ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 75ನೇ ಸ್ವಾತಂತ್ರೋತ್ಸವದ ನಡಿಗೆ ಕಾರ್ಯಕ್ರಮವನ್ನು ಕೆಪಿಸಿಸಿ ಹೆಗ್ಗನಹಳ್ಳಿ ವಾರ್ಡ್ ಅಧ್ಯಕ್ಷ ರಮೇಶ್ ಗೌಡ್ರು ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಸುಂಕದಕಟ್ಟೆ ಇಂದ ಹೆಗ್ಗನಹಳ್ಳಿ ಪೀಣ್ಯ ಸೆಕೆಂಡ್ ಸ್ಟೇಜ್ ಮಾರ್ಗವಾಗಿ ರಾಜಗೋಪಾಲನಗರ ಹಾಗೂ ನೆಲಗದರನ ಹಳ್ಳಿಯ ವರೆಗೂ ಸಾವಿರಾರು ಕಾರ್ಯಕರ್ತರ ಜೊತೆಗೆ ಸ್ವತಂತ್ರ ನಡಿಗೆಯನ್ನು ಯಶಸ್ಸು ಗೊಳಿಸಿದರು ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡ ದಾಸರಹಳ್ಳಿ ಕ್ಷೇತ್ರದ ಉಸ್ತುವಾರಿ ಯಾದ ನಾಯಕಿ ನಾಗಲಕ್ಷ್ಮಿ ಚೌದ್ರಿ ರವರು ಹಾಗೂ ಹೆಗ್ಗನಹಳ್ಳಿ ಬ್ಲಾಕ್ ಅಧ್ಯಕ್ಷರಾದ ರವಿ ಗೌಡ್ರು ಹಾಗೂ ನಮ್ಮ ಹೆಗ್ಗನಹಳ್ಳಿ ಸುಂಕದಕಟ್ಟೆ ಅಧ್ಯಕ್ಷರ ಎನ್. ರಮೇಶ್ ಗೌಡ್ರು ಹಾಗೂ ಎಲ್ಲಾ ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು