ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಆರ್. ಸಿ .ಕಾಲೇಜಿನಲ್ಲಿ ಎರಡು ದಿನಗಳ ಕಾಲ ಅಂತರ ಕಾಲೇಜು ವಾಣಿಜ್ಯ ಮತ್ತು ಕಾರ್ಯ ನಿರ್ವಹಣಾ ಮತ್ತು ಸಾಂಸ್ಕೃತಿಕ ಹಬ್ಬ "" ಬೆಂಗಳೂರು: ನಗರದ ಹೃದಯ ಭಾಗದಲ್ಲಿ ಇರುವ ಪ್ರತಿಷ್ಠಿತ ಕಾಲೇಜ್ ದಲ್ಲಿ ಒಂದಾದ ಸರ್ಕಾರಿ ರಾಮ್ ನಾರಾಯಣ್ ಚೆಲ್ಲಾರಾಂ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಅಂತರ ಕಾಲೇಜು ವಾಣಿಜ್ಯ ಮತ್ತು ಕಾರ್ಯನಿರ್ವಹಣಾ ಸಾಂಸ್ಕೃತಿಕ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ಈ 2 ದಿನದ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಶಿವಾಜಿನಗರದ ಶಾಸಕ ರಿಜ್ವಾನ್ ಹರ್ಷದ್ ಮತ್ತು ನಂದಗೋಪಾಲ .ಕೆ. ನಿರ್ದೇಶಕರು ಎ .ಎಸ್. ಕೆ. ಟ್ರೇಡ್ ಅಂಡ್ ಎಕ್ಸಿಬಿಷನ್ ಖ್ಯಾತ ಗಾಯಕ ಹಾಗೂ ನಟ ಚಂದನ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ಚಂದ್ರಶೇಖರ್ ಬಿ ದೀಪ ಬೆಳಗುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಿವಾಜಿನಗರದ ಶಾಸಕ ರಿಜ್ವಾನ್ ಹರ್ಷದ್ ವಿದ್ಯಾರ್ಥಿಗಳಿಗೆ ನನ್ನ ವಿದ್ಯಾರ್ಥಿಯ ಜೀವನವು ಇಂತಹ ಹಬ್ಬಗಳು ಬಂದಾಗ ನಾನು ಬಹಳ ಸಂತೋಷವಾಗಿ ಖುಷಿಯಾಗಿ ಕಳೆದೆ ವಿದ್ಯಾರ್ಥಿಯ ಜೀವನ ಬಹಳ ಮುಖ್ಯ ಘಟ್ಟ ಹಾಗಾಗಿ ನಿಮ್ಮ ಮುಂದಿನ ಉತ್ತಮ ಸಮಾಜ ನಿರ್ಮಾಣವಾಗಲಿ ಮತ್ತು ಸಮಾಜಕ್ಕೆ ಬೆಳಕು ನೀಡುವಂತದ್ದಾಗಲಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು ಈ ಸಂದರ್ಭದಲ್ಲಿ ಖ್ಯಾತ ಮತ್ತು ನಟ ಚಂದನ್ ಶೆಟ್ಟಿ ರವರು ಈ ಕಾಲೇಜಿನ ವಿದ್ಯಾರ್ಥಿಗಳಿಗೆ ನಾನು ಕೊನೆಯ ನಿಮ್ಮ ಹಾಗೆ ವಿದ್ಯಾರ್ಥಿಯಾಗ ಕೊನೆಯ ಬೆಂಚ್ ನಲ್ಲಿ ಕೂತು ಪಾಠವನ್ನು ಹಾಲಿಸುತ್ತಿದ್ದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಾನು ಮೊದಲನೇ ಹಾಗಿದೆ ನನಗೆ ಜ್ಞಾನವನ್ನು ಕೊಟ್ಟಿರುವಂತಹ ನನ್ನ ಶಿಕ್ಷಕರ ವೃಂದಕ್ಕೆ ಕೋಟಿ ಕೋಟಿ ನಮಸ್ಕಾರಗಳು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು ಹಾಗೆ ಹಬ್ಬಕ್ಕೆ ಮೆರುಗನ್ನ ತಂದುಕೊಟ್ಟರು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಶೇಖರ್ .ಬಿ. ಈ ಎರಡು ದಿನಗಳ ಕಾಲ ಅಂತರ್ ಕಾಲೇಜುಗಳು ವಾಣಿಜ್ಯ ಮತ್ತು ಕಾರ್ಯ ನಿರ್ವಹಣಾ ಮತ್ತು ಸಾಂಸ್ಕೃತಿಕ ಹಬ್ಬದಲ್ಲಿ ಸುಮಾರು 42 ಕಾಲೇಜುಗಳು 110 ತಂಡಗಳು ಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾಗಡಿ ರೋಲಿಂಗ್ ಟ್ರೋಪಿ ಪ್ರಶಸ್ತಿಯ ಕಿರೀಟವನ್ನು ತನ್ನದಾಗಿಸಿಕೊಂಡಿದೆ ಈ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೂ ಬೋಧಕರಿಗೂ ಪಾಲ್ಗೊಂಡಿದ್ದಕ್ಕೆ ತನ್ನ ತಮ್ಮ ಚಿರಋಣಿ ಎಂದರು ಈ ವಿದ್ಯಾರ್ಥಿಯ ಪ್ರತಿಭಾವಂತ ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ಕಲೆ ನಮ್ಮ ನಾಡಿಗೆ ನಮ್ಮ ದೇಶಕ್ಕೆ ಬಹಳಷ್ಟು ಮುಖ್ಯ ಏಕೆಂದರೆ ಸಾಹಿತ್ಯ ಹುಟ್ಟುವುದು ಇಂಥ ಒಂದು ಕಾರ್ಯಕ್ರಮದಲ್ಲಿ ಆ ಸಾಹಿತ್ಯದ ಮಹತ್ವ ನಮಗೆ ತಿಳಿದುಬರುವುದು ಇಂತಹ ಕಾರ್ಯಕ್ರಮಗಳು ಎಲ್ಲಾ ಕಾಲೇಜು ಮಟ್ಟದಲ್ಲಿ ನಡೆಯುವಂತದ್ದಾಗಬೇಕು ಎಂದರು ಹಾಗೆ ಮತ್ತೊಬ್ಬ ಮುಖ್ಯ ಅತಿಥಿ ಜಂಟಿ ನಿರ್ದೇಶಕರು ಅಕಾಡೆಮಿಕ್ ಮತ್ತು ಸಾರ್ವಜನಿಕ ಸಂಬಂಧಾಧಿಕಾರಿ ಯಾದ ಸಚಿತ ಬೋಪಯ್ಯ ಶಿಕ್ಷಣ ಇಲಾಖೆ ಇವರು ವಿದ್ಯಾರ್ಥಿಗಳು ಮುಂದಿನ ಸಮಾಜದ ಬೆಳವಣಿಗೆಯ ಅಭಿವೃದ್ಧಿಗೆ ಮತ್ತು ಉತ್ತಮ ಸಮಾಜ ಕಟ್ಟಲು ಒಳ್ಳೆಯ ವ್ಯಕ್ತಿಗಳು ಉನ್ನತ ಅಭ್ಯಾಸ ಉನ್ನತ ಮಟ್ಟದ ತಿಳುವಳಿಕೆ ಬೇಕಾಗಿರುವುದರಿಂದ ಕಲೆ ಮತ್ತು ಸಾಂಸ್ಕೃತಿಕ ಕ್ರೀಡೆ ಹಲವಾರು ವಿಷಯಗಳನ್ನ ತಿಳಿದುಕೊಂಡಾಗ ಉತ್ತಮ ಸಮಾಜವನ್ನು ಕಟ್ಟಲು ಇಂಥ ವಿದ್ಯಾರ್ಥಿಗಳು ಸಮಾಜಕ್ಕೆ ಬಹಳ ಮುಖ್ಯ ಎಂದರು ಈ ಸಂದರ್ಭದಲ್ಲಿ ಸಿನಿಮಾ ನಟರಾದ ಶಿವರಾಜ್ ಕೆಆರ್ ಪೇಟೆ ಮತ್ತು ನಯನ ಶರತ್ ಹಾಸ್ಯ ಮತ್ತು ಡೈಲಾಗ್ ಹೇಳುವ ಮೂಲಕ ಇಡೀ ವೇದಿಕೆ ಮುಂಭಾಗದಲ್ಲಿ ವಿದ್ಯಾರ್ಥಿಗಳಿಗೆ ರಂಜಿಸಿದರು ಈ ಕಾರ್ಯಕ್ರಮದ ಸಂಚಾಲಕರಾದ ಡಾ. ವಸೀಹ ಪಿರ ದೋಸ್ತ್ ಮತ್ತು ಪ್ರೇಮಾವತಿ ಎಸ್ ಕೆ ಮತ್ತು ಕಾಲೇಜಿನ ಎಲ್ಲ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು
ಪ್ರಸನ್ನ ಕುಮಾರ್ ಜಿಟಿ ವರದಿಗಾರರು