ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


*ಶಿಕ್ಷಣ ತಜ್ಞ ಸೌಂದರ್ಯ ಮಂಜಪ್ಪ, ಯುವ ಉದ್ಯಮಿ ಕೀರ್ತನ್ ಕುಮಾರ್ ಎಎಪಿ ಸೇರ್ಪಡೆ*

ಬೆಂಗಳೂರು ನಗರದ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಶಿಕ್ಷಣ ತಜ್ಞ ಸೌಂದರ್ಯ ಸಂಸ್ಥೆಯ ಅಧ್ಯಕ್ಷ ಮಂಜಪ್ಪ ಹಾಗೂ ಸಮಸ್ಯೆ ಸಂಸ್ಥೆಯ ಕಾರ್ಯದರ್ಶಿಯಾದ ಅವರ ಮಗ ಕೀರ್ತನ್‌ ಕುಮಾರ್‌ರವರು ಬೆಂಗಳೂರಿನ ಪರಾಗ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮಾಜಿ ಹಿರಿಯ ಐಪಿಎಸ್ ಅಧಿಕಾರಿ- ಪಕ್ಷದ ಉಪಾಧ್ಯಕ್ಷ  ಭಾಸ್ಕರ್ ರಾವ್‌ರವರ ಸಮ್ಮುಖದಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸೌಂದರ್ಯ ಮಂಜಪ್ಪರವರು ಕೆಪಿಸಿಸಿ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದರು. ಸೌಂದರ್ಯ ಎಜುಕೇಷನಲ್‌ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾಗಿ 6000 ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ 500 ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ. ಸೌಂದರ್ಯ ಮಂಜಪ್ಪನವರು ಹೋಟೆಲ್ ಉದ್ಯಮಿ ಕೂಡ ಹೌದು. ಅವರು ದಾಸರಹಳ್ಳಿ ಕ್ಷೇತ್ರದ ಸೌಂದರ್ಯ ನಗರ ನಿವಾಸಿಗಳ ಹಿತರಕ್ಷಣಾ ಸಂಘಟನೆಯ ಗೌರವಾಧ್ಯಕ್ಷರು, ಕರಾವಳಿ ಮಿತ್ರಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಾವನೂರ್‌ ಎಕ್ಸ್‌ಟೆನ್ಷನ್‌ನ ಅಧ್ಯಕ್ಷರು.

ನೆರೆ ಪರಿಹಾರ ಸಂತ್ರಸ್ತರಿಗೆ ಆರ್ಥಿಕ ಸಹಾಯ, ಸ್ವಂತ ಉದ್ಯೋಗಾಸಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಬಡವರಿಗೆ ಪಡಿತರ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬ್ಯಾಗ್‌ ಹಾಗೂ ರಿಯಾಯಿತಿ ಶಿಕ್ಷಣ ನೀಡುವುದು – ಮುಂತಾದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸೌಂದರ್ಯ ಮಂಜಪ್ಪರವರ ಮಗ ಕೀರ್ತನ್  ಕುಮಾರ್‌ರವರು ಪ್ರಸ್ತುತ ಸೌಂದರ್ಯ ಎಜುಕೇಷನಲ್‌ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಕೀರ್ತನ್ ರವರು  ಲಂಡನ್  ನಲ್ಲಿ ಎಂಬಿಎ ವ್ಯಾಸಂಗ ಮಾಡಿ ಅಲ್ಲಿನ ಶೈಕ್ಷಣಿಕ ಸ್ಥಿತಿಗತಿಗಳು ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಇದೇ ರೀತಿಯ ಮಾದರಿ ಭಾರತದಲ್ಲೇಕೆ ಆಗುತ್ತಿಲ್ಲ ಎಂದು ತಮಗೆ ತಾವೇ ಪ್ರಶ್ನಿಸಿಕೊಳ್ಳುತ್ತಿದ್ದ  ಸಂದರ್ಭದಲ್ಲಿಯೇ  ದೆಹಲಿ ಮಾದರಿಯ ಅರವಿಂದ್ ಕೇಜ್ರಿವಾಲ್ ರವರ ಮಾದರಿ ಮನಸ್ಸಿಗೆ ಎಲ್ಲೋ ಒಂದು ಕಡೆ ಆಶಾ ಭಾವನೆ ಮೂಡಿಸುತ್ತಿತ್ತು. ಭಾರತೀಯರಿಗೆ ಪ್ರತಿಭೆಯ ಕೊರತೆಯಿಲ್ಲ ಆದರೆ ಕೆಟ್ಟ ರಾಜಕಾರಣದಿಂದ ಅವರು ಅವಕಾಶ ವಂಚಿತರಾಗುತ್ತಿದ್ದಾರೆ. ನಮ್ಮ ಆಡಳಿತ ಮಾದರಿ ಯುವಕರಿಗೆ ಅವಕಾಶ ಸೃಷ್ಟಿಸವಂತಾದರೆ ನಾವು ಜಗತ್ತನ್ನೇ ಗೆಲ್ಲಬಹುದು. ಕೇಜ್ರಿವಾಲ್ ಮಾದರಿಯ ರಾಜಕೀಯ ಆಂದೋಲನದಲ್ಲಿ ನಾನೂ ಸಹ ನೇರ ಭಾಗವಹಿಸುವಿಕೆ ಆದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಮನಗಂಡು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂಬ ತಮ್ಮ ಮನದಾಳದ ಮಾತನ್ನು ಕೀರ್ತನ್ ಪತ್ರಕರ್ತರ ಮುಂದೆ ಬಿಚ್ಚಿಟ್ಟರು.

"ನಾನು ಮತ್ತು ನನ್ನ ತಂದೆ ದೆಹಲಿಯಲ್ಲಿ ಮತ್ತು ಈಗ ಪಂಜಾಬ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಎಎಪಿ ಮಾಡಿದ ಅದ್ಭುತ ಕ್ರಾಂತಿಯನ್ನು ಸದಾ ಗಮನಿಸಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯಗಳನ್ನು ಕೊಡುವುದಲ್ಲದೆ Happiness ಪಠ್ಯಕ್ರಮ, Business Blaster ಗಳಂತಹ ಉತ್ತಮ ಕಾರ್ಯಕ್ರಮಗಳು, ಶಿಕ್ಷಕರ ತರಬೇತಿ, ಇತ್ಯಾದಿಗಳು ಭಾರತದ ಭವಿಷ್ಯವನ್ನು ಬದಲಿಸಲಿವೆ" ಎಂದು ಅವರು ಹೇಳಿದರು.

ಯುವಕರು ರಾಜಕೀಯದಲ್ಲಿ ಭಾಗವಹಿಸಿ ಜವಾಬ್ದಾರಿಯನ್ನು ತೆಗೆದುಕೊಳ್ಳದ ಹೊರತು ನಮ್ಮ ಕನಸಿನ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ದೇಶದ ಪ್ರತಿ ಮಗುವಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಕನಸು ಆಮ್ ಆದ್ಮಿ ಪಾರ್ಟಿಯ ರಾಜಕಾರಣದಿಂದ ಮಾತ್ರ ಸಾಧ್ಯ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಮ್ ಆದ್ಮಿ ಪಾರ್ಟಿ ಸೇರಿ ಈ ಕನಸನ್ನು ನನಸು ಮಾಡಬೇಕೆಂದು ಕೋರಿದರು. 
ಸೌಂದರ್ಯ ಮಂಜಪ್ಪ ಹಾಗೂ ಅವರ ಮಗ ಕೀರ್ತನ್ ಕುಮಾರ್‌ರವರ ಪಕ್ಷ ಸೇರ್ಪಡೆಗೆ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ ರಾವ್, ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಹರ್ಷ ವ್ಯಕ್ತಪಡಿಸಿದರು ಎ ಎ ಎ ಪಿ ಕಾರ್ಯಕರ್ತರು ಹಾಗೂ ಹಲವಾರು ಬೆಂಬಲಿಗರು ಸೇರಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News