ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್ 10.10.2022

""ತ್ಯಾಮಗೊಂಡ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ""  
ನೆಲಮಂಗಲ : ತ್ಯಾಮಗೊಂಡ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಶಾಸಕ ಡಾ. ಶ್ರೀನಿವಾಸ ಮೂರ್ತಿ ಉದ್ಘಾಟನೆಗೆ ಚಾಲನೆ ನೀಡಿ ನಮ್ಮ ವಿದ್ಯಾರ್ಥಿ ಜೀವನದಲ್ಲಿ ನಮಗೆ ಶಿಕ್ಷಕರು ಶಿಕ್ಷಣ ಕೊಡುವುದರ ಜೊತೆಗೆ  ಮೌಲ್ಯಾಧಾರಿತ  ಬದುಕನ್ನು ಕಲಿಸುವುದು ಮತ್ತು ಕಲೆಯ ದಿದ್ದ ಪಕ್ಷದಲ್ಲಿ ಆಗಿನ ವಿದ್ಯಾರ್ಥಿಗಳನ್ನು ದಂಡಿಸುವಂತಹ ಶಿಕ್ಷೆಯನ್ನು  ಕೊಡುವಂತದು ಸಾಮಾನ್ಯವಾಗಿತ್ತು ಅಂತಹ ವಿದ್ಯಾರ್ಥಿಗಳು ಸುಸಂಸ್ಕೃತರು ಹಾಗೂ ಸಂಸ್ಕಾರ ವನ್ನು ಹೊಂದಿರುವಂತಹ  ವಿದ್ಯಾರ್ಥಿಗಳು ಈ ದಿನಗಳಲ್ಲಿ ಉನ್ನತ ಮಟ್ಟದಲ್ಲಿ  ಇರುವಂತದ್ದನ್ನ ನಾವು ಕಣ್ಣಾರೆ ಕಂಡಿದ್ದೇವೆ  ಇದಕ್ಕೆ ನಾನೇ ಉದಾಹರಣೆ ಎಂದರು ಈಗಿನ ಶಿಕ್ಷಣ ಬೇಕಾಗಿರುವುದು ಬರಿ ಫಲಿತಾಂಶ ಮತ್ತು ಜೀವನೋಪಾಯ ಶಿಕ್ಷಣ ಇದು ಬದಲಾವಣೆ ಆಗಬೇಕು ನೈಜ ಶಿಕ್ಷಣ ವಿದ್ಯಾರ್ಥಿಗಳಿಗೆ ಪೋಷಕರು ಅರಿವು ಮೂಡಿಸಬೇಕು ಪ್ರತಿ ವಿದ್ಯಾರ್ಥಿಯ ಭವಿಷ್ಯವೂ ಗುರುವಿನ ಕೊಡುಗೆಯಾಗಿದೆ ಇತ್ತೀಚಿನ ಪೀಳಿಗೆಯಲ್ಲಿ ಕೃತಜ್ಞತಾ ಮನೋಭಾವ ಕಡಿಮೆ ಆಗುತ್ತಿರುವುದು ದುರಂತ  ಎಂದರು .
ಈ ಸಂದರ್ಭದಲ್ಲಿ ನಿವೃತ್ತಿ ಆದ್ಯಪಕರಾದ ಭೋಗಣ್ಣ ಮಾತನಾಡಿ ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಸೌಲಭ್ಯಗಳು ಇರಲಿಲ್ಲ ಕಲಿಯುವ ಆಸಕ್ತಿ ಇತ್ತು ಆದರೆ ಈಗ ಸೌಲಭ್ಯಗಳು ಇದ್ದರೂ ಕಲಿಯುವ ಮನಸ್ಥಿತಿ ಆಸಕ್ತಿ ಬದಲಾಗಿದೆ ಆಗ ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ ಈಗ ಶಿಕ್ಷಕರು ವಿದ್ಯಾರ್ಥಿಗಳನ್ನು ದೃಷ್ಟಿಸಿ ನೋಡುವುದೇ ಶಿಕ್ಷಾರ್ಹವಾಗಿದೆ ಇದರಿಂದ ನೈಜ ಶಿಕ್ಷಣವು ಸಾಧ್ಯವಿಲ್ಲ ಶಿಕ್ಷಕರು ವಿದ್ಯಾರ್ಥಿಗಳ ಶ್ರೇಯಸ್ಸನ್ನು ಬಯಸುತ್ತಾರೆ ಎಂಬುದು ಪೋಷಕರು ತಿಳಿಯಬೇಕಾಗಿದೆ .ಹಾಗೆ ಹಳೆ ವಿದ್ಯಾರ್ಥಿಗಳ ತಂಡದ ನಿಖಿಲ್ ರಾಜ್ ಮಾತನಾಡುತ್ತಾ ವಿದ್ಯೆ ಕಲಿಸಿದ ಗುರುಗಳು ಕೃಪೆಯಿಂದ ಸಮಾಜದಲ್ಲಿ ನಾವೆಲ್ಲ ಉತ್ತಮ ಪ್ರಜೆಗಳು ಹಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಎಂ ವಿ ನೆಗಳೂರು, ಕೃಷ್ಣ ಪರಮಾತ್ಮ, ನಾಗಣ್ಣ, ರಾಜಕುಮಾರ್, ಚಿಕ್ಕಲಿಂಗಣ್ಣ, ನಾಗಮಲ್ಲೇಶ್, ಅಶ್ವಥ್ ರಾಮ್ ,ಪ್ರಕಾಶ್ ,ಮಹೇಶ್, ಪ್ರಸನ್ನ ಕುಮಾರ್ .ಜಿ.ಟಿ ,ರವಿ ಕೀರ್ತಿ ಈ ಎಲ್ಲ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
 ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಗೋವಿಂದ ರೆಡ್ಡಿ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಮಂಜುನಾಥ್ ಕೆಂಗಲ್ ಕೆಂಪೋಹಳ್ಳಿ ಉಪನ್ಯಾಸಕ ರವಿಕುಮಾರ್ ತ್ಯಾಮಗೊಂಡ್ಲು ಮೋಹನ್  ತ್ಯಾಮಗೊಂಡ್ಲು ಮಿಥುನ್ ಚಕ್ರವರ್ತಿ ತ್ಯಾಮಗೊಂಡ್ಲು ಶ್ರೀಧರ್  ಹರೀಶ್ ಭಾರತಿಪುರ ಹಾಗೆ ಕುಲವನಹಳ್ಳಿ  ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಶಂಕರ್ ಮತ್ತು ಬಸವರಾಜು ಇನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ಮಹಿಳಾ ವಿದ್ಯಾರ್ಥಿನಿಯರು  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News