ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"" ಬಿಬಿಎಂಪಿ ಅಧಿಕಾರಿಗಳ ತಂಡದ ಜೊತೆ ದಾಸರಹಳ್ಳಿ ಕ್ಷೇತ್ರದ ದಲ್ಲಿ ಸ್ಥಳ ಪರಿಶೀಲನೆ ಮಾಡಿದ ಶಾಸಕ ಆರ್ ಮಂಜುನಾಥ್ ""
ಪೀಣ್ಯ ದಾಸರಹಳ್ಳಿ : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ಭಾಗದ ರಾಜೇಶ್ವರಿ ನಗರ ವಾರ್ಡ್ ಹಾಗೂ ಹೆಗ್ಗನಹಳ್ಳಿ ವಾರ್ಡ್ಗಳ ಕೆಂಪೇಗೌಡ ಬಡಾವಣೆ, ಜಿ ಕೆ ಡಬ್ಲ್ಯೂ ಬಡಾವಣೆ, ಬಸಪ್ಪನ ಕಟ್ಟೆ, ದೊಡ್ಡಣ್ಣ ಕೈಗಾರಿಕಾ ಪ್ರದೇಶ ಹೊಂದಿಕೊಂಡಂತೆ ಇರುವ ಜಮೀನ್ದಾರ್ ಮುನಿಗಂಗಪ್ಪ ಜಮೀನಿನಲ್ಲಿ ಸ್ಯಾನಿಟರಿ ಪೈಪ್ ಲೈನ್ ಅಳವಡಿಕೆಗೆ ಮನವೊಲಿಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು, ಬಿ.ಡಬ್ಲ್ಯೂ.ಎಸ್.ಎಸ್.ಬಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡದೊಂದಿಗೆ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಖುದ್ದು ಸ್ಥಳ ಪರಿಶೀಲಿಸಿದರು.