ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಸಕ ಆರ್ ಮಂಜುನಾಥ""
  ಪೀಣ್ಯ ದಾಸರಹಳ್ಳಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕೆಲವು ಭಾಗಗಳಲ್ಲಿ ಕಾವೇರಿ ನೀರು ಅಸಮರ್ಪಕ ಸರಬರಾಜು ವಿರೋಧಿಸಿ ಖಾಲಿ (ಬಿಂದಿಗೆ) ಕೊಡಗಳ ಸಮೇತ ಶಾಸಕ ಆರ್ ಮಂಜುನಾಥ್ ಸೇರಿದಂತೆ ಕಾರ್ಯಕರ್ತರ ಜೊತೆ ಹೆಗ್ಗನಹಳ್ಳಿ  ಜಿ.ಎಲ್.ಆರ್ ವಾಟರ್ ಟ್ಯಾಂಕ್ ಮುತ್ತಿಗೆ  ಹಾಕಲಾಯಿತು
 ಈ ಸಂದರ್ಭದಲ್ಲಿ ಮಾತನಾಡಿದ  ಶಾಸಕರು ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ, ಕ್ಷೇತ್ರದ ಜನರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ, ವಾರಕ್ಕೆ 2 ಗಂಟೆಗಳು ಮಾತ್ರ ನೀರು ಪೂರೈಸುತ್ತಿದ್ದಾರೆ.15 ದಿನಗಳ ಒಳಗಾಗಿ ಸಮಸ್ಯೆ ಇತ್ಯರ್ಥ ಆಗಲೇಬೇಕು. ಸೆಪ್ಟೆಂಬರ್ 10 ರವರೆಗೂ ಕಾಲಾವಕಾಶ ನೀಡಿದ್ದೆವೆ. ನೀರಿನ‌ ಸಮಸ್ಯೆ ಜೊತೆಗೆ ಜಲಮಂಡಳಿ ಕಾಮಗಾರಿ ಯಿಂದ ರಸ್ತೆ ಹಾಳಾಗಿದ್ದು ಹಾಳಾದ ರಸ್ತೆಯನ್ನ ಸರಿ ಮಾಡಲು ಹೇಳಿದ್ದೆವೆ 
ಒಂದು ವೇಳೆ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಮುಂದಿನ ತೀರ್ಮಾನವನ್ನ ಸೆಪ್ಟೆಂಬರ್ 11ರ ನಂತರ ತೀರ್ಮಾನಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ಕ್ಷೇತ್ರದ ಅಧ್ಯಕ್ಷರಾದ ಮುನಿಸ್ವಾಮಿ, ಜೆಡಿಎಸ್ ರಾಜ್ಯ ಕಾರ್ಯಕಾರಿ ಸದಸ್ಯರಾದ ಅಂದನಪ್ಪ, ದಾಸರಹಳ್ಳಿ ಬ್ಲಾಕ್ ಅಧ್ಯಕ್ಷರಾದ ಕೆ ಸಿ ವೆಂಕಟೇಶ್, ವಾರ್ಡ್ ಅಧ್ಯಕ್ಷರುಗಳಾದ ಎಚ್ ಆರ್ ಪ್ರಕಾಶ್, ಸಿ ಜೆ ರಮೇಶ್, ರುದ್ರೇಗೌಡ, ಹನುಮಂತರಾಜು, ರಾಮಂಜನಪ್ಪ, ಗೋವಿಂದಪ್ಪ, ನರಸಿಂಹಮೂರ್ತಿ, ಶಿವಣ್ಣ   ಯುವ ಘಟಕ ಅಧ್ಯಕ್ಷ ವಿನಯ್ ಶಿವಣ್ಣ, ಲಕ್ಷ್ಮಿ ಸಾಗರ್, ಚೋಟೆ ಬಾಬು ಹಾಗೂ ಬಡಾವಣೆಗಳ ನಿವಾಸಿಗಳು ಹಾಜರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News