟಿ ಬೆಳೆಸಿ ದೆಹಲಿಯಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಹಾಗೂ ಪಕ್ಕದ ಪಂಜಾಬಿನಲ್ಲಿ ಸರಕಾರದ ಗದ್ದಿಗೆ ಹಿಡಿದಿರುವುದರಿಂದ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಕೂಡ ಸರಕಾರ ತರಬೇಕಾಗಿದೆ ಎಂದರು. ಸ್ವಇಚ್ಛೆಯಿಂದ  ದಾಸರಹಳ್ಳಿ ಕ್ಷೇತ್ರದ ಆಯಾ ವಾರ್ಡಗಳ ಕಾರ್ಯಕರ್ತರುಗಳು  ಅನ್ಯ ಪಕ್ಷವನ್ನು ತೊರೆದು ಆಮ್ ಆದ್ಮಿ ಪಕ್ಷ ಕ್ಕೆ ಸೇರ್ಪಡೆಗೊಂಡರು. ಹೆಗ್ಗನಹಳ್ಳಿ ಡಾಕ್ಟರ್ ಬಳ್ಳಾರಿ ತಂಡದ ಭಗವತಿ ನಾಗರಾಜ್, ಹನುಮಂತಪ್ಪ, ರಮೇಶ್, ತೌಸಿಫ್, ಗಣೇಶ,ಜನ್ಮಭೂಮಿ ನಾಗರಾಜ್ ತಂಡದಶ್ರೀನಿವಾಸ್, ಭರತ್, ಶಿವರಾಜ್, ರಘು, ವಿನಯ್, ಶಿವಪ್ರಕಾಶ್,  ಗಂಗರಾಜು ಟೈಯರ್ ಕಲೀಮ್ ಇನ್ನಿತರರು ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಶಂಕರ್ ಬೆನ್ನೂರ್, ಅರ್ಮಾನ್, ವಿದ್ಯಾ ನವೀನ್,  ಶಂಕ್ರಪ್ಪ ಸ್ವರ್ಣ, ಕೃಷ್ಣಯ್ಯ, ಲೋಹಿತ್, ಮೌನೇಶ್, ಶೇಖರ್,  ಅಬ್ದುಲ್ ರೆಹಮಾನ್, ಜಮೀರ್ ಪಾಷಾ,ಇನ್ನಿತರ ಕಾರ್ಯಕರ್ತರುಎಲ್ಲಾ ವಾರ್ಡಿನಪದಾಧಿಕಾರಿಗಳು ಉಪಸ್ಥಿತರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News