ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಸರ್ಕಾರಿ ಆರ್ ಸಿ ಕಾಲೇಜಿನಲ್ಲಿ ಒಂದು ದಿನದ ಕಾರ್ಯಗಾರವನ್ನು ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಲಾಗಿತ್ತು
ಬೆಂಗಳೂರು :ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ಆರ್‌ಸಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಂಗ್ಲ ಭಾಷಾ ವಿಭಾಗದಿಂದ ಕಮ್ಯುನಿಕೇಷನ್ ಇಂಟಲಿಜೆನ್ಸ್ ದ ಸ್ಕಿಲ್ ಆಫ್ ದಿ ಫ್ಯೂಚರ್ ಒಂದು ದಿನದ ಕಾರ್ಯಗಾರವನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು .
ಸಂಪನ್ಮೂಲ ವ್ಯಕ್ತಿಯಾಗಿ ನೋವಾ ಇನ್ಫಾರ್ಮೇಶನ ಕಂಪನಿಯ ಕೌಶಲ್ಯ ನಿರ್ವಹಣಾ ಶಾಖೆ ಮುಖ್ಯಸ್ಥ ಶ್ರೀ ಹರಿ ಚರಣ್ ರವರು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಆಗಬಹುದಾದ ಆವಿಷ್ಕಾರಗಳು, ಉದ್ಭವಾಗುವ ಉದ್ಯೋಗ ಅವಕಾಶಗಳ ಕುರಿತು ಮಾಹಿತಿ ನೀಡಿದರು, ರೂಡಿಸಿಕೊಳ್ಳಬೇಕಾದ ಸಂವಹನ ಮತ್ತು ಕೌಶಲ್ಯತೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಕಾರ್ಯಗಾರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಶೇಖರ್ ಉದ್ಘಾಟಿಸಿದರು ನಂತರ ಅವರು ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯತೆ ಮತ್ತು ಆಂಗ್ಲ ಭಾಷೆಯ ಜಾಗತಿಕ ಬೇಡಿಕೆಯ ಕುರಿತು ಬೆಳಕು ಚೆಲ್ಲಿದರು .ಈ ಕಾರ್ಯಗಾರದಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ನರಸಿಂಹರಾಜು .ಕೆ. ಡಾ. ಬಸವರಾಜು ಡಾ. ಹರೀಶ್ .ಎಂ.ಜಿ. ಪ್ರೊ. ಆಶಾ ಕೆ. ಆರ್. ಮತ್ತು ಪ್ರಸನ್ನ ಕುಮಾರ್ .ಜಿ.ಟಿ. ಹಾಗೂ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.